16th April 2024
Share

TUMAKURU:SHAKTHIPEETA FOUNDATION

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಅಧ್ಯಕ್ಷತೆಯಲ್ಲಿ ದಿನಾಂಕ:29.10.2019 ರಂದು ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲೇ ಕೈಗೊಂಡಿದ್ದ ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ನಿರ್ಣಯ ಒಂದು ಹಂತಕ್ಕೆ ತಲುಪಿದೆ.

ಈ ನಿರ್ಣಯದ ಮೇರೆಗೆ ರಾಜ್ಯ ಜಲಸಂಪನ್ಮೂಲ ಸಚಿವರಾಗಿದ್ದ ಶ್ರೀ ರಮೇಶ್ ಜಾರಕಿಹೊಳೆರವರು, ಜಲಸಂಪನ್ಮೂಲ ಅಪರ ಮುಖ್ಯಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಆಗಿನ ಮುಖ್ಯಮಂತ್ರಿಯವರಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದು ಇತಿಹಾಸ, ಆ ಪತ್ರ ಎಲ್ಲಿದೆ ಎಂದು ಹುಡುಕಾಟ ಆರಂಭವಾಗಿದೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಆಗಿನ ಮುಖ್ಯಮಂತ್ರಿಯವರಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಊರಿಗೊಂದು ಕೆರೆ ಕೆರೆಗೆ ನದಿ ನೀರು ಮತ್ತು ರಾಜ್ಯದ ನದಿಜೋಡಣೆ ವರದಿ ತಯಾರಿಸಲು ಮನವಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರನ್ನು ನೋಡೆಲ್ ಆಫೀಸರ್ ಆಗಿ ನೇಮಕ ಮಾಡಿದ್ದರು.

ಈ ಯೋಜನೆಗಳನ್ನು ‘ಜಲಜೀವನ್ ಮಿಷನ್ ಕಾರಿಡಾರ್ ಅಥವಾ ವಾಟರ್ ಗ್ರಿಡ್ ಅಥವಾ ಅಂತರ್ಜಲ ಅಭಿವೃದ್ಧಿ ಕಾರಿಡಾರ್ ಯೋಜನೆಗಳಾಗಿ ಮಾಡಲು ಚಿಂತನೆ ನಡೆಯುತ್ತಿದೆಯಂತೆ. ಮುಂಬರುವ ರಾಜ್ಯದ ಮುಂಗಡ ಪತ್ರದಲ್ಲಿ ಸ್ಪಷ್ಟವಾಗಿ ನಿರ್ಧಾರ ಪ್ರಕಟಿಸಲು ಮಾನ್ಯ ಮುಖ್ಯಮಂತ್ರಿಯವರು ಸಿದ್ಧತೆ ನಡೆಸುತ್ತಿದ್ದಾರಂತೆ ಎಂಬ ಸುದ್ಧಿ ಇದೆ.

ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲೇ ಭಾಗವಹಿಸಿದ್ದ ನೀರಾವರಿ ಸಲಹಾಗಾರರಾದ ಶ್ರೀ ರಂಗನಾಥ್ ರವರು ಇ.ಐ.ಟೆಕ್ನಾಲಾಜಿ ಬೆಂಗಳೂರು ಇವರು ಅಂದಿನಿಂದ ಇಲ್ಲಿಯವರೆಗೂ ನೋಡೆಲ್ ಆಫೀಸರ್ ಜೊತೆ ಸಮಾಲೋಚನೆ ನಡೆಸಿ ಒಂದು ಕಲ್ಪನಾ ವರದಿ’ ಸಿದ್ಧಪಡಿಸುತ್ತಿದ್ದಾರೆ.

ಶಕ್ತಿಪೀಠ ಫೌಂಡೇಷನ್ ಈ ಸಂಬಂಧ ಹಲವಾರು ಇಲಾಖೆಗಳ ತಜ್ಷರ ವರದಿಗಳ ಅಂಶಗಳನ್ನು ಕ್ರೋಡೀಕರಿಸಿ ನೀಡಿದ್ದು ಇತಹಾಸ.

ಇನ್ನೂ 100 ಗಂಟೆಗಳಲ್ಲಿ ಒಂದು ಕರಡು ನಕ್ಷೆ ಮತ್ತು ಇಂಡೆಕ್ಸ್’ ನೀಡುವ ಭರವಸೆಯನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಗೆ ಶ್ರೀ ರಂಗನಾಥ್ ರವರು ನೀಡಿದ್ದಾರೆ. ನಂತರ ಶ್ರೀ ಜೈಪ್ರಕಾಶ್ ರವರು ಕರಡು ವರದಿ’ಯನ್ನು ಮುಖ್ಯಮಂತ್ರಿಯವರಿಗೆ ನೀಡಿ, ನಂತರ ಎಲ್ಲರ ಅಭಿಪ್ರಾಯ ಪಡೆದು ಅಂತಿಮಗೊಳಿಸುವ ಚಿಂತನೆ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಇಂದು(13.01.2022) ರಂದು ಬೆಂಗಳೂರಿನ ಇಐ ಟೆಕ್ನಾಲಾಜಿ ಕಚೇರಿಯಲ್ಲಿ ನಿಗದಿಯಾಗಿದ್ದ ಸಭೆಯನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ. ಶ್ರೀ ಜೈಪ್ರಕಾಶ್‍ರವರ ಮತ್ತು  ಶ್ರೀ ರಂಗನಾಥ್ ರವರ ಜೊತೆಗೆ ನನಗೂ ನಿದ್ದೆ ಕೆಡಿಸಿದ್ದಾರೆ ಶ್ರೀ ಬಸವರಾಜ್ ರವರು.

ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರಿಗೆ ಈ ಪ್ರತಿಯನ್ನು ನೀಡಿ ಅನುಷ್ಠಾನ ಗೊಳಿಸಲು ಮನವಿ ಸಲ್ಲಿಸಲು ಶ್ರೀ ಜಿ.ಎಸ್.ಬಸವರಾಜ್ ರವರು ಉದ್ದೇಶಿಸಿದ್ದಾರೆ.

ನಕ್ಷೆಯಲ್ಲಿ ಕೆಳಕಂಡ ಮಾಹಿತಿ ನೀಡುವಂತೆ ಸಂಸದರು ಸಲಹೆ ನೀಡಿದ್ದಾರೆ.

  1. ರಾಜ್ಯದಲ್ಲಿ ಉತ್ಪತ್ತಿಯಾಗುವ ಸುಮಾರು 3438 ಟಿ.ಎಂ.ಸಿ ಅಡಿ ನೀರಿನಲ್ಲಿ ಇದೂವರೆಗೂ ನಿರ್ಮಾಣ ಮಾಡಿರುವ ಮತ್ತು ನಿರ್ಮಾಣ ಮಾಡಲು ಉದ್ದೇಶಿರುವ ಸುಮಾರು 1246 ಟಿ.ಎಂ.ಸಿ ಅಡಿ ನೀರಿನ ಸಾಮಾಥ್ರ್ಯದ ಡ್ಯಾಂಗಳ ನಕ್ಷೆ.
  2. ರಾಜ್ಯದಲ್ಲಿ ನಿರ್ಮಾಣ ಮಾಡಿರುವ ಅಥವಾ ನಿರ್ಮಾಣ ಮಾಡುತ್ತಿರುವ  ಡ್ಯಾಂಗಳಲ್ಲಿನ ನೀರನ್ನು ಸಂಪೂರ್ಣವಾಗಿ ಬಳಸದೆ ಇರುವ ಡ್ಯಾಂಗಳ ನಕ್ಷೆ.
  3. ರಾಜ್ಯದಲ್ಲಿ ಹೊಸದಾಗಿ ಸುಮಾರು 600 ರಿಂದ 750 ಟಿ.ಎಂ.ಸಿ ಅಡಿ ನೀರಿನ ಯೋಜನೆಗಳ ಅಧ್ಯಯನ ಆರಂಭವಾಗಿದ್ದು ಇದರಲ್ಲಿ ಸುಮಾರು 300 ರಿಂದ 400 ಟಿ.ಎಂ.ಸಿ ಅಡಿ ನೀರಿನ ಸಾಮಾಥ್ರ್ಯದ ಡ್ಯಾಂಗ¼ ನಿರ್ಮಾಣ ಮಾಡಲು ಉದ್ದೇಶಿರುವ ಡ್ಯಾಂಗಳ ನಕ್ಷೆ.
  4. ರಾಜ್ಯದಲ್ಲಿ ಹಾಲಿ ನಿರ್ಮಾಣ ಮಾಡಿರುವ ಡ್ಯಾಂಗಳಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸುತ್ತಿರುವ ಡ್ಯಾಂಗಳ ನಕ್ಷೆ.
  5. ರಾಜ್ಯದಲ್ಲಿ ಹಾಲಿ ನಿರ್ಮಾಣ ಮಾಡಿರುವ ಡ್ಯಾಂಗಳಲ್ಲಿ ಹೆಚ್ಚವರಿ ನೀರು ತುಂಬಿಸುವ ಅವಕಾಶವಿರುವ ಡ್ಯಾಂಗಳ ನಕ್ಷೆ.
  6. ರಾಜ್ಯದಲ್ಲಿ ಫ್ಲಡ್ ಇರ್ರಿಗೇಷನ್ ರದ್ಧುಪಡಿಸಿ, ಮೈಕ್ರೋ ಇರ್ರಿಗೇಷನ್ ಜಾರಿಗೊಳಿಸಿದರೆ, ಡ್ಯಾಂವಾರು ಉಳಿಯುವ ನೀರಿನ ಮಾಹಿತಿ ನಕ್ಷೆ.
  7. ರಾಜ್ಯದಲ್ಲಿ ನಿರ್ಮಾಣ ಮಾಡಲು ಉದ್ದೇಶಿರುವ ಡ್ಯಾಂಗಳ ವಿವಾದಗಳು ಇರುವ ನಕ್ಷೆ.