22nd December 2024
Share

TUMAKURU:SHAKTHIPEETA FOUNDATION

ಮೊನ್ನೆ ವಿವೇಕಾನಂದರ ಅನುಯಾಯಿ ಒಬ್ಬರನ್ನು ಭೇಟಿಯಾಗಿದ್ದೆ. ಅವರು  ನನಗೆ ಖಡಕ್ ಆಗಿ ಕೇಳಿದ ಪ್ರೆಶ್ನೆಗಳು ಮತ್ತು ನಾನು ಹೇಳಿದ ಉತ್ತರದ ಸಾರಾಂಶ ಕೆಳಕಂಡಂತಿದೆ.

  1. ನೀವೂ ಏಕೆ ಶಕ್ತಿಪೀಠ ಕ್ಯಾಂಪಸ್ ಆರಂಭಿಸಿದ್ದೀರಿ- ನನಗೆ ಗೊತ್ತಿಲ್ಲ.
  2. ಶಕ್ತಿಪೀಠ ಕ್ಯಾಂಪಸ್ ಯೋಜನಾ ವೆಚ್ಚ ಎಷ್ಟು- ನನಗೆ ಗೊತ್ತಿಲ್ಲ.
  3. ಶಕ್ತಿಪೀಠ ಕ್ಯಾಂಪಸ್ ಯಾವಾಗ ಪೂರ್ಣಗೊಳಿಸುತ್ತೀರಾ- ನನಗೆ ಗೊತ್ತಿಲ್ಲ
  4. ಶಕ್ತಿಪೀಠ ಬಗ್ಗೆ ಅಧ್ಯಯನ ಮಾಡಿದ್ದೀರಾ- ಆಡಂಬರದ ಅಧ್ಯಯನ ಮಾಡಿಲ್ಲ, ಕುರುಡ ಭಕ್ತಿ.
  5. ಶಕ್ತಿಪೀಠ ಕ್ಯಾಂಪಸ್ ಗೆ ಗುರು ಇದ್ದಾರಾ – ಹೌದು ಹಿಂದಿಮಾಸ್ಟರ್ ಹನುಮಂತರಾಯಪ್ಪನವರು.

ಸುಮಾರು 2.30 ಗಂಟೆಗಳ ಕಾಲ ಸುಧೀರ್ಘ ಚರ್ಚೆ ನಡೆಯಿತು. ಅವರು ಆರ್.ಎಸ್.ಎಸ್ ಕಾರ್ಯಕರ್ತರು ಹೌದು, ಅರ್ಕಿಟೆಕ್ಚರ್ ಪರಿಣಿತರು ಹೌದು. ಧಾರ್ಮಿಕ ಚಿಂತಕರು ಹೌದು.

ಚರ್ಚೆಯ ನಂತರ ಅವರು ಹೇಳಿದ ಮಾತು, ಶಕ್ತಿಪೀಠ ಕ್ಯಾಂಪಸ್ ಮಾಡುತ್ತಿರುವವರು ನಿವಲ್ಲಾ? ನಿವೊಬ್ಬರೂ ನೆಪಮಾತ್ರ, ಹಿಂದಿರುವ ಸಾಧನೆಯೇ ಬೇರೆ, ಎಂದಾಗ ನನ್ನ ಉತ್ತರ ಇರಬಹುದು. ನನ್ನ ಸಹಮತವೂ ಇದೆ ಎಂಬ ಮಾತು ನನ್ನದಾಗಿತ್ತು.ನನಗೂ ಶಕ್ತಿಪೀಠ ಇನ್ನೂ ಪ್ರಶ್ನಾರ್ಹವಾಗಿದೆ.

ಶ್ರೀ ಹನುಮಂತರಾಯಪ್ಪನವರ ಹುಟ್ಟೂರು ಕ್ಯಾತಸಂದ್ರ, ವಾಲ್ಮೀಕಿ ಜನಾಂಗದವರು. ಅವರು ಅದಲಗೆರೆ ಮಾಧ್ಯಮಿಕ ಶಾಲೆಯಲ್ಲಿ ಹಿಂದಿ ಮಾಸ್ಟರ್ ಆಗಿ ಸೇವೆ ಸಲ್ಲಿಸುವಾಗ, ನಮ್ಮೂರಿನಲ್ಲಿ ವಾಸವಾಗಿದ್ದವರು.

ಅವರ ಹವ್ಯಾಸ ಶಾಸ್ತ್ರ ಹೇಳುವುದಾಗಿತ್ತು. ಯಾರಿಗಾದರೂ ಕಾಯಿಲೆ ಬಂದರೆ ಯಂತ್ರ ಬರೆಯುವುದು ಇತ್ಯಾದಿ ಮಾಡುತ್ತಿದ್ದರು.

1988 ನೇ ಇಸವಿಯಲ್ಲಿ ನಮ್ಮ ತಂದೆ, ತಾಯಿಗೆ ಕಾಯಿಲೆ ಆದರೆ ಹಿಂದಿಮಾಸ್ಟರ್ ಡಾಕ್ಟರ್, ಅವರು ಹೇಳಿದ ಹಾಗೆ ನಾವು ಮಾಡಬೇಕಿತ್ತು. ಕಾಯಿಲೆ ಬಂದಾಗ ಅವರು ನನಗೆ ಹೇಳಿದ ಮಾತು ದೇವಿ ಪುಸ್ತಕ ತಂದು ಅವರ ತಲೆದಿಂಬಿನಲ್ಲಿಡು,ನೀನು ಪೂಜೆ ಮಾಡಿ ಓದು.

ಅವರ ಮಾತಿನಂತೆ ದಿನಾಂಕ:01.08.1988 ರಿಂದ ದೇವಿಪುಸ್ತಕವನ್ನು ನಿರಂತರವಾಗಿ  ಓದುತ್ತಿದ್ದೇನೆ, ಅದೇ ಪುಸ್ತಕ ದಿನಾಂಕ:14.04.2022 ರವರೆಗೆ ನಮ್ಮ ತಾಯಿ ಪಾರ್ವತಮ್ಮನವರು ಬದುಕಿರುವವರೆಗೂ ಅವರ ತಲೆದಿಂಬಿನ ಅಡಿ ಇದ್ದಿದ್ದು ಕಟು ಸತ್ಯ.

ನಾನು ನಿರಂತರವಾಗಿ 34 ವರ್ಷ  ದೇವಿಪುಸ್ತಕ ಓದುತ್ತಿರುವುದೇ ಶಕ್ತಿಪೀಠ ಫೌಂಡೇಷನ್ ಸ್ಥಾಪನೆಗೆ ಪ್ರೇರಣೆ. ಅಂದ ಮೇಲೆ ಶ್ರೀ ಹನುಂತರಾಯಪ್ಪನವರು ಶಕ್ತಿಪೀಠ ಕ್ಯಾಂಪಸ್ ಗೆ ಗುರು ಅಲ್ಲವೇ?

ಈ ಹಿನ್ನಲೆಯಲ್ಲಿ ದಿನಾಂಕ:08.05.2022 ನೇ ಭಾನುವಾರ ಬೆಳಿಗ್ಗೆ 11 ಗಂಟೆಗೆ ಹಿಂದಿ ಮಾಸ್ಟರ್ ಶ್ರೀ ಹನುಂತಪ್ಪರಾಯಪ್ಪನವರೊಂದಿಗೆ ಕುಂದರನಹಳ್ಳಿಯಲ್ಲಿ ಮುಕ್ತ ಚರ್ಚೆ ನಡೆಯಲಿದೆ.

ನೋಡಿ ಇದೇ ದಿನ ವಿಶ್ವದ 108 ಶಕ್ತಿಪೀಠಗಳಿಗೆ ಪ್ರವಾಸ, ಜಲಸಂಗ್ರಹಾಗಾರಗಳನ್ನು ಗಂಗಾಮಾತೆ ದೇವಾಲಯಗಳೆಂದು ಪೂಜಿಸಲು ಜನಜಾಗೃತಿ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಜಲಗ್ರಂಥ, ನೀರು ಮತ್ತು ಶಕ್ತಿಪೀಠಗಳ ಸಂಬಂಧದ  ಸಂಶೋಧನೆಗೆ ಚಾಲನೆ ನೀಡಲಾಗುವುದು.

ನೋಡಿ ಒಂದಕ್ಕೊಂದು ಎಲ್ಲಿಗೆ ಸಂಬಂದ. ಶಕ್ತಿಪೀಠ ಗುರುವಿಗೆ ನನ್ನ ನಮನದ ದಿವಸವೇ, ನನ್ನ ತಾಯಿಯ ಸ್ಮರಣೆಯೂ ಹೌದು. ಅದು ಗಂಗಮಲ್ಲಮ್ಮ ದೇವಿಯ ಸಾನಿಧ್ಯದಲ್ಲಿ.