20th April 2024
Share

TUMAKURU: SHAKTHI PEETA FOUNDATION

 ಭಾರತ ದೇಶದ, ಕರ್ನಾಟಕ ರಾಜ್ಯದ, ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಜವಗೊಂಡನಹಳ್ಳಿ(ಜೆಜಿ ಹಳ್ಳಿ)  ಹೋಬಳಿ, ಕೆ.ಆರ್.ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಬಗ್ಗನಡು ಕಾವಲ್‌ನಲ್ಲಿ ಅಂದರೆ ಚನ್ನೈ- ಬೆಂಗಳೂರು-ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ಹಾಗೂ ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್‌ಗೆ ಸುಮಾರು 900 ಮೀಟರ್ ದೂರದಲ್ಲಿ  ಸುಮಾರು 30 ಎಕರೆ ಜಮೀನಿನ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿಪೀಠ ಕ್ಯಾಂಪಸ್‌ನಲ್ಲಿ ವಿವಿಧ ಜಾತಿಯ ಸುಮಾರು 495 ಗಿಡಗಳನ್ನು ಹಾಕಲು ಉದ್ದೇಶಿಸಲಾಗಿದೆ.

  108 ಶಕ್ತಿಪೀಠಗಳು, ಜ್ಯೋರ್ತಿಲಿಂಗಗಳು-12 , ದಕ್ಷಬ್ರಹ್ಮನು ಯಜ್ಞ ನಡೆಸಿದ ಕಂಕಲ್-1, ಗಣಪತಿ-1, ಗರುಡ-1,  ಜ್ಯೋರ್ತಿಲಿಂಗಗಳು-12, ಶ್ರೀಹನುಮ-1 ಸಾಯಿಬಾಬಾ-2, ನವಗ್ರಹ-9, ಅಷ್ಟ ದಿಕ್ಪಾಲಕರು-8, ಕುಂದರನಹಳ್ಳಿ ಗಂಗಮಲ್ಲಮ್ಮ-1, ಶಕ್ತಿಪೀಠ ಪಾರ್ಕ್-1, ಶ್ರೀ ಚಕ್ರ-1, ಜಲಲಿಂಗ-1, ಹಿಮಲಿಂಗ-1, ಷಣ್ಮುಖ-1, ವೀರಭಧ್ರ-1, ಭೈರವ/ದ್ವಾರಪಾಲಕರು-2, ಸೇರಿದಂತೆ ಪವಿತ್ರ ಸ್ಥಳಗಳ ಪ್ರಾತ್ಯಕ್ಷಿಕೆಗಾಗಿ 153 ಗಿಡಗಳನ್ನು ಹಾಕಲಾಗುವುದು.

   ರಾಜ್ಯದ  ಚುನಾಯಿತ ಜನ ಪ್ರನಿಧಿಗಳಾದ 225 ವಿಧಾನಸಭಾ ಸದಸ್ಯರು, 75 ಜನ ವಿಧಾನ ಪರಿಷತ್ ಸದಸ್ಯರು, 28 ಜನ ಲೋಕಸಭಾ ಸದಸ್ಯರು 12 ರಾಜ್ಯಸಭಾ ಸದಸ್ಯರು ಮತ್ತು ಇಬ್ಬರೂ ದೆಹಲಿ ಪ್ರತಿನಿಧಿ ಸೇರಿದಂತೆ 342 ಕ್ಷೇತ್ರಗಳ ನೀರಾವರಿ ಯೋಜನೆಯ ಪರೀಶೀಲನೆ ಪ್ರಾತ್ಯಕ್ಷಿಕೆಗಾಗಿ  342 ಗಿಡಗಳನ್ನು ಹಾಕಲಾಗುವುದು. 

 ನೀರಿನ ಸೌಕರ್ಯವಿದೆ ಹನಿ ನೀರಾವರಿ, ಗುಂಡಿಗಳು, ಕೆಂಪುಮಣ್ಣು, ಗೊಬ್ಬರ, ಕಡ್ಡಿ, ನಿಗದಿ ಪಡಿಸಿದ ನಿರ್ಧಿಷ್ಠ ಸ್ಥಳದಲ್ಲಿ ನಿರ್ಧಿಷ್ಠ ಜಾತಿಯ ಗಿಡ ಹಾಕಿ ಕನಿಷ್ಟ 5 ವರ್ಷ ಸಂರಕ್ಷಣೆ ಮಾಡಲು ಆಸಕ್ತಿ ಇರುವ ಹಸಿರು ದಾನಿಗಳಿಗೆ ಆಹ್ವಾನ ನೀಡಲಾಗಿದೆ.

ಯಾವ ಜಾತಿಯ ಗಿಡಗಳನ್ನು ಎಲ್ಲಿ ಹಾಕಬೇಕು ಎಂಬ ನಿಯಮ ಶಕ್ತಿಪೀಠ ಫೌಂಡೇಷನ್ ನಿರ್ಧಾರ, ದಾನಿಗಳು ಒಬ್ಬ ವ್ಯಕ್ತಿ, ಕುಟುಂಬ, ಸಂಸ್ಥೆ, ಇಂದು ತಂಡ ಹೀಗೆ ಯಾರೇ ಮುಂದೆ ಬಂದರೂ ಸ್ವಾಗತ.

  ದಾನಿಗಳು ಶಕ್ತಿಪೀಠ ಫೌಂಡೇಷನ್ ಅಕೌಂಟ್‌ಗೆ ನೇರವಾಗಿ ದೇಣಿಗೆ ನೀಡಬಹುದು ಅಥವಾ ಅವರೇ ಹಾಕಿ ಬೆಳೆಸ ಬಹುದು ಎರಡಕ್ಕೂ ಅವಕಾಶವಿದೆ. ನಿಯಮ ಪ್ರಕಾರ ಎಂಓಯು ಮಾಡಲಾಗುವುದು.

ಯಾವ ಜಾತಿಯ ಗಿಡಗಳನ್ನು ಯಾವ ಪ್ರಾತ್ಯಕ್ಷಿಕೆಗಾಗಿ  ಹಾಕಬಹುದು ಎಂಬ ಬಗ್ಗೆ ಸಲಹೆ, ಮಾರ್ಗದರ್ಶನ ನೀಡಲು ಮನವಿ ಮಾಡಲಾಗಿದೆ.