TUMAKURU: SHAKTHIPEETA FOUNDATION
ತುಮಕೂರಿನ ಶಕ್ತಿಪೀಠ ಫೌಂಡೇಷನ್ ಸಿದ್ಧಪಡಿಸಲು ತಯಾರಿಸಿರುವ ಕರಡು ಪ್ರತಿ ನಿಮ್ಮ ಸಲಹೆ ಮತ್ತು ಅಭಿಪ್ರಾಯಗಳಿಗಾಗಿ ಟೇಬಲ್ ನಲ್ಲಿರುವ ಮೂವತ್ತು ಅಂಶಗಳ ಬಗ್ಗೆ ಪ್ರತಿಕ್ರೀಯೆ ನೀಡಬಹುದು.
ದೇಶದ 100 ಜಿಲ್ಲೆಗಳ ಸಮಗ್ರ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ 2020-21 ನೇ ಆಯವ್ಯಯದಲ್ಲಿ ಘೋಶಿಸಿದೆ.
ತುಮಕೂರು ಸಂಸದ ಶ್ರೀ ಜಿ.ಎಸ್.ಬಸವರಾಜ್ರವರ ಮನವಿ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರಿಗೆ ಪತ್ರ ಬರೆದು ತುಮಕೂರು ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಯೋಜನೆಗೆ ಫೈಲಟ್ ಯೋಜನೆಯಾಗಿ ಕೈಗೊಳ್ಳಲು ಮನವಿ ಮಾಡಿದ್ದಾರೆ.
ನೀರಾವರಿ ಯೋಜನೆಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಯೋಜನೆಗಳ ಕನ್ವರ್ರ್ಜೆನ್ಸ್ ಮಾಡಿ ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಜಲಶಕ್ತಿ ಸಚಿವಾಲಯ ಘೋಶಿಸಿದೆ.
ಕೇಂದ್ರದಲ್ಲಿ ಜಲಶಕ್ತಿ ಸಚಿವಾಲಯ ಒಂದೇ ಆದರೂ- ನಮ್ಮ ರಾಜ್ಯದಲ್ಲಿ ಹಲಾವರು ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಸಬೇಕಾಗ ಬಹುದು.
ಈ ಕೆಳಕಂಡ ಯೋಜನೆಗಳ ಜಾರಿಗೆ ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 2457 ಗ್ರಾಮಗಳಿಗೆ ಅನುದಾನ ನೀಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆ
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ 2016 ರಲ್ಲಿ ತುಮಕೂರು ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್ ಪ್ರಕಾರ ಪ್ರತಿಯೊಂದು ಇಲಾಖೆಯು ತಯಾರಿಸಿರುವ ಜಲಸಂಗ್ರಹಾಗಾರ ಮತ್ತು ಹಾಲಿ ಇರುವ, ಒಣಗಿರುವ ಮತ್ತು ಹೊಸದಾಗಿ ಕೈಗೊಳ್ಳಬೇಕಾಗಿರುವ ಜಲಸಂಗ್ರಹಾಗಾರಗಳ ಡಿಜಿಟಲ್ ಗಣತಿಯ ಜಲಗ್ರಾಮ ಕ್ಯಾಲೆಂಡರ್.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಲ್ಲಿ ಹಾಲಿ ಇಲಾಖಾವಾರು ಯೋಜನೆಗಳಿಂದ ಈ ಯೋಜನೆಗಳಿಗೆ ಅನುದಾನ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಲ್ಲಿ ಯಾವುದೇ ಯೋಜನೆಗಳು ಇಲ್ಲದಿದ್ದಲ್ಲಿ ಹೊಸ ಯೋಜನೆ ಜಾರಿ.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ರೈತರ ಪಾಲು ಬಾಂಡ್ಗಳ ಮೂಲಕ ಮತ್ತು ಹೊರ ದೇಶಗಳಿಂದ ಸಾಲದ ’ಪಿಪಿಪಿ’ ಯೋಜನೆ ಜಾರಿ. ಪ್ರತಿಯೊಂದು ಯೋಜನೆಯಿಂದ ದೊರೆಯುವ ನೀರು ಮತ್ತು ತಗಲುವ ವೆಚ್ಚ ಪ್ರತಿ ಗ್ರಾಮವಾರು/ಯೋಜನಾವಾರು ಇರಬೇಕು.