18th April 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿ ನೀರಾವರಿ ಯೋಜನೆಗಳ ಜಾರಿಗೆ   ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ರೂಪುರೇಷೆಗಳನ್ನು ನಿರ್ಧರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿ ಹೊಳೆಯವರು ಘೋಶಿಸಿದರು.

 ದಿನಾಂಕ:11.05.2020 ರಂದು ಕರ್ನಾಟಕ ನೀರಾವರಿ ನಿಗಮದ ಸಭಾಂಗಣದಲ್ಲಿ ನಡೆದ  WATER BUDGET- WATER AUDIT- WATER STRATAGY ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

  ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ತಯಾರಿಸಿರುವ ಸ್ಟೇಟ್ ಇರ್ರಿಗೇಷನ್ ಪ್ಲಾನ್ ಪ್ರಕಾರ ರಾಜ್ಯಕ್ಕೆ ಅಗತ್ಯವಾಗಿರುವ ನೀರು ಸುಮಾರು 2828.77  ಟಿಎಂಸಿ ಅಡಿ ನೀರು, ಎಲ್ಲಾ ಮೂಲಗಳಿಂದ ದೊರೆಯುವ ನೀರು ಸುಮಾರು 1475.119  ಟಿಎಂಸಿ ಅಡಿ ನೀರು, ಕೊರತೆ ಇರುವ ನೀರು ಸುಮಾರು 1353.665 ಟಿಎಂಸಿ ಅಡಿ ನೀರು, ಈ ಕೊರತೆಯನ್ನು ಸರಿದೂಗಿಸಲು ಇರುವ ಮಾರ್ಗೋಪಾಯಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.

  ನೀರಾವರಿ ಯೋಜನೆಯಲ್ಲಿ ಯಾವುದೇ ರೀತಿಯ ಪಕ್ಷ ರಾಜಕಾರಣ ಮಾಡಬಾರದು, ಯಾವುದೇ ಯೋಜನೆಯಲ್ಲಿ ಯಾವುದೇ ವೈಫಲ್ಯಗಳಿದ್ದಲ್ಲಿ ಅವುಗಳನ್ನು ಸರಿಪಡಿಸಿ ಯೋಜನೆಯ ಯಶಸ್ವಿಗೆ ಶ್ರಮಿಸಲು ಅಧಿಕಾರಿಗಳಿಗೆ ಸೂಚಿಸಿದರು.

  ಮೊದಲ ಹಂತದಲ್ಲಿ ರಾಜ್ಯಕ್ಕೆ ನಿಗದಿಯಾಗಿರುವ ಎಲ್ಲಾ ನದಿಪಾತ್ರಗಳ ನೀರನ್ನು ವೈಜ್ಞಾನಿಕವಾಗಿ  ಸಂಪೂರ್ಣವಾಗಿ ಬಳಸಿಕೊಳ್ಳಲು ಇಸ್ರೇಲ್ ಮಾದರಿಯ ಮೈಕ್ರೋ ಇರ್ರಿಗೇಷನ್ ಪದ್ಧತಿಗೆ ಆಧ್ಯತೆ. ರಾಜ್ಯದ ಪ್ರತಿ ಗ್ರಾಮಗಳ  WATER BUDGET- WATER AUDIT- WATER STRATAGY ಮಾಡಲು ಯಾವ, ಯಾವ ಇಲಾಖೆಗಳಲ್ಲಿ ಏನೇನು ಯೋಜನೆ ಜಾರಿ ಮಾಡಬೇಕು ಎಂಬ ಬಗ್ಗೆ ಮಾಹಿತಿ ಕ್ರೋಢೀಕರಿಸಿ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

  ಸಭೆಯಲ್ಲಿ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ, ಜಲಗ್ರಾಮ ಕ್ಯಾಲೆಂಡರ್, ಡಿಜಿಟಲ್ ಡೇಟಾ. ಜಿಐಎಸ್ ಲೇಯರ್, ರಾಜ್ಯದ್ಯಾಂತ ಕೈಗೊಳ್ಳಲು ಸಾಧ್ಯತೆ ಇರುವ ಏತ ನೀರಾವರಿ ಯೋಜನೆಗಳು, ಅಂತರ ರಾಜ್ಯ ವಿವಾದಗಳು, ಆಯವ್ಯಯದಲ್ಲಿನ ಯೋಜನೆಗಳು, ಕೇಂದ್ರ ಸರ್ಕಾರದ ಅನುದಾನದ ಯೋಜನೆಗಳು, ತುಮಕೂರು ಜಿಲ್ಲಾ ನೀರಾವರಿ ಯೋಜನೆಗಳು ಇತ್ಯಾದಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

  ಸಭೆಯಲ್ಲಿ ಸಂಸದ ಶ್ರೀ ಜಿ.ಎಸ್.ಬಸವರಾಜ್, ಜಲಸಂಪನ್ಮೂಲ ಸಚಿವಾಲಯದ ಅಪರಮುಖ್ಯ ಕಾರ್ಯದರ್ಶಿಗಳಾದ ಶ್ರೀ ರಾಕೇಶ್ ಸಿಂಗ್, ಕಾರ್ಯದರ್ಶಿ ಶ್ರೀ ಲಕ್ಷ್ಮಣ ರಾವ್ ಪೇಶ್ವೆ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಶ್ರೀ ಮೃತ್ಯುಂಜಯ ಸ್ವಾಮಿ, ಶ್ರೀ ರುದ್ರಯ್ಯ, ಶ್ರೀ ಅನಿಲ್ ಕುಮಾರ್, ಶ್ರೀ ಮಲ್ಲಿಕಾರ್ಜುನ ಗುಂಗೆ, ಶ್ರೀ ರಾಜೆಂದ್ರ, ಶ್ರೀ ಪೋತ್ದಾರ್, ಶ್ರೀ ಮಹೇಶ್, ಶ್ರೀ ಬಂಗಾರುಸ್ವಾಮಿ, ಶ್ರೀ ಚಲುವರಾಜ್, ಶ್ರೀ ಮೋಹನ್, ಶ್ರೀ ಮನೋಹರ್ ರೊಟ್ಟೆ ಸೇರಿದಂತೆ ಹಲವಾರು ಮುಖ್ಯ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

 ನೀರಾವರಿ ಚಿಂತಕರುಗಳಾದ ಶ್ರೀ ಕ್ಯಾಪ್ಟನ್ ರಾಜರಾಂ, ಶ್ರೀ ಪ್ರಕಾಶ್, ಶ್ರೀ ರಂಗನಾಥ್, ಶ್ರೀ ಸತ್ಯಾನಂದ್, ಶ್ರೀ ವೇದಾನಂದಮೂರ್ತಿ, ಕುಂದರನಹಳ್ಳಿ ರಮೇಶ್, ಶ್ರೀ ಸಂದೀಪ್ ನಾಡಿಗರ್ ಇನ್ನೂ ಮುಂತಾದವರು ಭಾಗವಹಿಸಿದ್ದರು.