22nd December 2024
Share

.

TUMKURU:SHAKHTIPEETA FOUNDATION

ನದಿ ನೀರಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ, ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗ¼ ವ್ಯಾಪ್ತಿಯಲ್ಲಿನÀ, ಜಲಶಕ್ತಿ ಸಚಿವಾಲಯದ ಪ್ರತಿÀಯೊಂದು ಯೋಜನೆಗಳ ಮೌಲ್ಯಮಾಪನ ಮಾಡಲು, ರಾಜ್ಯ ಸರ್ಕಾರದ ಯೋಜನಾ ಇಲಾಖೆ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ, ಜಲಸಂಪನ್ಮೂಲ ಇಲಾಖೆ ಮತ್ತು ತುಮಕೂರಿನ ಶಕ್ತಿಪೀಠ ಫೌಂಡೇಷನ್  ಶುಭಾರಂಭ ಮಾಡಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಕ್ಷತೆಯ ತುಮಕೂರಿನ ಅಭಾವ ಪೀಡೀತ ಪ್ರದೇಶಗಳ ನೀರಾವರಿ ಅಭಿವೃದ್ಧಿ ಸಲಹಾ ಸಮಿತಿ,(ಅಪ್ನಾಸ್) ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮಹಾಪೋಷಕತ್ವದ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ನಲ್ಲಿ ಕಳೆದ 32 ವರ್ಷಗಳ ಅನುಭವ ಪಡೆದು, ಶಕ್ತಿಪೀಠ ಫೌಂಡೇಷನ್ ಸ್ಥಾಪಿಸಿ, ತನ್ನದೇ ಆದ ಕ್ಯಾಂಪಸ್ ಮಾಡುವ ಮೂಲಕ, ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿ ಕ್ರಾಂತಿಗೆ ಮುನ್ನುಡಿ ಬರೆಯುವ ಪರಿಕಲ್ಪನೆ ನನ್ನದಾಗಿದೆ. ಪ್ರತಿಫಲ 108 ಶಕ್ತಿದೇವತೆಗಳಿಗೆ ಬಿಟ್ಟಿದ್ದು.

ಪೈಲಟ್ ಯೋಜನೆಯಾಗಿ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಯೋಜನೆಗಳಿಂದ, ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರದಿಂದ ಹೆಚ್ಚಿಗೆ ಅನುದಾನ ಪಡೆಯಲು ಮತ್ತು ಸಾಮಾಜಿಕ ನ್ಯಾಯದಡಿ ರಾಜ್ಯದ 224 ವಿಧಾನಸಭಾ ಕ್ಷೇತ್ರಕ್ಕೂ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸುವ ಮೌÀಲ್ಯಮಾಪನ ಮಾಡಲು ದೃಢ ನಿರ್ಧಾರ ಮಾಡಿ, ದಿನಾಂಕ:08.05.2022 ರಂದು ನನ್ನ ಹುಟ್ಟೂರು ಕುಂದರನಹಳ್ಳಿಯಿಂದ ಜನಜಾಗೃತಿ ಆಂದೋಲನ ಆರಂಭಿಸಲಾಗಿದೆ.

ರಾಜ್ಯದ ಸಮಗ್ರ ನೀರಾವರಿಗಾಗಿ ನಮ್ಮ ಸಂಸ್ಥೆಯ ಪರಿಕಲ್ಪನೆ ಬಗೆ,್ಗ ಒಂದು ಪಿಪಿಟಿ ಮತ್ತು ಒಂದು ಕಿರುಹೊತ್ತಿಗೆ ಸಿದ್ಧಪಡಿಸಲು ಚಿಂತನೆ ನಡೆಸಲಾಗಿದೆ. ನನ್ನ ಮನಸ್ಸಿನಲ್ಲಿ ಬಂದ ಅಂಶಗಳ ಒಂದು ಪಟ್ಟಿ ಮಾಡಿ, ನನ್ನ ಸ್ನೇಹಿತ ಜಿಐಎಸ್ ತಜ್ಞ ಶ್ರೀ ಬಸವರಾಜ್ ಸುರಣಗಿಯವರಿಗೆ ರವಾನಿಸಿದ್ದೇನೆ, ದೆಹಲಿಯಲ್ಲಿ ಜಲಶಕ್ತಿ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುವ ನನ್ನ ಸ್ನೇಹಿತರಿಗೂ ರವಾನಿಸಿದ್ದೇನೆ. ಡಾಟಾ ವಿಜ್ಞಾನಿ ಚಿ.ಕೆ.ಆರ್.ಸೋಹನ್ ರವರಿಗೂ ರವಾನಿಸಿದ್ದೇನೆ. ಶ್ರೀ ಹರೀಶ್, ಶ್ರೀ ಮಲ್ಲೇಶ್, ಶ್ರೀ ಸತ್ಯಾನಂದ್ ರವರ ತಂಡಕ್ಕೂ ರವಾನಿಸಿದ್ದೇನೆ.

ನಾನು ಪಟ್ಟಿ ಮಾಡಿರುವ ಪ್ರಕಾರ, ಯಾವುದು ಅನಗತ್ಯ ಅಥವಾ ಇನ್ನೂ ಯಾವುದನ್ನು ಸೇರ್ಪಡೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಲು ಅವರೆಲ್ಲರಿಗೂ ತಿಳಿಸಿದ್ದೇನೆ. ಅವರೆಲ್ಲಾ ಅಂತಿಮ ಗೊಳಿಸಿದ ನಂತರ, ರಾಜ್ಯ ಮಟ್ಟದ ಚಿಂತಕರ ಸಭೆಯಲ್ಲಿ ಪಿಪಿಟಿ ಮಂಡಿಸುತ್ತೇನೆ. ಅವರ ಸಲಹೆಗಳನ್ನು ಸ್ವೀಕರಿಸುತ್ತೇನೆ.

ನಂತರ ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯಲ್ಲಿ ನಮ್ಮ ಸಂಸ್ಥೆ ಮಾಡಿರುವ ಪಿಪಿಟಿಯ ಅಂಶಗಳ ಬಗ್ಗೆ ದೃಢೀಕರಣ ಪಡೆಯಲಾಗುವುದು. ನಂತರ ರಾಜ್ಯ ಮಟ್ಟದ ನೀರಾವರಿ ತಜ್ಞರ ಸಭೆಯಲ್ಲಿ ಮಂಡಿ¸ಲಾಗುವುದು. ಅವರ ಸಲಹೆಗಳನ್ನೂ ಸೇರ್ಪಡೆ ಮಾಡಲಾಗುವುದು.

ಇಷ್ಟೆಲ್ಲಾ ಆದ ನಂತರ ಮಾನ್ಯ ಮುಖ್ಯಮಂತ್ರಿಯವರ ಸಂದೇಶದೊಂದಿಗೆ ರಾಜ್ಯಾಧ್ಯಾಂತ ಸಂಚರಿಸಿ, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲರ ಸಲಹೆಗಳೊಂದಿಗೆ ಅಂತಿಮ ಮೌಲ್ಯ ಮಾಪನ ವರದಿ ಸಿದ್ಧಪಡಿಸಲಾಗುವುದು.

ಆಸಕ್ತರು ಸಲಹೆ ಸಹಕಾರ ನೀಡಲು ಬಹಿರಂಗ ಡಿಜಿಟಲ್ ಮನವಿ.