22nd December 2024
Share

TUMAKURU:SHAKTHIPEETA FOUNDATION

ನಾನು ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು, ತುಮಕೂರಿನ ಆಲದ ಮರದ ಪಾರ್ಕ್‍ಗೆ ಬಂದಾಗ, 100 ದಿವಸದೊಳಗೆ ತುಮಕೂರಿನಲ್ಲಿರುವ ಉಧ್ಯಾನವನಗಳನ್ನು ನಿರ್ವಹಣೆಗಾಗಿ ದತ್ತು ನೀಡುವ ಮೂಲಕ, ತುಮಕೂರು ನಗರವನ್ನು ಹಸಿರು ತೋಪು ಮಾಡಲಾಗುವುದು ಹಾಗೂ ಇಡೀ ನಗರದ ಹಸೀರಕರಣಕ್ಕೆ ಒಂದು ದೃಢ ನಿರ್ಧಾರವನ್ನು, ಈ ಆಲದ ಮರದ ಪಾರ್ಕ್‍ನ ನಿರ್ವಹಣೆ ಮಾಡುತ್ತಿರುವ ತುಮಕೂರು ಪ್ರೆಸ್ ಕ್ಲಬ್ ನವರ ಸಹಭಾಗಿತ್ವದಲ್ಲಿ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದೆ.

ಇಂದಿಗೆ 33 ದಿನಗಳದರೂ, ಇದೂವರೆಗೂ ತುಮಕೂರು ಪ್ರೆಸ್ ಕ್ಲಬ್ ನವರು 100 ದಿವಸದ ಘೋಷಣೆ ಬಗ್ಗೆ ಚಕಾರವೆತ್ತಿಲ್ಲ. ನಾನೂ ಅವರೊಂದಿಗೂ ಈ ಬಗ್ಗೆ ಮಾತನಾಡಿಲ್ಲ.

ಆದರೇ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಶಕ್ತಿಪೀಠ ಫೌಂಡೇಷನ್ ಮಾತ್ರ ನಿರಂತರವಾಗಿ ಉಧ್ಯಾನವನಗಳ ಪತ್ತೆಗಾಗಿ ಭೇಟೆ ಆಡುತ್ತಲೇ ಬಂದಿವೆ. ಕಡೇ ಪಕ್ಷ ದಾಖಲೆಯಲ್ಲಾದರೂ ವಿವಿಧ ಮಾದರಿಯ 939 ಉಧ್ಯಾನವನಗಳು ಎಂದು ಹೇಳುವ ಹಂತಕ್ಕೆ ತಲುಪಿದ್ದೇವೆ, ನಿಖರವಾಗಿ 100 ದಿವಸದೊಳಗೆ ಘೋಷಣೆ ಮಾಡಿಯೇ ತೀರುತ್ತೇವೆ.

ನಿನ್ನೆ ದಿನಾಂಕ: 17.06.2022 ರಂದು ತುಮಕೂರು ಮಹಾನಗರ ಪಾಲಿಕೆಗೆ ಜಿಐಎಸ್ ತಜ್ಞರೊಂದಿಗೆ  ಭೇಟಿ ನೀಡಿದೆ, ನಮ್ಮ ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಪಾಲಿಕೆಯಿಂದ ಹೊರ ಬರುತ್ತಿದ್ದವರು ನನ್ನ ನೋಡಿ, ಈ ದಿನ ಯಾವ ಇನ್ವೆಸ್ಟಿಗೇಷನ್ ಸಾರ್ ಎಂದು ಜೋಕ್ ಮಾಡಿದರು, ನಾನು ಅಮೃತ್-2 ಯೋಜನೆ ಪ್ರಸ್ತಾವನೆ ಸಾರ್ ಎಂದಾಗ, ಅಲ್ಲಿದ್ದ ಆಯುಕ್ತರಾದ ಶ್ರೀ ಮತಿ ರೇಣುಕರವರಿಗೆ ಪಕ್ಕಾ ಪ್ರಸ್ತಾವನೆ ಶೀಘ್ರದಲ್ಲಿ ನನ್ನ ಕೈ ಸೇರಬೇಕು ಎಂದು ಖಡಕ್ ಸೂಚನೆ ನೀಡಿದರು.

  1. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದವರು 2010 ರವರೆಗಿನ ನೀಡಿರುವ ಉಧ್ಯಾನವನಗಳ ಪಟ್ಟಿ -520
  2. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದವರು 2010 ರಿಂದ 2021 ರವರೆಗಿನ ನೀಡಿರುವ ಉಧ್ಯಾನವನಗಳ ಪಟ್ಟಿ-344
  3. ತುಮಕೂರು ಸ್ಮಾರ್ಟ್ ಸಿಟಿಯವರು ಹೆ.ಟಿ.ಲೈನ್ ಅಕ್ಕ-ಪಕ್ಕ ನಿರ್ಮಾಣ ಮಾಡಿರುವ ಉಧ್ಯಾನವನಗಳ ಪಟ್ಟಿ-48
  4. ಆಲದ ಮರದ ಪಾರ್ಕ್ 1
  5. ತುಮಕೂರು ನಗರದಲ್ಲಿರುವ ಕೆರೆ-ಕಟ್ಟೆಗಳ ಸುತ್ತ ನಿರ್ಮಾಣ ಮಾಡಿರುವ ಹಾಗೂ ನಿರ್ಮಾಣ ಮಾಡಲಿರುವ ಪಾರ್ಕ್ ಸುಮಾರು-22
  6. ಅಕ್ಕ-ತಂಗಿ ಕೆರೆ-3
  7. ತುಮಕೂರು ಮಹತ್ಮಾ ಗಾಂಧಿ ಸ್ಟೇಡಿಯಂ ಸುತ್ತ ಇರುವ ಆಯುಷ್ ಪಾರ್ಕ್-1

ಒಟ್ಟು-939 ಆಗಬಹುದು, ನಿಖರವಾಗಿ ಎಲ್ಲಾ ಇಲಾಖೆಗಳು ಘೋಷಣೆ ಮಾಡಿದ ನಂತರ ಪಕ್ಕ ಡಾಟಾ ಹೇಳಬಹುದು.

ದಿನಾಂಕ: 17.06.2022 ರಂದು ತುಮಕೂರು ಮಹಾನಗರ ಪಾಲಿಕೆ  ಆಯುಕ್ತರಾದ ಶ್ರೀಮತಿ ರೇಣುಕರವರೊಂದಿಗೆ ಉಧ್ಯಾನವನಗಳ ಮಾಹಿತಿಗಾಗಿ ಸಮಾಲೋಚನೆ

ದಿನಾಂಕ: 17.06.2022 ರಂದು ತುಮಕೂರು ಸ್ಮಾರ್ಟ್ ಸಿಟಿ ಎಂ.ಡಿ. ಶ್ರೀ ರಂಗಸ್ವಾಮಿರವರೊಂದಿಗೆ ಉಧ್ಯಾನವನಗಳ ಮಾಹಿತಿಗಾಗಿ ಸಮಾಲೋಚನೆ

ದಿನಾಂಕ: 17.06.2022 ರಂದು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀ ಯೋಗಾನಂದ್ ರವರೊಂದಿಗೆ ಉಧ್ಯಾನವನಗಳ ಮಾಹಿತಿಗಾಗಿ ಸಮಾಲೋಚನೆ