24th July 2024
Share

TUMAKURU:SHAKTHIPEETA FOUNDATION

ದೆಹಲಿಯ ವಿಜ್ಞಾನ ಭವನದಲ್ಲಿರುವ ಇನ್ವೆಸ್ಟ್ ಇಂಡಿಯಾ  ಮತ್ತು ಬೆಂಗಳೂರಿನ ಖನಿಜಭವನದಲ್ಲಿರುವ ಇನ್ವೆಸ್ಟ್ ಕರ್ನಾಟಕ ಫೋರಂ ಗಳಿಗೆ ಭೇಟಿ ಮಾಡಿ ಎಫ್.ಡಿ.ಐ ಹೂಡಿಕೆಗಳ ಮಾಹಿತಿ ಪಕ್ಕಾ ದೊರೆಯಲಿದೆ ನಮ್ಮ ಇ-ಪೇಪರ್ ಓದುಗರು  ಸೋಶಿಯಲ್ ಮೀಡಿಯಾ ಮೂಲಕ ಉತ್ತರಿಸಿದ್ದಾರೆ.ಇದೊಂದು ಒಳ್ಳೆಯ ಬೆಳವಣಿಗೆ.

 ಆದರೆ ನನಗೆ ಒಂದು ಅನುಮಾನ ಮೂಡಿದೆ, ಇದೂವರೆಗೂ ಯಾವುದೇ ವ್ಯಕ್ತಿ ಅಥವಾ ಸಂಘ ಸಂಸ್ಥೆ ಇನ್‍ವೆಸ್ಟ್ ಕರ್ನಾಟಕ ಫೋರಂ ಕಾರ್ಯವೈಖರಿ ಬಗ್ಗೆ ಮೌಲ್ಯಮಾಪನ ಅಥವಾ ಅಧ್ಯಯನ ವರದಿ ಮಾಡಿಲ್ಲವೇ? ಮಾಡಿದ್ದರೆ ಆ ವರದಿ ಎಲ್ಲಿದೆ ಎಂಬ ಸಹಜ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಉತ್ತರ ದೊರೆಯಬೇಕಾದರೆ ಈ ಮೇಲ್ಕಂಡ ಎರಡು ಇಲಾಖೆಗಳ ಜೊತೆ ಸಮಾಲೋಚನೆ ಮಾಡುವುದು ಸೂಕ್ತವಾಗಿದೆ.

ಒಂದೊಮ್ಮೆ ಯಾರಿಗಾದರೂ   ಮಾಹಿತಿ ಇದ್ದಲ್ಲಿ ತಿಳಿಸಿದರೆ ಒಳ್ಳೆಯದು. ಇನ್‍ವೆಸ್ಟ್ ಇಂಡಿಯಾ ವೆಬ್‍ಸೈಟ್ ಗಮನಿಸಿದಾಗ ರಾಜ್ಯದ ಪ್ರತಿ ಜಿಲ್ಲೆಯ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಈ ಮಾಹಿತಿಗಳನ್ನು ಪಕ್ಕಾ ಇಟ್ಟುಕೊಂಡಿರ ಬಹುದು.

ಜೊತೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪಿಪಿಪಿ ಯೋಜನೆಗಳ ಒಂದು ಸಮಿತಿ’ ಯು ಇದೆಯಂತೆ, ಇದರ ಕರ್ತವ್ಯ ಏನು ಎಂಬ ಬಗ್ಗೆ ನಮ್ಮ ತುಮಕೂರಿನ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್ ರವರಿಗೆ ಗೈಡ್‍ಲೈನ್ ನೀಡಲು ಕೇಳಿದ್ದೇನೆ.

ರಾಜ್ಯದ ಪ್ರತಿ ಇಲಾಖೆಯಲ್ಲೂ ಒಬ್ಬೊಬ್ಬ ಅಧಿಕಾರಿಯನ್ನು ನೇಮಿಸಿರ ಬಹುದು. ಏಕೆಂದರೆ ಆಯಾ ಇಲಾಖೆಗಳ ಮಾಹಿತಿಯನ್ನು ಆಯಾ ಇಲಾಖಾ ಅಧಿಕಾರಿಗಳೇ ನೀಡಬೇಕಾಗುವುದು.

‘ಮೂಲ ಸೌಲಭ್ಯ ಇಲಾಖೆಯಲ್ಲೂ ಒಂದು ಪಿಪಿಪಿ ವಿಭಾಗ’ ಇದೆ ಇವರಿಗೂ ಮತ್ತು ಇನ್‍ವೆಸ್ಟ್ ಕರ್ನಾಟಕ ಫೋರಂಗೂ ಯಾವ ರೀತಿ ಸಂಭಂದವಿದೆ ಎನ್ನುವುದು ಮುಖ್ಯ.ಏಕೆಂದರೆ ನಮ್ಮ ಸರ್ಕಾರಗಳ ಬಹುತೇಕ ಇಲಾಖೆಗಳಲ್ಲಿ ಸಮನ್ವಯತೆ ಇರುವುದಿಲ್ಲಾ, ಒಂದೇ ಕೆಲಸವನ್ನು ಎರಡು ಮೂರು ಇಲಾಖೆಗಳು ಮಾಡುವ ಉದಾಹರಣೆಗಳು ಇವೆ.

ಅದಕ್ಕೋಸ್ಕರವೇ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಪ್ರತಿ ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ದಿಶಾ ಸಮಿತಿ ರಚಿಸಿರುವುದು.