22nd December 2024
Share

TUMAKURU:SHAKTHIPEETA FOUNDATION

ರಾಜ್ಯದಲ್ಲಿ ‘ಜಲಹೊಗೆ’ ಹೊತ್ತಿಕೊಂಡಿದೆ. ಜಲಬೆಂಕಿ’ಯಾಗುವ ಮುನ್ನ ಸರ್ವಪಕ್ಷಗಳ ಸಭೆ ಕರೆಯುವ ಮೂಲಕ ಒಳ್ಳೆಯ ನಿರ್ಧಾರವನ್ನು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಪ್ರಕಟಿಸಿದ್ದಾರೆ.

ಕಾಂಗ್ರೆಸ್ ಮೇಕೆದಾಟು ಒಂದಕ್ಕೆ ಸೀಮಿತವಾಗಬಾರದು, ಜೆಡಿಎಸ್ ನಿಲುವಿನಂತೆ ಜಲಧಾರೆ ಯೋಜನೆಯ ರೂಪುರೇಷೆಯನ್ನು ಜನವರಿ 26 ರಂದು ಪ್ರಕಟಿಸಬೇಕು.

ಸರ್ಕಾರ ರಾಜ್ಯದ ಪ್ರತಿಯೊಂದು ಹನಿ ನೀರಿನ ಬಗ್ಗೆ ಚರ್ಚೆ ಮಾಡುವಂತೆ ಕಾಣುತ್ತಿದೆ. ಜಲತಜ್ಞರಾದ ಬೊಮ್ಮಾಯಿರವರು ಜಲಗ್ರಂಥ ರಚನೆಯ ದಿಕ್ಕಿನಲ್ಲಿ ಹೆಜ್ಜೆ ಹಾಕಲು ಮುಂದಾಗಿರುವ ಹಾಗೆ ಗೋಚರಿಸುತ್ತಿದೆ.

ಮಾಜಿ ಪ್ರಧಾನಿಯವರಾದ ದಿ.ವಾಜಪೇಯಿರವರ ಕನಸಿನ ನದಿ ಜೋಡಣೆ ಬಗ್ಗೆ ಬಿಜೆಪಿ ಪಕ್ಷ  ತನ್ನ ನಿಲುವನ್ನು ಪ್ರಕಟಿಸಬೇಕಿದೆ. ಕೇಂದ್ರ ಸಚಿವರುಗಳು ಒಂದು ನಿರ್ಧಿಷ್ಟ ರೂಪುರೇಷೆ ಘೋಷಣೆ ಮಾಡಬೇಕಿದೆ.

ಹಾಗೇಯೇ ರಾಜ್ಯದ ಸರ್ವಪಕ್ಷಗಳ ಸಭೆಯಲ್ಲಿ ಬಾಗವಹಿಸಲು ಅರ್ಹತೆ ಹೊಂದಿರುವ ಎಲ್ಲಾ ಪಕ್ಷಗಳು ತಮ್ಮ ತಮ್ಮ ನಿಲುವನ್ನು ಘೋಷಣೆ ಮಾಡಲಿ. ಒಂದು ಒಮ್ಮತದ ಯೋಜನೆ ಹೊರಹೊಮ್ಮಲಿ.

ಕೇಂದ್ರ ಜಲಶಕ್ತಿ ಸಮಿತಿಯ ಸದಸ್ಯರಾದ ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಕನಸಿನ ಯೋಜನೆಗಳ ಬಗ್ಗೆ, ಶಕ್ತಿಪೀಠ ಫೌಂಡೇಷನ್ ಸರ್ವಪಕ್ಷಗಳ ಸಭೆಯ ನಿರ್ಣಯ ನೋಡಿಕೊಂಡು ಒಂದು ನಿರ್ದಿಷ್ಠ ನಿರ್ಧಾರಕ್ಕೆ ಬರಲಿದೆ.

ಕೇಂದ್ರ ಸರ್ಕಾರದಲ್ಲಿರುವ ಪ್ರತಿಯೊಂದು ಕಡತದ ಅನುಸರಣೆ ಮಾಡಲಿದೆ. ರಾಜ್ಯ ಸರ್ಕಾರ ಕಳುಹಿಸಬೇಕಾದ ಪ್ರಸ್ತಾವನೆಗಳ ಬಗ್ಗೆಯೂ ಶ್ರಮಿಸಲಿದೆ. ರಾಜ್ಯ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ನಿಕಟ ಸಂಪರ್ಕ ಇಟ್ಟುಕೊಂಡು ಕಡತಗಳ ನೀರಗಂಟಿ ಕೆಲಸ ಮಾಡಲಿದೆ.

ನೀರಾವರಿ ತಜ್ಞರು, ಹೋರಾಟಗಾರರು, ಚಿಂತಕರು, ಸರ್ವಪಕ್ಷಗಳ ಸಭೆಗೆ ಮುಂಚೆ ಸರ್ಕಾರಕ್ಕೆ ತಮ್ಮ ಸಲಹೆಗಳನ್ನು ನೀಡುವುದು ಉತ್ತಮ.