20th April 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ ಭಾರತದಲ್ಲಿ ಹೊರದೇಶಗಳ ಹೂಡಿಕೆಗಾಗಿ ಸಾಕಷ್ಟು ಶ್ರಮಿಸುತ್ತಿದೆ. ಹೊರದೇಶಗಳ ಹೂಡಿಕೆ ಭಾರತದ ಯಾವ ರಾಜ್ಯದಲ್ಲಿ ಎಷ್ಟೆಷ್ಟು ಹೂಡಿಕೆ  ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಹೂಡಿಕೆ  ಮಾಡಲಾಗಿದೆ.

ಹಾಗೂ ನಮ್ಮ ರಾಜ್ಯದಲ್ಲಿ ಯಾವ ಜಿಲ್ಲೆಗಳಲ್ಲಿ, ಯಾವ ಯಾವ ಇಲಾಖೆಗಳಲ್ಲಿ, ಯಾವ ಯೋಜನೆಗಳಿಗೆ ಹೂಡಿಕೆ ಮಾಡಬಹುದು ಎಂಬ ಮಾಹಿತಿ ಮೌಲ್ಯಮಾಪನ ಮಾಡುವ ಅಗತ್ಯ ಇದೆ.

ನಾನು ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ರೆಸಿಡೆಂಟ್ ಕಮಿಷನರ್ ರವರಾದ ಶ್ರೀಮತಿ ಅಮಿತಾಪ್ರಸಾದ್ ಅವರೊಂದಿಗೆ ಈ ಬಗ್ಗೆ ಚರ್ಚೆ ಮಾಡಿದಾಗ ಅವರ ಭಾವನೆಗಳ ಪ್ರಕಾರ ರೆಸಿಡೆಂಟ್ ಕಮಿಷನರ್ ಕಚೇರಿಗೂ ಈ ಮಾಹಿತಿಗೂ ಸಂಭಂದವಿಲ್ಲ ಎಂಬ ಮಾಹಿತಿ ತಿಳಿಯಿತು.

ಕರ್ನಾಟಕ ರಾಜ್ಯ ಉದ್ಯೋಗ ಮಿತ್ರದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದಾಗ ಅವರÀ ಸ್ಥಿತಿಯೇ ಅತಂತ್ರವಾಗಿರುವಂತೆ ಘೋಚರಿಸಿತು. ದೆಹಲಿಯಲ್ಲಿ ಇನ್ವೆಸ್ಟ್‍ಮೆಂಟ್ ಕಮೀಷನರ್ ಹುದ್ದೆ ಸೃಷ್ಟಿಸಬೇಕು. ಈ ಹುದ್ದೆಯನ್ನು ರೆಸಿಡೆಂಡ್ ಕಮೀಷನರ್ ಅವರಿಗೆ ಹೆಚ್ಚುವರಿ ಹುದ್ದೆಯಾಗಿ ನೀಡಬಹುದು ಅಥವಾ ಬೇರೆ ಒಬ್ಬರನ್ನು ನಿಯೋಜನೆ ಮಾಡಬಹುದು.

ಅವರ ಬಳಿ ಈ ಎಲ್ಲಾ ಮಾಹಿತಿಗಳು ಅಫ್ ಡೇಟ್ ಇರಬೇಕು, ದೇಶ ವಿದೇಶಗಳ ಹೂಡಿಕೆದಾದರಿಗೆ ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವ ಅವಕಾಶಗಳ ಮಾಹಿತಿಯನ್ನು ಅವರು ದಿನದ 24 ಗಂಟೆಗಳ ಕಾಲ ನೀಡುವ ವ್ಯವಸ್ಥೆ ಇರಬೇಕು.

ನನಗೆ ತಿಳಿದಿರುವ ಪ್ರಕಾರ ನಮ್ಮ ರಾಜ್ಯದ ಯಾವ ಇಲಾಖೆ ಈ ಕೆಲಸ ಮಾಡುತ್ತಿದೆ ಗೊತ್ತಿಲ್ಲ. ಮೂಲ ಭೂತ ಸೌಕರ್ಯ ಇಲಾಖೆಯಲ್ಲಿ ಪಿಪಿಪಿ ಯೋಜನೆಯ ವಿಭಾಗದಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ, ಯೋಜನಾ ಇಲಾಖೆಯಲ್ಲಿ ಅಥವಾ ಮುಖ್ಯಮಂತ್ರಿಯವರ ಕಚೇರಿಯಲ್ಲಿ ಎಲ್ಲಾದರೂ ಈ ಮಾಹಿತಿ ಇರಲೇ ಬೇಕು.

ಈ ಬಗ್ಗೆ ಉದ್ಯೋಗ ಮಿತ್ರದಲ್ಲಿ ಕಾರ್ಯನಿರ್ವಹಣೆ ಮಾಡಿದ್ದ ಹಾಗೂ ಗುಬ್ಬಿಗೆ ಹೆಚ್.ಎ.ಎಲ್ ಘಟಕ ತರಲು ಬೆನ್ನಲೆಬುಗಾಗಿ ನಿಂತುಕೊಂಡು ನನಗೆ ಕಾಲಕಾಲಕ್ಕೆ ಸಹಕಾರ ನೀಡುತ್ತಿದ್ದ ಶ್ರೀ ಗಂಗಾಧರಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿದಾಗ ಅವರು ಸಹ ಈ ಮಾಹಿತಿ ಎಲ್ಲಿದೆ ಎಂಬ ಬಗ್ಗೆ ಶೀಘ್ರದಲ್ಲಿ ಮಾಹಿತಿ ನೀಡುವ ಭರವಸೆ ನೀಡಿದ್ದಾರೆ.

ಚೇಂಬರ್ ಆಫ್  ಕಾಮರ್ಸ್  ಅಥವಾ ಎಫ್.ಕೆ.ಸಿ.ಸಿ.ಐ ಬಳಿ ಈ ಮಾಹಿತಿ ಇರಬಹುದು ಎಂಬ ಉದ್ದೇಶದಿಂದ ಶ್ರೀ ಚಂದ್ರಶೇಖರ್ ರವರು ಮತ್ತು ಎಫ್.ಕೆ.ಸಿ.ಸಿ.ಐ ರಾಜ್ಯ ಘಟಕದ ಜಿಲಾ ಸಮನ್ವಯ ಮುಖ್ಯಸ್ಥರಾದ ಶ್ರೀ ಸುಜ್ಞಾನ ಹಿರೇಮಠ್ ರವರ ಬಳಿ ಚರ್ಚೆಯನ್ನು ನಡೆಸಿದೆ. ನಿಖರವಾದ ಮಾಹಿತಿ ಇನ್ನೂ ದೊರೆತಿಲ್ಲ.

ನನ್ನ ಸ್ನೇಹಿvರಾದ ಶ್ರೀ ಕೊಪ್ಪಳ್ ನಾಗರಾಜುರವರು ದೇಶದ ಹಣಕಾಸು ಬಗ್ಗೆ ನನ್ನೊಂದಿಗೆ ಬಹಳ ಚರ್ಚೆ ಮಾಡುತ್ತಿದ್ದರು, ನಾನು ಅವರಿಗೆ ಈ ಅಸೈನ್‍ಮೆಂಟ್ ನೀಡಿದೆ, ಗೂಗಲ್‍ನಲ್ಲಿರುವ ಕೆಲವು ಮಾಹಿತಿ ರವಾನಿಸಿ, ಕೈತೊಳೆದು ಕೊಂಡಿರುವ ಹಾಗೆ ಕಾಣಿಸುತ್ತಿದೆ.

ಈ ಬಗ್ಗೆ ಯಾರ ಬಳಿಯಾದರೂ ನಿಖರ ಮಾಹಿತಿಗಳು ಅಥವಾ ಅಧ್ಯಯನ ವರದಿಗಳು ಇದ್ದಲ್ಲಿ ನೀಡಲು ಈ ಮೂಲಕ ಬಹಿರಂಗ ಮನವಿ.