22nd December 2024
Share

TUMAKURU:SHAKTHIPEETA FOUNDATION

ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಮತ್ತು ರಾಜ್ಯದ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ವಿವಿಧ ವರ್ಗದವರು ತಯಾರಿಸುವ ಸಂಶೋಧನಾ ವರದಿಗಳು ಮತ್ತು ಪ್ರಾಜೆಕ್ಟ್ ವರ್ಕ್‍ಗಳು ಕಟ್ ಅಂಡ್ ಪೇಸ್ಟ್ ಆಗುತ್ತಿವೆ. ಈ ವರದಿಗಳು ಸಮಾಜ ಮುಖಿಯಾಗಿರಬೇಕು, ದಿನ ನಿತ್ಯದಲ್ಲಿ ಬದಲಾವಣೆ ಕ್ರಾಂತಿ ತರುವಂತಿರಬೇಕು  ಎಂಬ ಮನದಾಳದ ಮಾತುಗಳನ್ನು ಆನೇಕ ಭಾರಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಇದರ ಮಹತ್ವ ಅರಿತ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಮಹತ್ವದ ಹೆಜ್ಜೆ ಇಡಲು ಚಿಂತನೆ ಆರಂಭಿಸಿದೆಯಂತೆ.

  1. ಸಂಶೋಧನಾ ವರದಿಗಳು
  2. ಶಾಲಾ ಕಾಲೇಜುಗಳ ಪ್ರಾಜೆಕ್ಟ್ ವರ್ಕ್‍ಗಳು
  3. ವಿಶ್ವವಿದ್ಯಾನಿಲಯಗಳಲ್ಲಿರುವ ಅಧ್ಯಯನ ಕೇಂದ್ರಗಳು ಮತ್ತು ಸಂಶೋಧನಾ ಕೇಂದ್ರಗಳು.
  4. ಡಿಪಾರ್ಟ್‍ಮೆಂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಾಜಿ ಅಡಿಯಲ್ಲಿನ ಅಧ್ಯಯನ ಕೇಂದ್ರಗಳು ಮತ್ತು ಸಂಶೋಧನಾ ಕೇಂದ್ರಗಳು.
  5. ವಿವಿಧ ಇಲಾಖೆಗಳ ಅಡಿಯಲ್ಲಿನ ಅಧ್ಯಯನ ಕೇಂದ್ರಗಳು ಮತ್ತು ಸಂಶೋಧನಾ ಕೇಂದ್ರಗಳು.

ಇವೆಲ್ಲಾ ಒಂದೇ ಕಡೆ ಡಿಜಿಟಲ್ ದಾಖಲೆ ಆಗಬೇಕು. ಸಂಶೋಧನಾ ವರದಿಗಳು ಮತ್ತು ಪ್ರಾಜೆಕ್ಟ್ ವರ್ಕ್‍ಗಳನ್ನು ಸಿದ್ಧಪಡಿಸುವ ಮುನ್ನ ವಿವಿಧ ವರ್ಗದವರು ಇಲ್ಲಿ ನೊಂದಾಯಿಸಿಕೊಳ್ಳಬೇಕು, ವರದಿ ಸಿದ್ಧಪಡಿಸಿದ ನಂತರ ಅಫ್ ಲೋಡ್ ಮಾಡುವ ವ್ಯವಸ್ಥೆಗೆ ರೂಪು ರೇಷೆ ನಿರ್ಧಾರ ಬಗ್ಗೆ ಚರ್ಚೆ ಆರಂಭವಾಗಿದೆಯಂತೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಜಿಐಎಸ್ /ಜಿಯೋ ಸ್ಪೇಷಿಯಲ್ ಆಧಾರಿತ ಸಂಶೋಧನಾ ವರದಿಗಳು ಮತ್ತು ಪ್ರಾಜೆಕ್ಟ್ ವರ್ಕ್ಗಳು ಮೌಲ್ಯಮಾಪನ ವರದಿಗಳು ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂಬ ದೂರದೃಷ್ಠಿ ಚಿಂತನೆ ಇದಾಗಿದೆ. ಇದು ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಮೊದಲ ಮೆಟ್ಟಿಲು ಆಗಬಹುದು.

ಬಹುಷಃ ಈ ರೀತಿಯ ವ್ಯವಸ್ಥೆ ಎಲ್ಲಾದರೂ ಇದ್ದಲ್ಲಿ ಓದುಗರು ಮಾಹಿತಿ ನೀಡಲು ಮನವಿ.