27th July 2024
Share

TUMAKURU:SHAKTHIPEETA FOUNDATION

 ಕೇಂದ್ರ ಸರ್ಕಾರ ದೇಶಾಧ್ಯಾಂತ ನಗರ ಪ್ರದೇಶಗಳ ಸಿಟಿ ವಾಟರ್ ಆಕ್ಷನ್ ಪ್ಲಾನ್ ಮತ್ತು ಸಿಟಿ ವಾಟರ್ ಬ್ಯಾಲೆನ್ಸ್  ಪ್ಲಾನ್ ಮಾಡಲು ಸೂಚಿಸಿದೆ. ಅಮೃತ್-2 ಯೋಜನೆಯಡಿಯಲ್ಲಿ ಈ ಬಗ್ಗೆ ವಿಶೇಷವಾದ ಗಮನ ಹರಿಸಿದೆ.

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ, ತುಮಕೂರು ಸಿಟಿ ವಾಟರ್ ಆಕ್ಷನ್ ಪ್ಲಾನ್ ಮತ್ತು ತುಮಕೂರು ಸಿಟಿ ವಾಟರ್ ಬ್ಯಾಲೆನ್ಸ್  ಪ್ಲಾನ್ ಬಗ್ಗೆ ಸಮಾಲೋಚನೆ ನಡೆಸಲು ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ನಡೆಯಿತು. ಈ ಸಭೆಯಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, 

ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾರವರು ಈಗಾಗಲೇ ಕೇಂದ್ರ ಸರ್ಕಾರದ ಪೋರ್ಟಲ್ ಗೆ ಅಫ್ ಲೋಡ್ ಮಾಡಿರುವ ಮಾಹಿತಿಯನ್ನು ಹಂಚಿಕೊಂಡರು. ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಅಮೃತ್-2 ಯೋಜನೆಯಂತೆ  ತುಮಕೂರು ಸಿಟಿ ವಾಟರ್ ಆಕ್ಷನ್ ಪ್ಲಾನ್ ಮತ್ತು ತುಮಕೂರು ಸಿಟಿ ವಾಟರ್ ಬ್ಯಾಲೆನ್ಸ್  ಪ್ಲಾನ್ ಮಾಡಬೇಕಾದರೆ, ತುಮಕೂರು ನಗರ ಜನ್ಮ ತಾಳಿದ ದಿವಸದಿಂದ ಈವರೆಗಿನ ಕುಡಿಯುವ ನೀರಿನ ಯೋಜನೆಗಳಾದ ಮೈದಾಳ ಕುಡಿಯುವ ನೀರಿನ ಯೋಜನೆ, ಹೇಮಾವತಿ ಒಂದನೇ ಹಂತದ ಯೋಜನೆ, ಹೇಮಾವತಿ ಎರಡನೇ ಹಂತದ ಯೋಜನೆ, 24/7 ಕುಡಿಯುವ ನೀರಿನ ಯೋಜನೆಗಳ ಬಗ್ಗೆ, ಇತಿಹಾಸ ಸಹಿತ ಜಿಐಎಸ್ ಲೇಯರ್ ನೊಂದಿಗೆ ಮಾಹಿತಿ ಒಂದೆಡೆ ಇರಬೇಕು.

 ಎಷ್ಟು ಮನೆಗಳಿಗೆ ಈಗಾಗಲೇ ಕುಡಿಯುವ ನೀರಿನ ನಲ್ಲಿ ಸಂಪರ್ಕ ನೀಡಲಾಗಿದೆ, ಎಷ್ಟು ಮನೆಗಳು ಅನಧಿಕೃತವಾಗಿ ನಲ್ಲಿ ಸಂಪರ್ಕ ಪಡೆದಿವೆ, ಇನ್ನೂ ಎಷ್ಟು ಮನೆಗಳಿಗೆ ಹೊಸದಾಗಿ ಯೋಜನೆ ರೂಪಿಸಬೇಕು ಎಂಬ ಬಗ್ಗೆ, ಓವರ್ ಹೆಡ್ ಟ್ಯಾಂಕ್ ವಾರು, ವಾಲ್ವ್ ವಾರು, ನಲ್ಲಿವಾರು, ಸ್ವತ್ತಿನವಾರು ಇತಿಹಾಸ ಸಹಿತ ಜಿಐಎಸ್ ಲೇಯರ್ ನೊಂದಿಗೆ ಮಾಹಿತಿ ಒಂದೆಡೆ ಇರಬೇಕು.

ಅದೇ ರೀತಿ ಒಂದನೇ ಹಂತದ ಯುಜಿಡಿ, ಎರಡನೇ ಹಂತದ ಯುಜಿಡಿ, ಮಿಸ್ಸಿಂಗ್ ಯುಜಿಡಿ ಸಂಪರ್ಕ, ಇನ್ನೂ ಹೊಸದಾಗಿ ನೀಡಬೇಕಾಗಿರುವ ಯುಜಿಡಿ ಸಂಪರ್ಕ, ಕೊಳಚೆ ನೀರು, ಕೊಳಚೆ ನೀರಿನ ಸಂಸ್ಕರಣೆ ಘಟಕಗಳು ಇತ್ಯಾದಿ ಬಗ್ಗೆ ಇತಿಹಾಸ ಸಹಿತ ಜಿಐಎಸ್ ಲೇಯರ್ ನೊಂದಿಗೆ ಮಾಹಿತಿ ಒಂದೆಡೆ ಇರಬೇಕು.

  ಮಳೆ ನೀರು, ರಾಜಕಾಲುವೆಗಳು, ಜಲಸಂಗ್ರಹಾಗಾರಗಳು, ಕೆರೆ-ಕಟ್ಟೆಗಳು, ಬಾವಿಗಳು, ಬೋರ್ ವೆಲ್ ಗಳು ಸೇರಿದಂತೆ  ಕರಾರುವಕ್ಕಾದ ಎಲ್ಲಾ ಮಾಹಿತಿಗಳು ಇತಿಹಾಸ ಸಹಿತ ಜಿಐಎಸ್ ಲೇಯರ್ ನೊಂದಿಗೆ ಮಾಹಿತಿ ಒಂದೆಡೆ ಇರಬೇಕು.

ಇಷ್ಟು ಮಾಹಿತಿ ಇಲ್ಲದೆ ‘ತುಮಕೂರು ಸಿಟಿ ವಾಟರ್ ಆಕ್ಷನ್ ಪ್ಲಾನ್ ಮತ್ತು ತುಮಕೂರು ಸಿಟಿ ವಾಟರ್ ಬ್ಯಾಲೆನ್ಸ್  ಪ್ಲಾನ್ ಮಾಡಲು ಹೇಗೆ ಸಾಧ್ಯ?

ಈ ಬಗ್ಗೆ ಸಂಭಂಧಿಸಿದ ಎಲ್ಲಾ ಇಲಾಖೆಗಳ ನಿಖರವಾದ ಮಾಹಿತಿ ಸಂಗ್ರಹಿಸಿ, ಈ ಬಗ್ಗೆ ಯಾವುದಾದರೂ ಸಂಸ್ಥೆಯವರು ಅಧ್ಯಯನ ಮಾಡಿದ್ದರೆ, ಅಂತಹ ವರದಿಗಳನ್ನು ಪಡೆದುಕೊಂಡು ನಿಯಮಗಳಂತೆ ಪಕ್ಕಾ ವರದಿ ಸಿದ್ಧಪಡಿಸಲು ಉಪಮೇಯರ್, ಶಾಸಕರು,ಸಂಸದರು ಮತ್ತು ದಿಶಾ ಸಮಿತಿ ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರು.

ಈ ಬಗ್ಗೆ ಸಾರ್ವಜನಿಕರಿಂದ ಸೂಕ್ತ ಸಲಹೆಗಳನ್ನು ಬಹಿರಂಗವಾಗಿ ಆಹ್ವಾನಿಸಲಾಗಿದೆ.