TUMAKURU:SHAKTHIPEETA FOUNDATION
ರಾಜ್ಯ ಆಡಳಿತ ಸುಧಾರಣಾ ಆಯೋಗಕ್ಕೆ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಕಡತಗಳ ವಿಲೇವಾರಿ ಚುರುಕುಗೊಳಿಸಲು, ಇಲಾಖೆಗಳಿಗೆ ಶ್ರೇಯಾಂಕ ನೀಡಲು ಮಾನದಂಡ ಸಿದ್ಧಪಡಿಸಲು ಸೂಚಿಸಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ, ಆದರೇ ವಿಐಪಿ ಗಳ ಪತ್ರಗಳಿಗೆ ಗ್ರಹಣ ಹಿಡಿದಿದೆ.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:29.07.20219 ರಂದು ಪ್ರಧಾನಿಯವರಿಗೆ ಮತ್ತು ಜಲಶಕ್ತಿ ಸಚಿವರಿಗೆ ಪತ್ರಬರೆದಿದ್ದರು. ಈ ಪತ್ರಕ್ಕೆ ಪ್ರತಿಯಾಗಿ ಕೇಂದ್ರ ಸೆಂಟ್ರಲ್ ವಾಟರ್ ಕಮೀಷನ್ ನಿಂದ ದಿನಾಂಕ:16.10.2019 ರಂದು ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆದಿದ್ದಾರೆ. ಪತ್ರ ನೋಡಬಹುದು.
ಈ ಪತ್ರದ ಅನುಸರಣೆಯನ್ನು ನಾನು ಅಂದಿನಿಂದ ಮಾಡಿದರೂ, ಇದೂವರೆಗೂ ದೆಹಲಿಗೆ ಉತ್ತರ ಕಳುಹಿಸಲು ಸಾಧ್ಯಾವಾಗಿಲ್ಲ. ಅಪರಮುಖ್ಯ ಕಾರ್ಯದರ್ಶಿಯವರು, ಕಾರ್ಯದರ್ಶಿರವರು, ಅಂಡರ್ ಸೆಕ್ರೇಟರಿ ಎಲ್ಲರ ಬಳಿ ಈ ಬಗ್ಗೆ ಚರ್ಚಿಸಿದ್ದೇನೆ.
ವಿವಿಧ ನಿಗಮಗಳಲ್ಲಿ ಚರ್ಚೆ ಮಾಡಿದ್ದೇನೆ. ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಯವರೊಂದಿಗೂ ಚರ್ಚೆ ಮಾಡಿದ್ದೇನೆ. ಆದರೇ ಪತ್ರ ಮಾತ್ರ ಜಪ್ಪಯ್ಯ ಅಂದಿಲ್ಲ.
ಎಲ್ಲರೂ ನನಗೆ ಆತ್ಮೀಯರೇ, ಆದರೆ ಏನು ಮಾಡುವುದು ಎಂಬುದೇ ಅರ್ಥವಾಗುತ್ತಿಲ್ಲ.