TUMAKURU:SHAKTHIPEETA FOUNDATION
ಕಳೆದ 25 ವರ್ಷಗಳಿಂದ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಶಿವೈಕ್ಯರಾಗುವವರೆಗೂ ಶ್ರೀ ಜಿ.ಎಸ್.ಬಸವರಾಜ್ ರವರು, ದಿ.ಜಿ.ಎಸ್.ಪರಮಶಿವಯ್ಯನವರು ಮತ್ತು ನಾನು ಯಾವುದೇ ಯೋಜನೆ ಚಿಂತನೆ ನಡೆಸಿದ ಒಂದೆರಡು ದಿವಸದಲ್ಲಿ ಸ್ಪಷ್ಟ ಚಿತ್ರಣವನ್ನು ನೀಡುತ್ತಿದ್ದವರು ಪರಮಶಿವಯ್ಯನವರು.
ಉಚಿತವಾಗಿ ಯಾವುದೇ ವೆಚ್ಚವಿಲ್ಲದೆ ಅವರ ಜ್ಞಾನವನ್ನು ಸಮಾಜಕ್ಕಾಗಿ ಧಾರೆ ಎರೆಯುತ್ತಿದ್ದರು.
ನಂತರ ನಮಗೆ ತಜ್ಞರ ಕೊರತೆ? ಈಗ ಕಾಣುತ್ತಿದೆ.
ತುಮಕೂರು ಜಿಲ್ಲಾ ಮಟ್ಟದ ದಿಶಾ ಸಭೆಯಲ್ಲಿ ನೀರಾವರಿ ಸಲಹಾಗಾರರಾದ ಶ್ರೀ ಎನ್.ರಂಗನಾಥ್ ರವರು, ಶ್ರೀ ಹರೀಶ್ ರವರು, ಶ್ರೀ ಮಲ್ಲೇಶ್ ರವರು, ಶ್ರೀ ವೇದಾನಂದಮೂರ್ತಿರವರು, ಶ್ರೀ ಸತ್ಯಾನಂದ್ ರವರು, ಶ್ರೀ ಸಜ್ಜನ್ ರವರು ಎಲ್ಲರನ್ನು ಆಹ್ವಾನಿಸಿ ಸಮಾಲೋಚನೆ ನಡೆಸಲಾಗಿತ್ತು.
‘ಎರಡು ಕಣ ಕಾದು ದಾಸಯ್ಯ ಕೆಟ್ಟ’ ಎಂಬ ಗಾದೆ ಮಾತು ನೆನಪಿಗೆ ಬರುತ್ತಿದೆ. ಶೀಘ್ರದಲ್ಲಿ ಒಂದು ವ್ಯವಸ್ಥಿತವಾದ ಮಾರ್ಗ ಕಂಡುಕೊಳ್ಳದಿದ್ದರೆ ಖಚಿತ ನಿರ್ಧಾರ ಕಷ್ಟವಾಗಲಿದೆ. ಒಬ್ಬ ‘ಜಲ ಗುರು’ ಬೇಕು ಬೇಕು?