12th October 2024
Share

TUMAKURU:SHAKTHIPEETA FOUNDATION

ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಜಲಧಾರೆ  ಅಭಿಯಾನ ಘೋಷಣೆಗೆ ಸ್ವಾಗತ. 51 ನದಿ ಮೂಲಗಳಿರುವ ಸ್ಥಳಗಳಿಗೆ ಭೇಟಿ ನೀಡುವುದಾಗಿಯೂ ಘೋಷಣೆ ಮಾಡಿದ್ದಾರೆ. ಜೊತೆಗೆ ಅವರೊಂದು ಮಹತ್ವದ ಮಾಹಿತಿ ನೀಡಿದ್ದಾರೆ.

ನಾನು ಕಾಂಗ್ರೆಸ್‍ನವರ ಪಾದಯಾತ್ರೆ ಕುರಿತು ಮೇಕೆದಾಟು ಒಂದೇ ಸಾಕೆ? ಎಂಬ ಬರಹದ ನಂತರ ಅವರು, ರಾಜ್ಯದ ಎಲ್ಲ ನದಿಗಳಲ್ಲಿ ಲಭ್ಯವಿರುವ ನೀರಿನ ಬಳಕೆಗೆ ಸಮಗ್ರಯೋಜನೆ ರೂಪಿಸಲಾಗಿದೆ. ಪ್ರತಿ ಮನೆಗೂ ಕುಡಿಯುವ ನೀರು ಮತ್ತು ರಾಜ್ಯದ ಉದ್ದಗಲುಕ್ಕೂ ಕೃಷಿ ಚಟುವಟಿಕೆ ನೀರಾವರಿಗೆ ಜೆಡಿಎಸ್ ಯೋಜನೆ ರೂಪಿಸಿದೆ ಎಂದಿದ್ದಾರೆ. ನಿಜಕ್ಕೂ ರಾಜಕೀಯ ಪಕ್ಷಗಳ ಇಂಥಹ ಯೋಜನೆಗಳನ್ನು ರೂಪಿಸುವುದು ಬಹಳ ಒಳ್ಳೆಯ ಕೆಲಸ, ನನಗೂ ಖುಷಿಯಾಗಿದೆ.

ಕೇಂದ್ರ ಸರ್ಕಾರ ಕೋಟಿಗಟ್ಟಲೆ ವ್ಯಯಮಾಡಿ ಸಮಗ್ರ ಯೋಜನೆ ರೂಪಿಸಲು ಸೂಚಿಸಿದ್ದರೂ ಇದೂವರೆಗೂ ಅಡಳಿತ ನಡೆಸಿದ ರಾಜ್ಯ ಸರ್ಕಾರಗಳು ಈ ಯೋಜನೆ ರೂಪಿಸುವಲ್ಲಿ ವಿಫಲವಾಗಿವೆ. ಲೆಕ್ಕದ ಪುಸ್ತಕದಲ್ಲಿ ಮಾತ್ರ ಮಾಡಿದ್ದಾರೆ.

  1. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸಿದ್ಧಪಡಿಸಿರುವ ಡಿಸ್ಟ್ರಿಕ್ಟ್ ಇರ್ರಿಗೇಷನ್ ಪ್ಲಾನ್ ಮೌಲ್ಯ ಮಾಪನ ವರದಿ. 
  2. ಅಟಲ್ ಭೂಜಲ್ ಯೋಜನೆಯಡಿ ಮಾಡುತ್ತಿರುವ ವಾಟರ್ ಆಡಿಟ್, ವಾಟರ್ ಬಡ್ಜೆಟ್ ಮತ್ತು ವಾಟರ್ ಸ್ಟ್ರಾಟಜಿ ಯೋಜನೆ ಮೌಲ್ಯಮಾಪನ ವರದಿ. 
  3. ಜಲಜೀವನ್ ಮಿಷನ್ ಯೋಜನೆಯಡಿ ಮಾಡಬೇಕಿರುವ ವಿಲೇಜ್ ಆಕ್ಷನ್ ಪ್ಲಾನ್ ಮೌಲ್ಯ ಮಾಪನ ವರದಿ. 
  4. ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಆದೇಶ ಮಾಡಿರುವ ರಾಜ್ಯದ ನದಿ ಜೋಡಣೆ, ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಕಡತ ಮೌಲ್ಯ ಮಾಪನ ವರದಿ. 
  5. ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ 2019 ರಿಂದ ನಿರ್ಣಯ ಕೈಗೊಂಡಿರುವ ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ನಿರ್ಣಯ ಮತ್ತು ಕಡತಗಳ ಪರಿಶೀಲನೆ ಮೌಲ್ಯ ಮಾಪನ ವರದಿ. 
  6. ಕರ್ನಾಟಕ ರಾಜ್ಯ ಸರ್ಕಾg, ಜಲಸಂಪನ್ಮೂಲ ಇಲಾಖೆ,ಸಣ್ಣ ನೀರಾವರಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರಗಳ ಮೌಲ್ಯ ಮಾಪನ ವರದಿ.
  7. ಡಾ.ಡಿ.ಎಂ.ನಂಜುಡಪ್ಪನವರ ವರದಿ ಸೇರಿದಂತೆ, ಎಲ್ಲಾ ನೀರಾವರಿ ತಜ್ಞರ ವರದಿಗಳ ಮೌಲ್ಯಮಾಪನ ವರದಿ.
  8. ರಾಜ್ಯ ಸರ್ಕಾರದ ಜಿಯೋಮೆಟಿಕ್ ಸೆಂಟರ್ ಮತ್ತು ಎಐಡಬ್ಲುಆರ್‍ಎಂ ಮೌಲ್ಯ ಮಾಪನ ವರದಿ. 
  9. ಇವುಗಳ ಜೊತೆಗೆ ನೀವು ಮಾಡಿಸಿರುವ ಸಮಗ್ರ ಯೋಜನೆ ತುಲನೆ ಮಾಡಿದರೆ. ಒಂದು ಅರ್ಥ ಬರುತ್ತದೆ.

ತಾವೂಮಾಡಿಸಿರುವ ವರದಿ ಬಗ್ಗೆ ಪಕ್ಷಾತೀತವಾಗಿ ಚರ್ಚೆ ನಡೆಯಲಿ. ನಿಮ್ಮ ವರದಿಯ ಸಾಧಕ-ಭಾಧಕಗಳ ಬಗ್ಗೆ  ಸರ್ಕಾರ ಮತ್ತು ವಿವಿಧ ರಾಜಕೀಯ ಪಕ್ಷಗಳ ಟೀಕೆ, ಟಿಪ್ಪಣೆ, ಸಂಘ ಸಂಸ್ಥೆಗಳ, ಪರಿಣಿತರ ಸಲಹೆಗಳನ್ನು ಸ್ವೀಕರಿಸಿ. ‘

ಇವೆಲ್ಲಾ ಮಾಹಿತಿ ಪಡೆದು, ನಂತರ ನಿಮ್ಮ ಯಾತ್ರೆ ಆರಂಭಿಸಬಹುದು ಅಥವಾ 51 ನದಿಗಳ ಸ್ಥಳದಲ್ಲಿ ಆಯಾ ನದಿ ನೀರಿನ ಬಗ್ಗೆ ಸರ್ಕಾರಗಳ ನಿಲುವು ಮತ್ತು ನಿಮ್ಮ ಪಕ್ಷದ ನಿಲುವಿನ ಬಗ್ಗೆ ಚರ್ಚೆ ನಡೆಸಬಹುದು.

‘ಇದೊಂದು ಸಾರ್ವತ್ರಿಕ ದಾಖಲೆಯಾಗಲಿದೆ’ ಎಂಬುದು ಕಳೆದ 25 ವರ್ಷಗಳ ನೀರಾವರಿ ಯೋಜನೆಗಳ ನನ್ನ ಅಧ್ಯಯನದ ಅನುಭವವನ್ನು ನಿಮ್ಮೋಂದಿಗೆ ಹಂಚಿಕೊಂಡಿದ್ದೇನೆ ಅಷ್ಟೆ. ತೀರ್ಮಾನ ನಿಮಗೆ ಬಿಟ್ಟಿದ್ದು ಸ್ವಾಮಿ!