10th November 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ವಿವಿಧ ಸಂಸ್ಥೆಗಳು, ನೀತಿ ಆಯೋಗ ಕೇಳಿರುವ ಮಾಹಿತಿಗಳನ್ನು ವಿವಿಧ ಇಲಾಖೆಗಳಿಂದ ಪಡೆಯಲು ಪತ್ರಗಳ, ಮೇಲೆ ಪತ್ರ ಬರೆದರೂ ಮಾಹಿತಿ ನೀಡುವುದಿಲ್ಲ ಸಾರ್, ನಾವು ಇಡೀ ರಾಜ್ಯ ಸುತ್ತಾಡಿ ಮಾಹಿತಿ ಸಂಗ್ರಹಿಸಲು ಸಾಧ್ಯವಿದೆಯಾ ಸಾರ್.

ಜಲ ಗ್ರಂಥ ಮಾಡುವ ನಿಮ್ಮ ಕಾಳಜಿಗೆ ನಿಜಕ್ಕೂ ಅಭಿನಂದನೆಗಳು ಸಾರ್, ನೀವೂ ಬರೆದಿರುವ ಪತ್ರದ ಜೊತೆಗೆ ಸುಮಾರು 220 ಕ್ಕೂ ಹೆಚ್ಚು ಅಂಶಗಳ ಬಗ್ಗೆ ಪ್ರಸ್ತಾಪ ಮಾಡೀದ್ದೀರಿ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಪತ್ರದಲ್ಲಿ ಸುಮಾರು 51 ಅಂಶಗಳು ಇವೆ. ಇವೂ ರಿಪೀಟ್ ಆಗಿವೆ ಇರಲಿ ಸಾರ್.

ನಮ್ಮ ಸಂಸ್ಥೆಯ ಚೀಪ್ ಇಂಜಿನಿಯರ್ ಹಾಗೂ ರಿಜಸ್ಟಾರ್ ಶ್ರೀ ಶಿವಕುಮಾರ್ ರವರು ಮತ್ತು ಡೈರೆಕ್ಟರ್ ಟೆಕ್ನಿಕಲ್ ಶ್ರೀ ಡಾ.ಪಿ.ಸೋಮಶೇಖರ್ ರಾವ್ ರವರು ಮತ್ತು ನೀವೂ ಕುಳಿತುಕೊಂಡು ನೀರಿಗೆ ಮತ್ತು ಹಸಿರಿಗೆ ಸಂಬಂಧಿಸಿದ ಅಗತ್ಯವಿರುವ ಎಲ್ಲಾ ಅಂಶಗಳ ಪಟ್ಟಿ ಮಾಡಿ. ಯಾವ ಇಲಾಖೆಗಳು ಯಾವ ಮಾಹಿತಿಯನ್ನು ಎಷ್ಟು ದಿವಸದೊಳಗೆ, ಯಾವ ಇಲಾಖೆಯ, ಯಾವ ಅಧಿಕಾರಿ ಮಾಹಿತಿ ನೀಡಬೇಕು ಎಂಬ ಬಗ್ಗೆ ಪಟ್ಟಿ ಮಾಡಿ, ಸರ್ಕಾರಿ ಆದೇಶ ಮಾಡಿಸಿ ಸಾರ್.

ವಿವಿಧ ಇಲಾಖೆಗಳಿಂದ ಮಾಹಿತಿ ಸಂಗ್ರಹ ಮಾಡುವ ಹೊಣೆಗಾರಿಕೆಯನ್ನು ನಿಮ್ಮ ಸಂಸ್ಥೆ ಅಥವಾ ಬೇರೆ ಯಾವುದೇ ಸಂಸ್ಥೆ ಪಡೆಯಲಿ, ಅವರು ತಂದು ಕೊಡುವ ಮಾಹಿತಿಗಳ ಆಧಾರದ ಮೇಲೆ ನೀವೂ ಕೇಳುವ ಜಿಐಎಸ್ ಲೇಯರ್, ಡಿಜಿಟಲ್ ದಾಖಲೀಕರಣ ಮತ್ತು ಅಗತ್ಯವಿರುವ ವ್ಯಾಪ್ತಿಯ ಮೌಲ್ಯಮಾಪನ ವರದಿ ನೀಡುವ ಜವಾಬ್ಧಾರಿ ನಮ್ಮದು ಸಾರ್.

ಇದು  ಈಗ ಅಗತ್ಯವಿರುವ ಅಂಶ ಸಾರ್, ನಮ್ಮ ಮೇಲೆ ಗದಾ ಪ್ರಹಾರ ದಯವಿಟ್ಟು ಬೇಡ ಸಾರ್, ತಾವೇ ಅತ್ಮಾವಲೋಕನ ಮಾಡಿಕೊಳ್ಳಿ ನಮಗೆ ಡಾಟಾ ನೀಡುತ್ತಾರೇಯೇ ಈ ಅಧಿಕಾರಿಗಳು, ಎಂದು ACIWRM  ಸಂಸ್ಥೆಯ ಹೆಸರು ಹೇಳ ಬಯಸದೇ ಇರುವ ಒಂದು ತಂಡ ಕಳ ಕಳಿಯ ಮನವಿ ಮಾಡಿದೆ.

ನಿಜಕ್ಕೂ ಇದು ಒಳ್ಳೆಯ ಸಲಹೆ. ನೀವೇನಂತೀರಾ?