TUMAKURU:SHAKTHIPEETA FOUNDATION
ಕೇಂದ್ರ ಸರ್ಕಾರದ ನೀತಿ ಆಯೋಗವು ದೇಶದ ಎಲ್ಲಾ ರಾಜ್ಯಗಳನ್ನು ಈಶಾನ್ಯ ರಾಜ್ಯಗಳು ಹಾಗೂ ಹಿಮಾಲಯ ರಾಜ್ಯಗಳು ಮತ್ತು ಇತರೆ ನಾನ್ ಹಿಮಾಲಯನ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೀಗೆ ಮೂರು ಭಾಗಗಳಾಗಿ ವಿಂಗಡಿಸಿ ನೀರಿನ ಸೂಚ್ಯಂಕ ಪ್ರಕಟಣೆ ಮಾಡಿದೆ.
ಸುಮಾರು 9 ಥೀಮ್‍ಗಳ 28 ಸೂಚ್ಯಂಕಗಳ ಆಧಾರದಲ್ಲಿ ರ್ಯಾಂಕಿಂಗ್ ನೀಡಿದ್ದಾರೆ. ಕರ್ನಾಟಕ ರಾಜ್ಯ ಯಾವ ಅಂಶಗಳಲ್ಲಿ ಯಾವ Ranking ಪಡೆದಿದೆ ಎಂಬ ನಿಖರವಾದ ಮಾಹಿತಿ ಯಾವ ಇಲಾಖೆಯ ಬಳಿ ಇದೆ ಎಂಬ ಹುಡುಕಾಟ ಆರಂಭಿಸಲಾಗಿದೆ.
ಈ ಬಗ್ಗೆ ಯಾರಾದರೂ ಅಧ್ಯಯನ ಮಾಡಿದ್ದರೆ ವಿವರವಾದ ಮಾಹಿತಿ ನೀಡಲು ಬಹಿರಂಗ ಮನವಿ ಮಾಡಲಾಗಿದೆ. ಈ ರ್ಯಾಂಕಿಂಗ್ ಮಾನದಂಡ ಕೇಂದ್ರ ಸರ್ಕಾರದ ಅನುದಾನಗಳನ್ನು ಪಡೆಯಲು ವಿವಿಧ ಪ್ರಸ್ತಾವನೆಗಳನ್ನು ಸಲ್ಲಿಸಲು ಅನೂಕೂಲಕರವಾಗುತ್ತದೆ.
ನೀರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಈ ಬಗ್ಗೆ ವಿಶೇಷ ಗಮನಹರಿಸಬೇಕಿದೆ. ಗೂಗಲ್ ನಲ್ಲಿ ದೊರೆಯುವ ಎಲ್ಲಾ ಮಾಹಿತಿಗಳು ಕರಾರುವಕ್ಕಾಗಿ ಇರುವುದಿಲ್ಲಾ. ನೀತಿ ಆಯೋಗಕ್ಕೆ ನೀಡಿರುವ ಡಾಟಾಗಳ ಅಧ್ಯಯನ ಮಾಡಿದರೆ ಮಾತ್ರ ಸತ್ಯಾಂಶ ತಿಳಿಯಲಿದೆ.
ಆಸಕ್ತ ಓದುಗರು ಒಂದೊಂದು ವಿಚಾರದಲ್ಲಿ ಆರ್ಟಿಕಲ್ ಬರೆಯಲು ಪ್ರೇರಪಣೆ ನೀಡುವ ಕೆಲಸ ಆಗಬೇಕಿದೆ.