12th September 2024
Share

TUMAKURU:SHAKTHI PEETA FOUNDATION

ಕರ್ನಾಟಕ  ಸರ್ಕಾರದ ಜಲಸಂಪನ್ಮೂಲ ಇಲಾಖೆ STATE WATER POLICY-2021

ಮಾಡುತ್ತಿದೆ. ಬಹುತೇಕ ಪ್ರಕ್ರೀಯೆ ಮುಗಿದಿರುವ ಹಾಗೆ ಕಾಣುತ್ತಿದೆ.

ನಮ್ಮ ಸರ್ಕಾರ 2002 ರಲ್ಲಿ ವಾಟರ್ ಪಾಲಿಸಿ ಮಾಡಿತ್ತು, ಕೇಂದ್ರ ಸರ್ಕಾರ 2012 ರಲ್ಲಿ ವಾಟರ್ ಪಾಲಿಸಿ ಮಾಡಿದೆ. ಇವೆರಡು ಪಾಲಿಸಿಗಳ ಆಧಾರ ಮತ್ತು ನಡವಳಿಕೆಯ ಮೇಲೆ ಗಮನಕ್ಕೆ ಬಂದಂತಹ ಅಂಶಗಳೇ ವಾಟರ್ ಪಾಲಿಸಿ ಮೂಲ ಅಂಶಗಳಾಗಿವೆ.

ಜಲಸಂಪನ್ಮೂಲ ಇಲಾಖೆಯ ಬಹುತೇಕ ಆಳ ಉದ್ದ ಅರಿತಿರುವ ನನಗೂ ಒಂದೊಂದು ಸಲ ಅಧಿಕಾರಿಗಳ ಡಾಟಾ ರಹಸ್ಯ, ನೋವು ಮತ್ತು ಸಿಟ್ಟು ಉಂಟು ಮಾಡುತ್ತದೆ. ಮೌನವೇ ಉತ್ತರ!

ಆದರೇ  ಇಬ್ಬರು ಇಂಜಿನಿಯರ್ ಸ್ನೇಹಿತರೊಂದಿಗೆ ಬಹಳ ಕಾಲ ಚರ್ಚೆ ನಡೆಸಿದೆ. ಅವರ ಪ್ರಕಾರ ನೀವೂ ಕೈಹಾಕಿರುವ ಜಲಗ್ರಂಥ ಬಹಳ ಕಷ್ಟದ ಕೆಲಸವಾದರೂ ನಿಜಕ್ಕೂ ಅಗಲೇ ಬೇಕಿತ್ತು. ಯಾರಾದರೂ ಒಬ್ಬರೂ ಅಂತಿಮ ರೂಪಕೊಡಲು ಸಿದ್ಧವಾಗಲೇ ಬೇಕು ಎಂಬ ಕಟು ಸತ್ಯದ ಮಾತು ಆಡಿದರು.

ನಾವು ನೋಡಿದ ಹಾಗೆ ನೀವೂ ಯಾವುದೇ ಕಚೇರಿಗೆ ಹೋದರೂ ಯಾವುದಾದರೂ ಡಾಟಾ ಪಡೆಯದೆ ಬರಿ ಕೈಯಲ್ಲಿ ಹೋಗುವುದೇ ಇಲ್ಲ. ಆ ಸ್ಕಿಲ್ ನಿಮಗೆ ಇದೆ.

ನಾವುಗಳು ಮಾಡುವ ಅವಮಾನ, ಅನುಮಾನ ಎಲ್ಲವನ್ನು ಕೂಲ್ ಆಗಿ ಸ್ವೀಕರಿಸುವ ತಾಳ್ಮೆ ನಿಮಗೆ ಈಗ ಬಂದಿರುವ ಹಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಖರ್ಚು ಮಾಡುತ್ತಿರುವ ಹಣ ನೋಡಿದರೆ ನಮಗೆ ನಾಚಿಕೆಯಾಗುತ್ತಿದೆ.

ಹಣ ಪಡೆದು ಮಜಾ ಮಾಡುವವರೂ ಒಂದು ಕಡೆ ಆದರೆ, ನೀವೂ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಒದ್ದಾಡುತ್ತಿದ್ದೀರಿ, ವಾಟರ್ ಪಾಲಿಸಿಯಲ್ಲೇ ಹಲವಾರು ಅಂಶಗಳು ಸೇರ್ಪಡೆಯಾಗ ಬೇಕಿದೆ.

ಸ್ಪಷ್ಠತೆ ಇರಬೇಕಿದೆ, ಇಲಾಖೆ ಸಮನ್ವಯತೇ ಇಲ್ಲದೆ ಇದ್ದಲ್ಲಿ, ಒಂದು ಕಡೆ ಡಾಟಾ ಸಂಗ್ರಹಣೆ ಕಷ್ಟದ ಮಾತು. ನೀವೂ ನಡೆಯುತ್ತಿರುವ ದಾರಿ ಸರಿ ಇದೆ, ನಾವೂ ಒಂದು ಟೀಮ್ ಆಗಿ ಸಹಕಾರ ನೀಡುತ್ತೇವೆ, ಸಚಿವ ಸಂಪುಟದ ಆದೇಶ ಮಾಡಿಸಿ, ವಾಟರ್ ಪಾಲಿಸಿಯಲ್ಲಿ ಸೇರ್ಪಡೆ ಮಾಡಿಸಿ, ಆ ಪ್ರಕಾರ ಡಾಟಾ ಸಂಗ್ರಹಣೆ ಮತ್ತು ವಿಧಾನಸಭಾ ಕ್ಷೇತ್ರವಾರು ಮೌಲ್ಯಮಾಪನ ಮಾಡಲು ಆರಂಭಿಸಿ ಎಂಬ ಸಲಹೆ ನೀಡುವ ಮೂಲಕ ಹುರಿದುಂಬಿಸಿದರು.