19th April 2024
Share

TUMAKURU:SHAKTHIPEETA FOUNDATION

 ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ವಿಶೇಷವಾಗಿ ಮೊದಲ ವರ್ಷದಲ್ಲಿಯೇ ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೊಂದು ಗ್ರಾಮ ಪಂಚಾಯಿತಿಯಂತೆ 7 ಗ್ರಾಮ ಪಂಚಾಯಿತಿಗಳು ಮತ್ತು ತುಮಕೂರು ನಗರ ವಿಧಾನ ಕ್ಷೇತ್ರದ ವ್ಯಾಪ್ತಿಯ ಒಂದು ವಾರ್ಡ್‌ನ್ನು ಆಯ್ಕೆಮಾಡಿ ಕೊಂಡು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಿ ರಾಜ್ಯ ಅಥವಾ ಕೇಂದ್ರ ಸರ್ಕಾರದ ಅನುಮತಿ ಪಡೆಯಲು ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿಸಿದ್ದಾರೆ.

 ಈ ಯೋಜನೆಯ ಯಶಸ್ವೀ ಅನುಷ್ಠಾನಕ್ಕೆ ಸಂಸದರು ಗ್ರಾಮಪಂಚಾಯಿತಿವಾರು ವಾಚ್‌ಡಾಗ್ ಸಮಿತಿಗಳಾಗಿ ಕಾರ್ಯ  ನಿರ್ವಹಿಸಲು ಸಂಘ ಸಂಸ್ಥೆಗಳಿಗೆ ಕರೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಲೋಕಸಭಾ ಸದಸ್ಯರು ಅನುಮತಿ ನೀಡಿದರೆ ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಶಕ್ತಿಪೀಠ ಫೌಂಡೇಷನ್ ತುಮಕೂರು ಜಿಲ್ಲಾ ಮಟ್ಟದ ವಾಚ್‌ಡಾಗ್ ಸಮಿತಿಯಾಗಿ ಕಾರ್ಯ ನಿರ್ವಹಿಸಲು ಮುಂದಾಗಿದೆ.

 ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ವಾಸಿಸುವ ಪ್ರತಿಯೊಂದು ಜಾತಿವಾರು ಕನಿಷ್ಟ ಒಬ್ಬ ಸದಸ್ಯರು  ಕಡ್ಡಾಯವಾಗಿ ಇರುವಂತೆ ಆಸಕ್ತರ ಗ್ರೂಪ್ ರಚಿಸಿಕೊಳ್ಳುವುದು ಉತ್ತಮವಾಗಿದೆ. ಗ್ರೂಪ್ ರಚಿಸಲು ಶ್ರೀ ಗುರುಪ್ರಸಾದ್ ಅವರೊಂದಿಗೆ ಸಮಾಲೋಚಿಸಲಾಗಿದೆ’

 ಜಿಲ್ಲಾ ಮಟ್ಟದ ಗ್ರೂಪ್‌ಗೆ   SAGY WATCH DOG TUMAKURU ಎಂದು ನಾಮಕರಣ ಮಾಡಲಾಗಿದೆ, ಸಂಸದರು ನಡೆಸಿದ ಸಂಘ ಸಂಸ್ಥೆಗಳ ಮೊದಲ ಸಭೆಗೆ ಹಾಜರಾಗಿದ್ದವರನ್ನು ಮತ್ತು ಸಭೆಗೆ ಆಹ್ವಾನಿಸಿದವರನ್ನು ಈ ಗ್ರೂಪ್‌ಗೆ ಸೇರ್ಪಡೆ ಮಾಡಲಾಗಿದೆ. ನಂತರ ಆಯಾ ಗ್ರಾಮಪಂಚಾಯಿತಿ ವ್ಯಾಪ್ತಿಯ ಸಂಚಾಲಕರ ಸಲಹೆ ಮೇರೆಗೆ ಇತರೆ ಹೆಸರುಗಳನ್ನು ಸೇರ್ಪಡೆ ಮಾಡಲಾಗುವುದು. ಇದರೊಂದಿಗೆ ವಾಚ್‌ಡಾಗ್ ಸಮಿತಿ ಕಾರ್ಯಾರಂಭ ಮಾಡಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

 ಈ ಸಂಸ್ಥೆಗಳಿಗೆ  SAGY WATCH DOG GROUP- MARASHETTIHALLI   ಹೀಗೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಸರನ್ನು ಸೇರಿಸಿಕೊಂಡು ಈ ರೀತಿ ನಾಮಕರಣ ಮಾಡುವುದು ಸೂಕ್ತವಾಗಿದೆ. ಹೆಸರು ಉದ್ದವಾದರೆ ನಿಯಮದಂತೆ ಗ್ರೂಪ್ ರಚಿಸಲಾಗುವುದು.  

  1. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ, (ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ಆಗಿ)  ಗುಬ್ಬಿ ವಿಧಾನಸಭಾ ಕ್ಷೇತ್ರ.
  2. ಅರಳಗುಪ್ಪೆ ಗ್ರಾಮ ಪಂಚಾಯಿತಿ,(ಹೆರಿಟೇಜ್ ವಿಲೇಜ್ ಆಗಿ) ತಿಪಟೂರು ವಿಧಾನಸಭಾ ಕ್ಷೇತ್ರ.
  3. ಗೋಡೆಕೆರೆ ಗ್ರಾಮ ಪಂಚಾಯಿತಿ(ಪ್ರವಾಸಿಕೇಂದ್ರವಾಗಿ) ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ.
  4. ಕುರುಂಕೋಟೆ ಗ್ರಾಮ ಪಂಚಾಯಿತಿ (ಸಿದ್ಧರಬೆಟ್ಟ ಆಯುಷ್ ಪಾರ್ಕ್ ಆಗಿ) ಕೊರಟಗೆರೆ ವಿಧಾನಸಭಾ ಕ್ಷೇತ್ರ.
  5. ಚಿಕ್ಕದಾಳವಟ್ಟ ಗ್ರಾಮ ಪಂಚಾಯಿತಿ (ಮಾನವೀಯತೆ ಕೇಂದ್ರವಾಗಿ) ಮಧುಗಿರಿ ವಿಧಾನಸಭಾ ಕ್ಷೇತ್ರ,
  6. ಸೋರೆಕುಂಟೆ/ತಿಮ್ಮರಾಜನಹಳ್ಳಿ ಗ್ರಾಮ ಪಂಚಾಯಿತಿ,(ತುಮಕೂರು ನಗರದ ಘನತ್ಯಾಜ್ಯ ವಸ್ತು ಮಾದರಿ ಘಟಕವಾಗಿ). 
  7. ಬಾಣಸಂದ್ರ ಗ್ರಾಮ ಪಂಚಾಯಿತಿ, (ಅಮೃತ್ ಮಹಲ್ ಗೋವು ಕೇಂದ್ರವಾಗಿ)  ತುರುವೇಕೆರೆ  ವಿಧಾನಸಭಾ ಕ್ಷೇತ್ರ,.
  8. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ, ತುಮಕೂರು ನಗರದ 35 ನೇವಾರ್ಡ್‌ನ್ನು(ಇಸ್ರೋ ಮತ್ತು ಮೈದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಗಂಗಾಮಠ ಧಾರ್ಮಿಕ ಕೇತ್ರ).

   ಹೀಗೆ ಹಲವಾರು ಆಯಾಮಗಳ ಹಿನ್ನಲೆಯಲ್ಲಿ ಈ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡಿದ್ದು ದಿನಾಂಕ:20.08.2020 ರೊಳಗೆ ಸಮಿತಿ ರಚಿಸುವುದು ಹಾಗೂ ಈ ಸಮಿತಿಗಳ ಸಭೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುವುದು. ಈಗಾಗಲೇ ಪೂರಕ ಸಿದ್ಧತೆಗಳನ್ನು ಶ್ರೀ ಗುರುಪ್ರಸಾದ್ ಆರಂಭಿಸಿದ್ದಾರೆ, ಶೀಘ್ರದಲ್ಲಿ ಶ್ರೀ ಜಿ.ಎಸ್.ಬಸವರಾಜ್‌ರವರು ಎಲ್ಲಾ ಪಂಚಾಯಿತಿ ವ್ಯಾಪ್ತಿಯ ಆನ್‌ಲೈನ್ ಸಭೆಯನ್ನು ಉದ್ಘಾಟನೆ ಮಾಡಲಿದ್ದಾರೆ.