

TUMAKURU:SHAKTHIPEETA FOUNDATION
ಕುಂದರನಹಳ್ಳಿ ಗೇಟ್ ನಿಂದ ಸಾಗಸಂದ್ರ- ಬೋಗಸಂದ್ರ ದವರೆಗಿನ ಸುಮಾರು 11 ಕೀಮೀ ಪಿಎಂಜಿಎಸ್ ವೈ ರಸ್ತೆಯನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಮಂಜೂರು ಮಾಡಿಸಿದ್ದರು.
ಕುಂದರನಹಳ್ಳಿ ವ್ಯಾಪ್ತಿಯ ಜಮೀನಿನಲ್ಲಿ ಭೂ ಸ್ವಾಧೀನ ಆಗಿರುವ ಜಮೀನನ್ನು ಹದ್ದುಬಸ್ತು ಪಿಕ್ಸ್ ಮಾಡಲು ಗುಬ್ಬಿ ರೆವಿನ್ಯೂ ಇಲಾಖೆ ವಿಳಂಭ ಮಾಡಿರುವ ಬಗ್ಗೆ ಹಾಗೂ ಗ್ರಾಮದ ಜನರ ಒಪ್ಪಿಗೆ ಮೇರೆಗೆ ರಸ್ತೆ ನಿರ್ಮಾಣದ ಬಗ್ಗೆ ಸ್ಥಳದಲ್ಲಿ ಸಮಾಲೋಚನೆ ನಡೆಸಲಾಯಿತು.
ಹದ್ಧು ಬಸ್ತು ನಿಗದಿ ನಂತರ ಸಾಧಕ-ಭಾದಕ ನೋಡಿಕೊಂಡು ರಸ್ತೆ ನಿರ್ಮಿಸಲು ಸ್ಥಳೀಯರು ಸಲಹೆ ನೀಡಿದ್ದಾರೆ.

ಇನ್ನೊಂದು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಇಂಜಿನಿಯರ್ ನೀಡಿದ್ದಾರೆ. ರಸ್ತೆ ಕಿತ್ತುಹಾಕಿರುವುದರಿಂ ದೂಳು ಬರುವುದರ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದರು