TUMAKURU:SHAKTHIPEETA FOUNDATION
ಬೆಂಗಳೂರಿಗೆ ಉಪನಗರವಾಗಿ/ಒಂದು ಬಡಾವಣೆಯಂತೆ ಬೆಳೆಯುತ್ತಿರುವ ತುಮಕೂರು ತ್ರಿವಳಿ ನಗರಕ್ಕೆ ಮೆಟ್ರೋ ಯೋಜನೆ, ಸಬ್ ಅರ್ಬನ್ ಯೋಜನೆ ಅನುಷ್ಠಾನದ ಬಗ್ಗೆ ಮೆಟ್ರೋ ಎಂ.ಡಿಯವರಾದ ಶ್ರೀ ಅಂಜುಮ್ ಪರ್ವೇಜ್ ರವರು ಮತ್ತು ತುಮಕೂರು ಲೋಕಸಾಬಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಮಾಲೋಚನೆ ನಡೆಸಿದರು.
ಹಾಲಿ ಇರುವ ತುಮಕೂರು ನಗರ ಒಂದು ನಗರ, ವಸಂತನರಸಾ ಪುರದ ಕೈಗಾರಿಕಾ ಪ್ರದೇಶ ಎರಡನೇ ನಗರ ಮತ್ತು ಇವೆರಡರ ಮಧ್ಯೆ ಇರುವ ಸ್ಥಳದಲ್ಲಿ ಮೂರನೇ ನಗರ ಜನ್ಮತಾಳುತ್ತಿದೆ. ಅದರೆ ಶೀಘ್ರದಲ್ಲಿ ತುಮಕೂರು ನಗರವನ್ನು ತ್ರಿವಳಿ ನಗರ ಎಂದು ಘೋಷಣೆ ಮಾಡುವ ಕಾಲ ಬರುತ್ತದೆ.
ಸುಮಾರು 15000 ಎಕರೆ ಜಮಿನನಲ್ಲಿ ಕೈಗಾರಿಕಾ ವಲಯ ನಿರ್ಮಾಣ ಆಗುವಾಗ ಬೆಂಗಳೂರಿನ ನೂರಾರು ಉದ್ದಿಮೆದಾರರು ಹೂಡಿಕೆ ಮಾಡುತ್ತಿದ್ದಾರೆ. ವಾಹನಗಳ ದಟ್ಟಣೆ ವಿಪರೀತವಾಗುತ್ತಿದೆ. ಬಡವರಿಗೆ ಸಬ್ ಅರ್ಬನ್ ರೈಲು ಮತ್ತು ಶ್ರೀಮಂತರಿಗೆ ಮೆಟ್ರೋ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಬಸವರಾಜ್ ರವರು ಕೇಂದ್ರ ಸರ್ಕಾರದ ಜೊತೆ ಪತ್ರವ್ಯವಹಾರ ಮಾಡಿದ್ದರು.
ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದರೆ ಅಗತ್ಯ ಕ್ರಮಕೈಗೊಳ್ಳುವುದಾಗಿ ಕೇಂದ್ರ ತಿಳಿಸಿದೆ. ಈ ಹಿನ್ನಲೆಯಲ್ಲಿ ಸಾಧಕ-ಭಾದಕಗಳ ಬಗ್ಗೆ ಸಮೀಕ್ಷೆ ಅಗತ್ಯವಾಗಿದೆ.
ಡಾ.ಜಿ.ಪರಮೇಶ್ವರ್ ರವರು ಉಪಮುಖ್ಯ ಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಈ ಮೆಟ್ರೋ ಬಗ್ಗೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಕಡತ ಯಾವ ಹಂತದಲ್ಲಿ ಎಂದು ಮೆಟ್ರೋ ಪ್ಲಾನಿಂಗ್ ವಿಭಾಗದ ಮುಖ್ಯ ಇಂಜಿನಿಯರ್ ಶ್ರೀ ಶಿವಕುಮಾರ್ ರವರ ಜೊತೆ ಸಮಾಲೋಚನೆ ನಡೆಸಲಾಯಿತು. ಹೇಳಿಕೆ ಹಂತದಲ್ಲಿಯೇ ಇದೆ ಎಂಬ ವಿಚಾರ ಮನವರಿಕೆ ಆಯಿತು.