1991 ರ ಲ್ಲಿ ಕುಂದರನಹಳ್ಳಿ ಗ್ರಾಮವನ್ನು ಮಾದರಿ ಗ್ರಾಮ ಮಾಡಬೇಕು ಎಂಬ ಕನಸು ಕಂಡವನು ನಾನು. ಬಹುಷಃ ಈ ಹಿನ್ನಲೆಯಲ್ಲಿ ಹೆಚ್.ಎ.ಎಲ್ ಘಟಕ ಆದರೆ ಮಾದರಿ ಗ್ರಾಮ ಆಗಲಿದೆ ಎಂದು, ನನ್ನ ಪೂರ್ಣ ಒತ್ತನ್ನು ಆ ಕಡೆ ಹರಸಿದೆ.
ನನಗೆ ಹಮ್ಮೆಯಿದೆ, ನಮ್ಮೂರಿನ ಜನ ಪ್ರತಿಯೊಬ್ಬರೂ ಸ್ವಾಭಿಮಾನಿಗಳಾಗಿದ್ದಾರೆ. ದುಡಿದು ತಿನ್ನುತ್ತಿದ್ದಾರೆ, ನಾಗರೀಕತೆ ತಾಂಡವಾಡುತ್ತಿದೆ. ತಲಾ ಆದಾಯ, ಅವರ ಕಾರ್ಯ ವೈಖರಿ ಲೆಕ್ಕ ಆಗಿದರೆ, ಸರ್ಕಾರವೇ ಸುಸ್ತಾಗುತ್ತಿದೆ.
ನಮ್ಮೂರಿನ ಬಹುತೇಕ ಕುಟುಂಬಗಳಿಗೆ ಬಡತನ ಕಿತ್ತು ತಿನ್ನುತ್ತಿತ್ತು. ಏನೋ ಒಂದು ಭಯದಿಂದ ಬದುಕು ನಡೆಸುತ್ತಿದ್ದರು. ಅಂದು ಇದ್ದ ಜಮೀನನ್ನು ಹೊಟ್ಟೆಹೊರೆಯಲು ಮಾರಿದ್ದವರು, ಇಂದು ಯಾವುದೋ ಊರಿನಲ್ಲಿಗಾಲಿ ಮಾರಿದಷ್ಟು ಜಮೀನು ಕೊಳ್ಳಲೇ ಬೇಕು ಎಂದು ಕೊಳ್ಳುತ್ತಿದ್ದಾರೆ. ನಿಜಕ್ಕೂ ಹೆಮ್ಮೆ ಅಲ್ಲವೇ? ಇದೆಲ್ಲಾ ಆಗಿದ್ದು ಸ್ವಾಭಿಮಾನದ ದುಡಿಮೆ.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆ ಮಾಡಿದ್ದಾರೆ. ಇವರ ಕಾಲದಲ್ಲಿ ಬಹಳಷ್ಟು ಕೆಲಸವನ್ನು ಈಗಾಗಲೇ ಮಾಡಲಾಗಿದೆ, ಮಾಡಲಾಗುತ್ತಿದೆ, ಇನ್ನೂ ಮಾಡಬೇಕಿದೆ.
ನನಗೆ ಕಾಂಕ್ರೀಟ್ ಕಾಮಗಾರಿಗಳು ಮುಖ್ಯವಲ್ಲ ‘ಮಾನವೀಯತೆ ಗ್ರಾಮ, ಸ್ಬಾಭಿಮಾನದ ಗ್ರಾಮ, ಸೋಂಬೇರಿಗಳಿಲ್ಲದ ಗ್ರಾಮ, ದುಡಿಯುವ ಕೈಗಳ ಗ್ರಾಮ’ ವಾಗಿದೆ ನಮ್ಮೂರು. ಈಗ ‘ಡಾಟಾ ಗ್ರಾಮ’ವಾಗಿ ದೇಶದ ಗಮನ ಸೆಳೆಯ ಬೇಕಷ್ಟೆ.
ಒಂದು ವರ್ಷದಲ್ಲಿ ‘ಡಾಟಾ ಗ್ರಾಮ’ ಘೋಷಣೆ ಆಗಲೇ ಬೇಕು. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆಗಳ ನೆರವನ್ನು ಪಡೆದು ರಾಷ್ಟ್ರದ ಗಮನ ಸೆಳೆಯ ಬೇಕು. ‘ನಾನೇ ಆರಂಭಿಸಿ ಅಪೂರ್ಣವಾಗಿರುವ ಎಲ್ಲಾ ಕೆಲಸಗಳನ್ನು ಪೂರ್ಣ ಗೊಳಿಸಬೇಕು’. ಇದು ನನ್ನ ದೃಢ ಸಂಕಲ್ಪ.
ಸಂಸದರ ಕನಸಿನಂತೆ
- ಊರಿಗೊಂದು ಪುಸ್ತಕ (ಟೋಪೋಶೀಟ್ ನಲ್ಲಿ ಮತ್ತು ಗೂಗಲ್ ಇಮೇಜ್ ನಲ್ಲಿ ಇರುವ ಒಂದು ಸಣ್ಣ ಕಲ್ಲಿನ ಕಥೆಯೂ ಇರಲಿದೆ)
- ಊರಿಗೊಂದು ತಪೋವನ.
- ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು. ಯೋಜನೆ ದೇಶಕ್ಕೆ ಬೆಸ್ಟ್ ಪ್ರಾಕ್ಟೀಸಸ್ ಯೋಜನೆಯಾಗಬೇಕು.
ಒಬ್ಬ ಸಾಮಾನ್ಯ ಮನುಷ್ಯನೂ ಸಹ ಅರ್ಹತೆ ಇರುವ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆಯಲೇ ಬೇಕು. ನಾನು ಇದೂವರೆಗೂ ಹೇಳಿರುವ ಎಲ್ಲಾ ಯೋಜನೆಗಳ ಜಾರಿ ಆಗಲೇ ಬೇಕು. ಸಂಸದರ ಆದರ್ಶ ಗ್ರಾಮದ ಪರಿಕಲ್ಪನೆ ಶೇ 100 ರಷ್ಟು ಜಾರಿಯಾಗಲೇ ಬೇಕು.
ತುಮಕೂರು ಜಿಲ್ಲಾಧಿಕಾರಿಗಳ, ಜಿಲ್ಲಾ ಪಂಚಾಯತ್ ಸಿಇಓ ರವರ, ಎಸ್.ಪಿ.ಯವರ, ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್, ಕರ್ನಾಟಕ ಮುಕ್ತ ದತ್ತಾಂಶ ನೀತಿಯಡಿಯ, ಮಾಹಿತಿ ಕಣಜದ, ಅಂಕಿ ಅಂಶಗಳ ಇಲಾಖೆಯ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಮತ್ತು ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಮುನ್ನುಗ್ಗ ಬೇಕಿದೆ. ಈಗಾಗಲೇ ಎಲ್ಲರೊಂದಿಗೂ ಚರ್ಚೆ ಆರಂಭವಾಗಿದೆ.
ದಿನಾಂಕ:0805.2022 ನೇ ಭಾನುವಾರ ಬೆಳಿಗ್ಗೆ 11 ಗಂಟೆಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಂದ ಚಾಲನೆ ನೀಡಲಾಗುವುದು. ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರನ್ನು ಆಹ್ವಾನಿಸುತ್ತೇನೆ. ಅವರ ಸಹಕಾರವನ್ನು ಪಡೆಯಲು ಇಚ್ಚಿಸಿದ್ದೇನೆ. ಎಲ್ಲಾ ಪಕ್ಷಗಳಲ್ಲಿ ಮುಂದೆ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕನಾಗಬೇಕು ಎಂಬ ಕನಸು ಇರುವವರು ಈ ಸಭೆಗೆ ಆಗಮಿಸಲು ಡಿಜಿಟಲ್ ಆಹ್ವಾನ ನೀಡುತ್ತಿದ್ದೇನೆ.
‘ಆಹ್ವಾನ ಪತ್ರಿಕೆ, ಮನೆ ಮನೆಗೆ ಹೋಗಿ ಕರೆಯುವ ಅಭ್ಯಾಸ/ಪರಂಪರೆ ನಾನು ಹುಟ್ಟು ಹಾಕಿದ ಯಾವುದೇ ಸಂಸ್ಥೆಗಳಿಗೆ ಇಲ್ಲ ಎಂಬುದನ್ನು ಮನವರಿಕೆ ಮಾಡುತ್ತಿದ್ದೇನೆ.’