22nd June 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ನಿರ್ದೇಕರಾದ ಶ್ರೀ ಡಾ.ಡಿ.ಕೆ.ಪ್ರಭುರಾಜ್ ರವರೊಂದಿಗೆ ದಿನಾಂಕ:19.04.2022 ನೇ ಮಂಗಳವಾರ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ, ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಕೇಂದ್ರ ಜಲಶಕ್ತಿ ಸಚಿವಾಲಯದ ವಿವಿಧ ಯೋಜನೆಗಳ ಜಿ.ಐ.ಎಸ್. ಲೇಯರ್ ಕೇಂದ್ರ ಸರ್ಕಾರದ ಯೋಜನೆಗಳ ಜಿ.ಐ.ಎಸ್ ಲೇಯರ್ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ರಾಜ್ಯದ 31 ಜಿಲ್ಲೆಗಳ, 227 ತಾಲ್ಲೋಕುಗಳ, 870 ಹೋಬಳಿಗಳ, 6018 ಗ್ರಾಮಪಂಚಾಯಿತಿಗಳ ಸುಮಾರು 30562 ಗ್ರಾಮಗಳ 191791 ಚ.ಕೀಮೀ ವ್ಯಾಪ್ತಿಯ ವಿವಿಧ ಗಡಿ ಪ್ರದೇಶಗಳ, ವಿವಿಧ ಇಲಾಖೆಗಳ ಜಿ.ಐ.ಎಸ್ ಲೇಯರ್ ಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ, ಕೇಂದ್ರ ಸರ್ಕಾರದ ಅನುದಾನದಲ್ಲಿ ಸಾಮಾಜಿಕ ನ್ಯಾಯ ಮತ್ತು ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ಪಡೆಯಲು ಅಗತ್ಯವಿರುವ ಯೋಜನೆಗಳ ಜಿ.ಐ.ಎಸ್.ಲೇಯರ್ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು.

ರಾಜ್ಯದಲ್ಲಿ ಹಲವಾರು ಕಡೆ ಇರುವ ಡಾಟಾ ಗಳನ್ನು ಒಂದೇ ಕಡೆ ಸಂಗ್ರಹ ಮಾಡಲು ಸರ್ಕಾರದಿಂದ ಇದೂವರೆಗೂ ಆಗಿರುವ ಸರ್ಕಾರಿ ಆದೇಶಗಳು, ಪಾಲಿಸಿಗಳು, ಸುತ್ತೋಲೆಗಳ ಬಗ್ಗೆಯೂ ಸುಧೀರ್ಘವಾಗಿ ವಿಷಯ ಹಂಚಿಕೊಳ್ಳಲಾಯಿತು.

ಕೇಂದ್ರದಲ್ಲಿ ಸುಮಾರು 200 ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದಾರೆ, ವಿವಿಧ ವಿಭಾಗಗಳ, ಇಲಾಖೆಗಳ ಹಂಚಿಕೆ ಜೊತೆಗೆ ಒಬ್ಬೊಬ್ಬರಿಗೆ ಒಂದೊಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೊಣೆಗಾರಿಕೆ ನೀಡಿದರೇ ಹೇಗೆ ಎಂಬ ಬಗ್ಗೆಯೂ ಚಿಂತನೆ ನಡೆಸಲಾಯಿತು.

ವಿಜ್ಞಾನಿಗಳಾದ ಶ್ರೀ ಲಿಂಗದೇವರು ಮತ್ತು ಶ್ರೀ ನವೀನ್ ಇದ್ದರು.