27th July 2024
Share

TUMAKURU:SHAKTHIPEETA FOUNDATION

ಸತಿ ದಕ್ಷಬ್ರಹ್ಮನ ಪುತ್ರಿ, ತಪಸ್ಸಿನ ಪಲದಿಂದ ಸತಿ, ಈಶ್ವರನನ್ನು ಇಚ್ಚಿಸಿ ವಿವಾಹ ಮಾಡಿಕೊಂಡಿರುತ್ತಾರೆ. ದಕ್ಷಬ್ರಹ್ಮನಿಗೆ ವಿವಾಹ ಸಮಾಧಾನ ಇರಲಿಲ್ಲವಂತೆ, ದಕ್ಷಬ್ರಹ್ಮ ಯಜ್ಞ ಮಾಡುವಾಗ ಉದ್ದೇಶಪೂರ್ವಕವಾಗಿ  ತನ್ನ ಅಳಿಯ ಶಿವ ಮತ್ತು ಮಗಳು ಸತಿಯನ್ನು ಆಹ್ವಾನ ಮಾಡಿರಲಿಲ್ಲವಂತೆ,  ತನ್ನ ಅಪ್ಪನ ಮನೆ ಕರೆಯದಿದ್ದರೂ ಪರವಾಗಿಲ್ಲ ಎಂದು ಸತಿ ಯಜ್ಞಕ್ಕಾಗಿ ತನ್ನ ತಂದೆಯ ಮನೆ ಬಂದಾಗ, ಮಗಳು ಎಂದು ಯೋಚಿಸದೆ, ಸತಿಗೆ ದಕ್ಷಬ್ರಹ್ಮ ಅವಮಾನ ಮಾಡಿದರಂತೆ.

ಇದರಿಂದ ನೊಂದ ಸತಿ, ನನ್ನ ಪತಿಯನ್ನು ಹೀಯಾಳಿಸಿದ ಮೇಲೆ, ತಂದೆಯಾದರೂ ಪರವಾಗಿಲ್ಲ, ಯಜ್ಞ ಪೂರ್ಣವಾಗಲು ಬಿಡುವುದಿಲ್ಲ, ಎಂದು ಯಜ್ಞಕ್ಕೆ ಬಿದ್ದರಂತೆ. ಸುಟ್ಟ ಸತಿಯ ದೇಹವನ್ನು ಹಿಡಿದು ಈಶ್ವರನು  ರುದ್ರನರ್ತನ ಮಾಡಿದರಂತೆ, ಇದರಿಂದ ಹೆದರಿದ ದೇವತೆಗಳು, ರಾಕ್ಷಸರು ವಿóಷ್ಣುವಿನ ಮೊರೆ ಹೊಕ್ಕರಂತೆ,

ವಿಷ್ಣುವು ಸತಿ ದೇಹವಿದ್ದರೆ ತಾನೆ ಶಿವನಿಗೆ ಕೋಪ ಇರುವುದು, ಸತಿಯ ದೇಹವನ್ನೆ ಇಲ್ಲಾವಾಗಿರಿಸದರೆ ಎಂಬ ಭಾವನೆಯಿಂದ, ತನ್ನ ಸುದರ್ಶನ ಚಕ್ರದಿಂದ ಸತಿ ದೇಹವನ್ನು ಛಿದ್ರ-ಛಿದ್ರ ಮಾಡಿದರಂತೆ, ಇದರಿಂದ ಸತಿಯ ದೇಹದ ಭಾಗಗಳು ಮತ್ತು ಆಭರಣಗಳು  ಸುಮಾರು 108 ಭಾಗವಾಗಿ ಭೂಮಿಯ 108 ಕಡೆ ಬಿದ್ದವು. ಈ  ಸ್ಥಳಗಳೇ ಶಕ್ತಿಪೀಠಗಳಾಗಿವೆ ಎಂಬುದು ಐತಿಹ್ಯ, 

108 ಶಕ್ತಿಪೀಠಗಳಲ್ಲಿ, 51 ಅಕ್ಷರ ಪೀಠಗಳು, 9 ನವದುರ್ಗೆಯರು, 18 ಮಹಾಶಕ್ತಿಪೀಠ, 4 ಆದಿ ಶಕ್ತಿಪೀಠ ಮತ್ತು ಇತರೆ ಉಪ ಪೀಠಗಳು, ಸಿದ್ಧಿಪೀಠಗಳು ಎಂಬುದು ನಂಬಿಕೆ.

ದಕ್ಷ ಬ್ರಹ್ಮನ ಯಜ್ಞ ನಡೆದ ಸ್ಥಳ ಬಾರತ ದೇಶದ, ಉತ್ತರಾಖಂಡ ರಾಜ್ಯದ, ಹರಿಧ್ವಾರ ಜಿಲ್ಲೆಯ, ಕೇಂದ್ರ ಸ್ಥಾನದಲ್ಲಿರುವ ಕಂಕಲ್ ನಲ್ಲಿದೆ, ನಮ್ಮ ತಂಡವು ಈಗಾಗಲೇ ಅಲ್ಲಿಗೆ ಹೋಗಿ ಪೂಜೆ ಮತ್ತು ದರ್ಶನ ಮಾಡಿ ಬರಲಾಗಿದೆ. 

   ಭಾರತ ದೇಶದಲ್ಲಿ-40 ಅಕ್ಷರ ಪೀಠಗಳು, ಬಾಂಗ್ಲಾದೇಶದಲ್ಲಿ-4, ನೇಪಾಳದಲ್ಲಿ-3, ಪಾಕಿಸ್ತಾನದಲ್ಲಿ-1, ಆಪ್ಘಾನಿಸ್ತಾನದಲ್ಲಿ-1 ಶ್ರೀಲಂಕಾದಲ್ಲಿ-1 ಮತ್ತು ಟಿಬಿಟ್‍ನಲ್ಲಿ -1 ಸೇರಿದಂತೆ ಒಟ್ಟು 51 ಅಕ್ಷರ ಪೀಠಗಳು ಮತ್ತು ಉಳಿದ 57 ಶಕ್ತಿ ಪೀಠಗಳು ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿವೆಯಂತೆ. ಗೊಂದಲಮಯವಾಗಿದೆ ಈ ಮಾಹಿತಿ.

51 ಶಕ್ತಿಪೀಠಗಳು, 72 ಶಕ್ತಿಪೀಠಗಳು, 108 ಶಕ್ತಿಪೀಠಗಳು ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನಿಸುತ್ತಾರೆ,  ಅವುಗಳ ಸ್ಥಳ ಮತ್ತು ಇತಿಹಾಸವನ್ನು ಜಿಐಎಸ್ ಲೇಯರ್ ಸಹಿತ ಮಾಹಿತಿಗಳ ಸಂಗ್ರಹ ಕಾರ್ಯ ಹಾಗೂ ಅಧ್ಯಯನ ಆರಂಭಿಸಲಾಗಿದೆ.

ಜೊತೆಗೆ ಭೂಮಿಯ ಮೇಲೆ ಭಾರತ ಸೇರಿದಂತೆ ಎಲ್ಲಾ 7 ದೇಶಗಳ ನಕ್ಷೆ ಮಾಡಿ, ಜಿಐಎಸ್ ಆಧಾರಿತ ನಿರ್ದಿಷ್ಠ ಸ್ಥಳಗಳಲ್ಲಿ ಪ್ರಾತ್ಯಾಕ್ಷಿಕೆ ಮಾಡುವುದೇ ಶಕ್ತಿಪೀಠ ಕ್ಯಾಂಪಸ್ ಪ್ರಮುಖ ಉದ್ದೇಶವಾಗಿದೆ. ಶಕ್ತಿಪೀಠ ಮತ್ತು ನೀರಿಗೆ ಇರುವ ಸಂಭಂಧಗಳ ಅಧ್ಯಯನವೂ ಆರಂಭವಾಗಿದೆ.

ಆದ್ದರಿಂದ ಶಕ್ತಿಪೀಠಗಳ ಯಾತ್ರೆಗೆ ಚಾಲನೆ ನೀಡಲಾಗಿದೆ. ಈ ಯಾತ್ರೆಯಲ್ಲಿ ಈ ಕೆಳಕಂಡ ಮಾಹಿತಿಗಳನ್ನು ಸಂಗ್ರಹ ಮಾಡಲು ಪಟ್ಟಿ ಈಗಾಗಲೇ ಸಿದ್ಧವಾಗಿದೆ. ನಿನ್ನೆ ಬರೆದ ಲೇಖನಕ್ಕೆ ಖ್ಯಾತ ವಕೀಲರಾದ ಶ್ರೀ ಕೆ.ಎನ್.ಶಿವರಾಜ್ ಸೇರಿದಂತೆ ಬಹಳ ಜನರು ಪ್ರತಿಕ್ರೀಯೇ ನೀಡಿ, ಶಕ್ತಿಪೀಠ ಯಾತ್ರೆಯಲ್ಲಿ ಏನೇನು ತರುತ್ತೀರಿ? ಎಂಬ ಬಗ್ಗೆ ಹಲವಾರು ಸಲಹೆ ನೀಡಿದ್ದರಿಂದ ಈ ಪಟ್ಟಿಯನ್ನು ಲಗತ್ತಿಸಲಾಗಿದೆ.

ತಾವೂ ಸಲಹೆ ನೀಡುವ ಅಂಶಗಳನ್ನು ಸೇರ್ಪಡೆ ಮಾಡಲಾಗುವುದು.