11th May 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ ರಚಿಸಿರುವ ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ಬದಲಾಗಿ ಲೋಕಸಭಾ ಕ್ಷೇತ್ರವಾರು ದಿಶಾ ಸಮಿತಿಗಳನ್ನು ರಚಿಸಲು ಕರ್ನಾಟಕದ ಹಲವಾರು ಲೋಕಸಭಾ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ತಾಲ್ಲೋಕುವಾರು ಕೆಡಿಪಿ ಸಮಿತಿಗಳ ಬದಲಾಗಿ ವಿಧಾನಸಭಾ ಕ್ಷೇತ್ರವಾರು ಕೆಡಿಪಿ ಸಮಿತಿಗಳನ್ನು  ರಚಿಸಲು ಕರ್ನಾಟಕದ ಹಲವಾರು ವಿಧಾನಸಭಾ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಎರಡು ಸಮಿತಿಗಳು ಅವೈಜ್ಞಾನಿಕವಾಗಿವೆ? ಕೆಲವು ಸಂಸದರ ಮತ್ತು ಕೆಲವು ಶಾಸಕರ ಅಧಿಕಾರಕ್ಕೆ ಕುತ್ತು ಆಗಿವೆಯಂತೆ. ಈ ಬಗ್ಗೆ ರಾಜ್ಯದ ಯೋಜನಾ ಇಲಾಖೆ ಮತ್ತು ಕೇಂದ್ರ ಸರ್ಕಾರದ ನೀತಿ ಆಯೋಗದ ಉನ್ನತ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುವುದು ಅಗತ್ಯವಾಗಿದೆ.

ಈ ಬಗ್ಗೆ ರಾಜ್ಯದ 28 ಜನ ಲೋಕಸಭಾ ಸದಸ್ಯರ ಮತ್ತು ರಾಜ್ಯದ ನಗರ ವಿದಾನಸಭಾ ಸದಸ್ಯರ ಅಭಿಪ್ರಾಯ ಸಂಗ್ರಹ ಕಾರ್ಯವನ್ನು ರೂಪಿಸಲು ಕೆಲವು ಸಂಘಟನೆಗಳು ಮುಂದೆ ಬಂದಿವೆ.

 ಕೇಂದ್ರ ಸರ್ಕಾರದ ಅನುದಾನದ ಯುಟಿಲೈಸೇಷನ್ ಸರ್ಟಿಫಿಕೇಟ್(ಯುಸಿ) ಮತ್ತು ಉಳಿದ ಕಂತಿನ ಹಣ ಬಿಡುಗಡೆ ಮಾಡಲು ದಿಶಾ ಸಮಿತಿ ನಿರ್ಣಯ ಕಡ್ಡಾಯ ಮಾಡಿದರೆ ಮಾತ್ರ ದಿಶಾ ಸಮಿತಿಗಳ ರಚನೆ ಅರ್ಥ ಬರುತ್ತದೆ. ಇದೇ ರೀತಿ ಮುಂದುವರೆದರೆ,  ಹಲ್ಲು ಕಿತ್ತ ಹಾವಿನಂತಾಗಿದೆ, ದಿಶಾ ಸಮಿತಿ ನಿರ್ಣಯಗಳಿಗೆ ಬೆಲೆ ಇಲ್ಲದಂತಾಗುತ್ತದೆ ಎಂದು ಹಲವಾರು ಸಂಸದರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಈ ಬಗ್ಗೆ ಆಸಕ್ತರು ಸಂಪರ್ಕಿಸಲು ಮನವಿ.