21st December 2024
Share

TUMAKURU:SHAKTHIPEETA FOUNDATION

ನೀರಾವರಿ ತಜ್ಞ ಶ್ರೀ ಕ್ಯಾಪ್ಟನ್ ರಾಜರಾವ್ ರವರು 1924 ರ ಲ್ಲಿಯೇ ಮೇಕೆದಾಟು ಪ್ರಸ್ತಾವನೆ ಇತ್ತು. ಅಲ್ಲಿಂದ ಇಲ್ಲಿಯವರೆಗೂ ಆಡಳಿತ ನಡೆಸಿದ ಸರ್ಕಾರಗಳು ಈ ಬಗ್ಗೆ ಗಮನ ಹರಿಸಿಲ್ಲ, ನ್ಯಾಯಾವಾದಿಗಳು ಈ ಬಗ್ಗೆ ಚರ್ಚೆ ಮಾಡಿಲ್ಲ, ಇಂಜಿನಿಯರ್ ಗಳು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿಲ್ಲ ಎಂಬ ನುಡಿ ಮುತ್ತುಗಳನ್ನು ಹೇಳುವ ಮೂಲಕ ಮೇಕೆದಾಟು ಇತಿಹಾಸವನ್ನು ರಾಜ್ಯದ ಜನತೆ ಮುಂದೆ ಇಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

 ‘ರಾಜರಾವ್ ರವರೇ ನೀವೂ ರಾಜ್ಯ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಇಂಜಿನಿಯರ್ ಆಗಿದ್ದೀರಿ, ಸಮಯದಲ್ಲಿ ವಿಚಾರವನ್ನು ಸರ್ಕಾರದ ಮತ್ತು ವಕೀಲರುಗಳ ಗಮನಕ್ಕೆ ಏಕೆ ತರಲಿಲ್ಲ? ಅಥವಾ ತಂದಿದ್ದಲ್ಲಿ ಜನತೆಗೆ ಮಾಹಿತಿ ನೀಡಿ, ಏನೇ ಆಗಲಿ ಈಗ ನೀವೂ ಹೇಳಿರುವುದು ಒಳ್ಳೆಯ ಸಮಯ ಮತ್ತು ಸಾಂದರ್ಭಿಕವಾಗಿದೆ ಎನ್ನುತ್ತಾರೆ ಶ್ರೀ ಟಿ.ಆರ್.ರಘೋತ್ತಮರಾವ್ ರವರು’.

1924 ರ ಒಪ್ಪಂದ ಈಗ ಮುಗಿದು ಹೋದ ಅಧ್ಯಾಯ, ಈಗ ಆನೇಕ ಬದಲಾವಣೆಗಳು, ಹೊಸ ತೀರ್ಪುಗಳು ಬಂದಿವೆ, ಈಗ ಮೇಕೆದಾಟು ಯೋಜನೆಗೆ ತೀವೃತರವಾದ ಹೋರಾಟವನ್ನು ಕೇಂದ್ರ ಸರ್ಕಾರದಲ್ಲಿ ನಮ್ಮ ಸರ್ಕಾರ ಮಾಡಬೇಕಿದೆ.

ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆ ಅಧ್ಯಯನ ಮಾಡಲು ಅನುಮತಿ ನೀಡಬಹುದಿತ್ತು.ಇದಕ್ಕೇನು ನ್ಯಾಯಾಲಯದ ತಡೆಯಾಜ್ಞೆ ಆದೇಶ ಇಲ್ಲ, ಆದರೇ ಬೇರೆ ವಿಚಾರಗಳ ಕೇಸಗಳನ್ನು ತಳುಕುಹಾಕಿ, ಕೇಂದ್ರ ಸರ್ಕಾರ ಆ ವಿಚಾರ ಬಗೆಹರಿದರೆ ನಾವು ಅನುಮತಿ ನೀಡುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ, ನ್ಯಾಯಾಲಯವೇ ಎಲ್ಲದಕ್ಕೂ ಪ್ರಮುಖವಾಗಿರುವಾಗ ನ್ಯಾಯಾಲಯದಲ್ಲಿಯೇ ಗೆಲ್ಲುವ ತಂತ್ರಗಾರಿಕೆ ಮುಖ್ಯ ಎನ್ನುತ್ತಾರೆ ಹೆಸರು ಹೇಳದೆ ಇರುವ ಉನ್ನತ ಅಧಿಕಾರಿಯೊಬ್ಬರು.

ಕರ್ನಾಟಕ ರಾಜ್ಯ ಸರ್ಕಾರ ಮತ್ತು ಬಿಜೆಪಿಯವರು ಈ ವಿಚಾರವಾಗಿ ಕೇಂದ್ರ ಸರ್ಕಾರದ ಜೊತೆ ನಿಕಟ ಸಂಪರ್ಕದಲ್ಲಿದ್ದುಕೊಂಡು ಸಮಾಲೋಚನೆ ನಡೆಸುತ್ತಿದ್ದಾರೆ. ಅವರೇನು ಕೈಕಟ್ಟಿಕುಳಿತಿಲ್ಲ. ಕೇಂದ್ರ ಬಿಜೆಪಿ 25 ಲೋಕಸಭಾ ಸದಸ್ಯರನ್ನು ನೀಡಿದ ಕರ್ನಾಟಕದ ಪರ ನಿಲ್ಲವುದಕ್ಕಿಂತ, ತಮಿಳುನಾಡಿನ ಪರ ಬಿಜೆಪಿ ಮೃದು ದೋರಣೆ ತಳೆದಿದೆ, ಮುಂದೆ ಕರ್ನಾಟಕವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರಬಾರದು, ಎನ್ನುವುದು ಹೆಸರು ಹೇಳಲು ಇಚ್ಚಿಸಿದ ಬಿಜೆಪಿ ನಾಯಕರೊಬ್ಬರ  ಅನಿಸಿಕೆ.

ಮೇಕೆದಾಟು ರಾಜಕಾರಣ ಎಂದಾದರೂ ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರದ ಗಮನ ಸೆಳೆಯುವ ಕೆಲಸ ಆಗಬೇಕಿತ್ತು. ಕಾಂಗ್ರೆಸ್‍ನವರು ಅದನ್ನು ಮಾಡುತ್ತಿದ್ದಾರೆ. ಇದು ವಿರೋಧ ಪಕ್ಷದ ಕರ್ತವ್ಯವೂ ಹೌದು, ಆದರೇ ಕೊರೊನಾ ಆದೇಶ ಉಲ್ಲಂಘಿಸಿ ಮಾಡಬಾರದಿತ್ತು ಎನ್ನುವುದು ಕೆಲವರ ವಾದ.

ಅರೇ ಮೋದಿಯವರೇ Rally ಮಾಡುವಾಗ ನಾವ್ಯಾಕೆ ಮಾಡಬಾರದು ಎನ್ನುವುದು ಕಾಂಗ್ರೇಸ್ ನವರ ವಾದ. ಏನೇ ಆದರೂ ನಮ್ಮ ರಾಜ್ಯಕ್ಕೆ ಅನೂಕೂಲವಾದರೆ ಸಾಕು?