TUMAKURU:SHAKTHIPEETA FOUNDATION
ಕೇಂದ್ರ ಸರ್ಕಾರ ದೇಶದ ಪ್ರತಿಯೊಂದು ಗ್ರಾಮದಲ್ಲಿ ಯಾರು ಕಿಸಾನ್ ಸಮ್ಮಾನ್ ಪಲಾನುಭವಿಗಳಿದ್ದಾರೆ ಎಂಬ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಒಂದು ಬೃಹತ್ ಆಂದೋಲವನ್ನೇ ಮಾಡಿದೆ. ಇದು ನಿಜಕ್ಕೂ ಪಾರದರ್ಶಕತೆಗೆ ಸಾಕ್ಷಿಯಾಗಿದೆ.
ಇದರಿಂದ ಅರ್ಹರಿಗೆ ಮೋಸವಾಗುವುದಿಲ್ಲಾ. ಉಳ್ಳವರು ಯೋಜನೆಯ ಪಲಾನುಭವಿಗಳಾಗಿದ್ದಲ್ಲಿ ಜನರೇ ಸರ್ಕಾರಕ್ಕೆ ತಿಳಿಸಲು ಅನುಕೂಲವಾಗಲಿದೆ. ಇದು ಎಲ್ಲಾ ವಿಧವಾದ ಸರ್ಕಾರದ ಸವಲತ್ತುಗಳು ಮತ್ತು ಕೋಟ್ಯಾನು ಕೋಟಿ ಸಾಲ ಪಡೆಯುವ ಖಧೀಮರ ಪಟ್ಟಿಯನ್ನು ಗ್ರಾಮವಾರು/ಬಡಾವಾಣೆವಾರು ಪ್ರಕಟಿಸಲು ಕೇಂದ್ರ ಸರ್ಕಾರ ಮುಂದಾಗುವುದು ಒಳ್ಳೆಯ ಬೆಳವಣಿಗೆ.
ತುಮಕೂರು ಜಿಐಎಸ್‌ನಲ್ಲಿ ಜಿಲ್ಲೆಯ ಎಲ್ಲಾ 2457 ಗ್ರಾಮಗಳ ಎಲ್ಲಾ ವಿಧವಾದ ಪಲಾನುಭವಿಗಳ ಪಟ್ಟಿಯನ್ನು ಪ್ರಕಟಿಸುವ ಕಾರ್ಯಕ್ಕೆ ನಿರಂತರ ಒತ್ತಡ ಹಾಕಲಾಗುತ್ತಿದೆ.
ಇನ್‌ವೆಸ್ಟ್ ತುಮಕೂರು ಅಂಗವಾಗಿ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿ, ಕೈಗಾರಿಕಾ ವಸಾಹತುವಿನಲ್ಲಿ ಹಾಲಿ ಯಾವ ಉದ್ಧಿಮೆ ಯಾವ ಸ್ಥಿತಿಯಲ್ಲಿದೆ, ಪ್ರಸ್ತುತ ಯಾರು ಎಷ್ಟು ಮೊತ್ತದ ಯೋಜನೆ ಕೈಗೊಳ್ಳಲು ಉದ್ದೇಶಿಸಿದ್ದಾರೆ. ಮೂಲಭೂತ ಸೌಕರ್ಯಗಳು ಮತ್ತು ಅವರಿಗೆ ಅಗತ್ಯವಾಗಿ ಬೇಕಾದ ಮಾಹಿತಿಗಳ ಇತಿಹಾಸವುಳ್ಳ ’ಜಿಐಎಸ್ ಲೇಯರ್’ ಮಾಡುವ ಮೂಲಕ ಪಾರದರ್ಶಕತೆಗೆ ಒತ್ತು ನೀಡಲು ಚಿಂತನೆ ನಡೆಸಲಾಗಿದೆ.
ಬಹುಷಃ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಮುದ್ರ, ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ, ಸ್ಟಾರ್ಟ್ ಅಫ್, ಎಂಎಸ್‌ಎಂಇ, ಸಂಪದ, ಕ್ಲಸ್ಟರ್, ಮೆಗಾ ಪಾರ್ಕ್, ಸ್ಕಿಲ್ ಇಂಡಿಯಾ, ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನಾ ಯೋಜನೆ, ಹೀಗೆ ಹಲವಾರು ಯೋಜನೆಗಳ ನೆರವು ನಿರ್ಧಿಷ್ಠವಾಗಿ ಯಾರಿಗೆ ದೊರಕಿದೆ ಎಂಬ ಬಗ್ಗೆ ಇಲಾಖಾವರು ಯೋಜನೆಗಳವಾರು ಇತಿಹಾಸ ಒಂದೇ ಕಡೆ ಬರಲಿದೆ.
ಇದರ ಜೊತೆಗೆ ರಾಜ್ಯ ಸರ್ಕಾರದ ಯೋಜನೆಗಳಾದ ಮುಖ್ಯ ಮಂತ್ರಿಗಳ ಸ್ವಯಂ ಉದ್ಯೋಗ ಸೃಜನ ಯೋಜನೆ ಸೇರಿದಂತೆ ಎಲ್ಲಾ ಇಲಾಖೆಗಳ ಮೂಲಕ ಅನುಷ್ಠಾನ ಗೊಂಡಿರುವ ಯೋಜನೆಗಳ ಮಾಹಿತಿಯೂ ಇರಲಿದೆ. ಯಾರ ಸಹಾಯವೂ ಇಲ್ಲದೆ ಅವರೇ ಸ್ವಂತ ಕೈಗೊಂಡಿರುವ ಯೋಜನೆಗಳ ಮಾಹಿತಿಯೂ ಬರಲಿದೆ. ತುಮಕೂರು ಜಿಲ್ಲೆಯಲ್ಲಿ ಯಾವುದೇ ಯೋಜನೆಗೆ ಭೂ ಸ್ವಾಧೀನ ಮಾಡಿಕೊಂಡಿರುವ ಕುಟುಂಬದ ಇತಿಹಾಸವೂ ದೊರೆಯಲಿದೆ.
ಸುಮಾರು ಒಂದು ಗ್ರಾಮದ ಪೆಟ್ಟಿಗೆ ಅಂಗಡಿಯಿಂದ ಆರಂಭಿಸಿ, ತುಮಕೂರಿನಲ್ಲಿ ಪ್ರಾರಂಭವಾಗುವ ಇಸ್ರೋವರೆಗೂ ಮಾಹಿತಿಯನ್ನು ಜಿಐಎಸ್ ಆಧಾರಿತ ಡಿಜಿಟಲ್ ಮಾಡಲು ಆಸಕ್ತಿ ಇರುವ ಸಂಘ ಸಂಸ್ಥೆಗಳು, ಕಂಪನಿಗಳು, ವ್ಯಕ್ತಿಗಳು ಇದ್ದಲ್ಲಿ ಸಂಪರ್ಕಿಸಲು ಕೋರಿದೆ. ಇವರಿಗೆ ಕೇಂದ್ರ ಸರ್ಕಾರದಿಂದ ಅಥವಾ ರಾಜ್ಯ ಸರ್ಕಾರದಿಂದ ಅಗತ್ಯವಿರುವ ಅನುದಾನವನ್ನು ಮಂಜೂರು ಮಾಡಿಸಲಾಗುವುದು.
ದಾನಿಗಳು ಅಥವಾ ಸಿಎಸ್‌ಆರ್ ಫಂಡ್‌ನಿಂದ ಮಾಡಿಸಲು ಆಸಕ್ತಿ ಇರುವವರು ಸಂಪರ್ಕಿಸಲು ಮನವಿ.