TUMAKURU:SHAKTHIPEETA FOUNDATION
ಯಾರೋ ಪುಣ್ಯಾತ್ಮರು ಶಿವಮೊಗ್ಗ ಜಿಲ್ಲೆಯಲ್ಲಿ 150 ಟಿಎಂಸಿ ಅಡಿ ನೀರಿನ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯ, 33 ಟಿಎಂಸಿ ಅಡಿ ನೀರಿನ ಸಾಮರ್ಥ್ಯದ ಮಾಣಿ ಜಲಾಶಯ, 3 ಟಿಎಂಸಿ ಅಡಿ ನೀರಿನ ಸಾಮರ್ಥ್ಯದ ಚಕ್ರ ಜಲಾಶಯ ಮತ್ತು 7 ಟಿಎಂಸಿ ಅಡಿ ನೀರಿನ ಸಾಮರ್ಥ್ಯದ ಸಾವಯಕ್ಲು ಜಲಾಶಯ ಸೇರಿದಂತೆ ಸುಮಾರು 193 ಟಿಎಂಸಿ ಅಡಿ ನೀರಿನ ಡ್ಯಾಂಗಳನ್ನು ಕಟ್ಟಿದ್ದಾರೆ.
‘ಅಮೃತಕ್ಕೆ ಸಮನಾದ ಈ ಪರಿಶುದ್ಧ ನೀರನ್ನು ವಿದ್ಯುತ್ ಉತ್ಪಾದಿಸಿ ಸಮುದ್ರಕ್ಕೆ ಬಿಡುತ್ತಿದ್ದಾರೆ, ಕುಡಿಯಲು ನೀರಿಗಾಗಿ ಜನಗಳು ಪರದಾಡುತ್ತಿದ್ದಾರೆ, ನಮ್ಮ ಸರ್ಕಾರವನ್ನು ಆಳಿದ ಎಲ್ಲಾ ಪಕ್ಷಗಳ ಸರ್ಕಾರಗಳು ಆಮೆ ವೇಗದಲ್ಲಿ ಸಾಗುತ್ತಿವೆ ’
ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ನವರು ಈ ನೀರನ್ನು ಬೆಂಗಳೂರಿಗೆ ಕೊಂಡೊಯ್ಯಲು ಯೋಜನೆ ರೂಪಿಸಿದ್ದರು, ನಂತರ ಶ್ರೀ ತ್ಯಾಗರಾಜ್ ಕಮಿಟಿ, ಶ್ರೀ ಬಜಾಜ್ ಕಮಿಟಿಯವರು ಈ ಬಗ್ಗೆ ಶಿಫಾರಸ್ಸು ಮಾಡಿದ್ದರು.
ಈಗ ಈ ಡ್ಯಾಂಗಳ ಆದ್ಯಯನವನ್ನು ತುಮಕೂರಿನಲ್ಲಿ ವಾಸವಿರುವ ಶಿವಮೊಗ್ಗ ಜಿಲ್ಲೆಯ ಅಂಜನಾಪುರ ಗ್ರಾಮದ ನಿವೃತ್ತ ಎಸ್.ಇ ಶ್ರೀ ಹರೀಶ್ ರವರು ಮಾಡಿ, ಒಂದು ಒಳ್ಳೆಯ ಕಡಿಮೆ ವೆಚ್ಚದ ಯೋಜನೆ ರೂಪಿಸಿದ್ದಾರೆ, ಅವರ ಪ್ರಕಾರ 50 ವರ್ಷದ ನೀರಿನ ಲೆಕ್ಕ ನೋಡಿದರೆ ಸುಮಾರು 20 ವರ್ಷಗಳು ತುಂಬಿ ಹರಿದಿವೆಯಂತೆ.
ಈ ನಿರನ್ನು ಹಾಲಿ ಇರುವ ಭಧ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಯ ಕಾಲುವೆಗಳಲ್ಲಿ ಬೆಂಗಳೂರಿಗೆ ಹರಿಸ ಬಹುದಾಗಿದೆಯಂತೆ. ಕೇವಲ 25 ಕೀಮೀ ಪೈಪ್‍ಲೈನ್ ಅನ್ನು ಲಿಂಗನಮಕ್ಕಿಯಿಂದ ಕುಶಾವತಿಯವರಿಗೆ ಹಾಕಿ, 10 ಕೀಮೀ ಟನಲ್ ಮಾಡಿದರೆ ಸಾಕಂತೆ. ಭಧ್ರಾಮೇಲ್ದಂಡೆ ವ್ಯವಸ್ಥೆಯಿಂದ ತುಮಕೂರು ಜಿಲ್ಲೆಯವರಿಗೂ ನೀರು ಹರಿಯಲಿದೆ.
ನಂತರ ತುಮಕೂರು ಜಿಲ್ಲೆಯಲ್ಲಿ ಕೇವಲ 18 ಕೀಮೀ ಪೈಪ್‍ಲೈನ್ ಹಾಕಿದರೆ, ಭಧ್ರಾ ಮೇಲ್ದಂಡೆ ಕಾಲುವೆಯಿಂದ ಎತ್ತಿನಹೊಳೆ ಕಾಲುವೆಗೆ ನೀರು ಹರಿಯಲಿದೆಯಂತೆ. ಇಷ್ಟು ಕಾಮಗಾರಿ ಮಾಡಲು ಸುಮಾರು ರೂ 10000 ಕೋಟಿ ವೆಚ್ಚ ಆಗಲಿದಿಯಂತೆ, ಮತ್ತೆ ತುಮಕೂರು ಜಿಲ್ಲೆಯ ಜಾಲಗುಣಿಯಲ್ಲಿ ಸುಮಾರು 50 ಟಿಎಂಸಿ ಅಡಿ ನೀರಿನ ಸಾಮಾಥ್ರ್ಯದ ಡ್ಯಾಂ ನಿರ್ಮಾಣ ಮಾಡಲು ಸುಮಾರು 10000 ಕೋಟಿ ವೆಚ್ಚ ಮಾಡಿದರೆ ನೀರು ಸಂಗ್ರಹವಾಗಲಿದೆ.
ಭಧ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಯಲ್ಲಿ ಜೂನ್ 15 ರಿಂದ ಅಕ್ಟೋಬರ್ 31 ರವರೆಗೆ ಕೇವಲ 130 ದಿವಸ ನೀರು ಹರಿಯಲಿದೆ. ಉಳಿದಂತೆ ಈ ಸಿಸ್ಟಂ ನಿದ್ದೆ ಹೊಡೆಯುತ್ತಿದೆ. ಈ ವೇಳೆಯಲ್ಲಿ ಳಿಂಗನಮಕ್ಕಿಯಿಂದ ಇದೇ ಕಾಲುವೆಗಳಲ್ಲಿ ಸುಮಾರು 60 ಟಿಎಂಸಿ ಅಡಿ ನೀರು ಸರಾಗವಾಗಿ ಹರಿಯಲಿದೆ.
‘ಎತ್ತಿನಹೊಳೆ ಯೋಜನೆಯಡಿಯಲ್ಲಿ ಒಂದು ಟಿಎಂಸಿ ಅಡಿ ನೀರಿಗೆ ರೂ 1500 ಕೋಟಿ ವೆಚ್ಚ ಆಗಲಿದೆ. ಈ ಯೋಜನೆಯಡಿಯಲ್ಲಿ ಸುಮಾರು ಒಂದು ಟಿಎಂಸಿ ಅಡಿ ನೀರಿನ ಯೋಜನೆಗೆ ರೂ 350 ಕೋಟಿ ವೆಚ್ಚ ಆಗಲಿದೆ.’
ಮೊದಲು ಜಲವಿದ್ಯುತ್ ಅಗತ್ಯವಿತ್ತು, ಇಂದು ಹಲವಾರು ಮೂಲದಲ್ಲಿ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ, ಭಧ್ರಾಮೇಲ್ದಂಡೆ, ಎತ್ತಿನಹೊಳೆ ಮತ್ತು ಹೇಮಾವತಿ ಕಾಲುವೆ ಮೇಲೆ ರೂಪ್ ಟಾಪ್ ಸೋಲಾರ್ ಹಾಕಿ ಮತ್ತು ಶರಾವತಿ ಡ್ಯಾಂ ಸುತ್ತ ವಿಂಡ್ ಮಿಲ್ ಹಾಕುವ ಮೂಲಕ ಶರಾವತಿ ನೀರಿನಲ್ಲಿ ಉತ್ಪಾದನೆ ಮಾಡುವಷ್ಟು ವಿದ್ಯುತ್ ಉತ್ಪಾದನೆ ಮಾಡಬಹುದು, ಆದರೂ ಕಾಲುವೆಯ ಉದ್ದ, ಅಗಲ ನಿಖರವಾಗಿ ಗೊತ್ತಾದ ಮೇಲೆ ಹೇಳಬಹುದು ಎನ್ನುತ್ತಾರೆ ಕೇಂದ್ರ ಸರ್ಕಾರದ ಐಎಎಸ್ ಅಧಿಕಾರಿ ಶ್ರೀ ಆನಂದ್ ರಾವ್ ಅವರು.
ಈ ಬಗ್ಗೆ ನಿನ್ನೆ (07.01.2022) ಬೆಂಗಳೂರಿನ ಜಲಮಂಡಳಿಗೆ ಹೋಗಿ ಸಮಾಲೋಚನೆ ನಡೆಸಿದಾಗ 2019 ರಲ್ಲಿ ಉಪಮುಖ್ಯಮಂತ್ರಿಯವರು ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್ ಒಂದು ಸಭೆ ನಡೆಸಿದ್ದಾರೆ. ಸಚಿವ ಸಂಪುಟದ ಮುಂದೆ ವಿಷಯ ಮಂಡಿಸಲು ನಿರ್ಣಯ ಮಾಡಿದ್ದಾರೆ.
ನಂತರ ಆಡಳಿತಕ್ಕೆ ಬಂದ ಸರ್ಕಾರಗಳು ನಿದ್ದೆ ಹೊಡೆಯುತ್ತಿವೆ ಎಂದರೂ ತಪ್ಪಲಾಗಾರದು. ಈ ಬಗ್ಗೆ ಮಾನ್ಯಮುಖ್ಯ ಮಂತ್ರಿಯವರು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಶ್ರೀ ಬಸವರಾಜ್ ಬೊಮ್ಮಾಯಿರವರು ಏನು ಮಾಡುತ್ತಾರೋ ಕಾದು ನೋಡಬೇಕಾಗಿದೆ.
ಬೆಂಗಳೂರು ನಗರಕ್ಕೆ ಮತ್ತು ಬಯಲು ಸೀಮೆಯ ಮನೆ ಮನೆಗೆ ನಲ್ಲಿ ಹಾಕುವ ಜಲಜೀವನ್ ಮಿಷನ್ ಯೋಜನೆಗೆ ಇದೊಂದು ಒಳ್ಳೆಯ ಯೋಜನೆ
ಮೇಕೆದಾಟು ಹೋರಾಟ ಮಾಡುವ ಕಾಂಗ್ರೆಸ್ ನಾಯಕರಿಗೆ ಈ ಯೋಜನೆ ಬೇಕಿಲ್ಲವೇ?