20th April 2024
Share

TUMAKURU:SHAKTHI PEETA FOUNDATION

 ತುಮಕೂರು ಲೋಕಸಭಾ ಕ್ಷೇತ್ರದ, ಗುಬ್ಬಿ ವಿಧಾನಸಭಾ ಕ್ಷೇತ್ರದ, ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯನ್ನು ಸಂಸದರ ಆದರ್ಶ ಗ್ರಾಮ ಯೋಜನೆಯಾಗಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಆಯ್ಕೆ ಮಾಡಿರುವ ಹಿನ್ನಲೆಯಲ್ಲಿ ಸಣ್ಣ ನೀರಾವರಿ ಸಚಿವರು ಹಾಗೂ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆದ ಶ್ರೀ ಜೆ.ಸಿ. ಮಾಧುಸ್ವಾಮಿಯವರಿಗೆ ಈ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆರೆ-ಕಟ್ಟೆಗಳ ಮಾಲೀಕತ್ವ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಗಳ ಜನತೆ ಸಹಭಾಗಿತ್ವ ದಲ್ಲಿ ಡಿಜಿಟಲ್ ಲೆಕ್ಕ ಕೊಡುವುದು ಅಗತ್ಯವಾಗಿದೆ.

  ಇಲಾಖೆಗಳಲ್ಲಿ ಸಮನ್ವಯ ಕೊರತೆ ಇದೆ, ಇದೂವರೆಗೂ ಕರ್ನಾಟಕದಲ್ಲಿರುವ ಜಲಸಂಗ್ರಹಾಗಾರಗಳ ಡಿಜಿಟಲ್ ಗಣತಿ ಸರಿಯಾಗಿ ಆಗಿಲ್ಲ ಎಂಬ ವ್ಯಥೆ ಎಲ್ಲರಲ್ಲೂ ಇದೆ. ತಾಜಾ ಡೇಟಾ ದೊರೆಯಬೇಕಾದಲ್ಲಿ ಅಧಿಕಾರಿಗಳ ಜೊತೆಗೆ ಜನತೆ ಕೈಜೋಡಿಸಲೇ ಬೇಕು.

  ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳ ಗ್ರಾಮವಾರು ಕೆರೆ-ಕಟ್ಟೆಗಳ ಮತ್ತು ಕರಾಬು ಹಳ್ಳಗಳ ಜಿಐಎಸ್ ಲೇಯರ್ ನಕ್ಷೆಯನ್ನು ತುಮಕೂರಿನ ಸ್ಪೆಕ್ಟ್ರಾ ಅಸೋಯೇಷನ್ ಸಿದ್ಧಪಡಿಸಿದೆ. ಇದರಲ್ಲಿ ಇರುವ ಕೆರೆ-ಕಟ್ಟೆಗಳು ಸರಿಯಾಗಿವೆಯೇ ಅಥವಾ ಬದಲಾವಣೆ ಆಗಬೇಕೇ?

  ಗ್ರಾಮ ಲೆಕ್ಕಿಗರು ವಿಲೇಜ್ ಮ್ಯಾಪ್ ಪರಿಶೀಲಿಸಿ ಹೇಳಬೇಕು ಏಕೆಂದರೆ ಗುಳುಂ ಆಗಿರುವ/ಸತ್ತಿರುವ ಕೆರೆ-ಕಟ್ಟೆಗಳ ಲೆಕ್ಕವೂ ಸಿಗಲಿದೆ, ಜನತೆ ಆಯಾ ಊರಿನಲ್ಲಿರುವ ಕೆರೆ-ಕಟ್ಟೆಗಳ ಮಾಹಿತಿ ನೀಡಬೇಕು. ಮಾಲೀಕತ್ವದ ಇಲಾಖೆಗಳು ಕೆರೆಯ ಮಾಹಿತಿಗಳನ್ನು ಅಫ್‌ಲೋಡ್ ಮಾಡಬೇಕು, ಈಗಾಗಲೇ ಜಲಾಮೃತ ಯೋಜನೆಯಡಿ ಮಾಡಿರ ಬಹುದು.

 ಸರ್ವೆಯರ್‌ಗಳು ಕರಾಬುಹಳ್ಳಗಳು ಎಷ್ಟು ಕೀಮೀ ಇವೆ, ಅಗಲ ಎಷ್ಟಿದೆ, ಕರಾಬು ಹಳ್ಳಗಳ ವಿಸ್ಥೀರ್ಣ, ಒತ್ತುವರಿ ವಿಸ್ಥೀರ್ಣದ ಮಾಹಿತಿ ನೀಡುವುದು ಅಗತ್ಯ. ಗ್ರಾಮದ ಜನತೆ ಕರಾಬುಹಳ್ಳಗಳ ಹೆಸರು ಹೇಳುವುದು ಅಗತ್ಯ.

 ಕರಾಬುಹಳ್ಳಗಳಲ್ಲಿರುವ ಅಪೂರ್ಣವಾಗಿರುವ, ಪೂರ್ಣಗೊಂಡಿರುವ, ಪ್ರಗತಿಯಲ್ಲಿರುವ, ಹಾಳಾಗಿರುವ ಮತ್ತು ಹೊಸದಾಗಿ ನಿರ್ಮಾಣ ಮಾಡಬೇಕಾಗಿರುವ   ಪಿಕ್‌ಅಪ್‌ಗಳ ಮಾಹಿತಿಯನ್ನು ಪಿಡಿಓ ನೀಡಬೇಕು.

 ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಹಾಗೂ ಎನ್.ಆರ್.ಡಿ.ಎಂ.ಎಸ್  ಪರೀಶಿಲಿಸಿ ತುಮಕೂರು ಜಿಐಎಸ್‌ಗೆ ಅಫ್ ಲೋಡ್ ಮಾಡಬೇಕು. ಅಫ್ ಲೋಡ್ ಮಾಡುವ ಮುನ್ನ ಮಾಲೀಕತ್ವ ಇಲಾಖೆಯ ಅಧಿಕಾರಿಗಳ ಮತ್ತು ಪಿಡಿಓ ಸಹಿಯೂ ಇರಬೇಕು.

 ರೀತಿ ತಯಾರಿಸಿದ ಡಿಜಿಟಲ್ ಲೆಕ್ಕ ನೀಡಿದಲ್ಲಿ, ರಾಜ್ಯಾಧ್ಯಾಂತ ಇದೇ ಮಾದರಿಯಲ್ಲಿ ಡಿಜಿಟಲ್ ಗಣತಿ ಮಾಡಿದರೆ ಮಾತ್ರ ಜಲಸಂಗ್ರಹಾಗಾರಗಳ ತಾಜಾ ಮಾಹಿತಿ ದೊರೆಯಲಿದೆ. ಇಲ್ಲದೆ ಇದ್ದಲ್ಲಿ ಬೋಗಸ್ ಕಟ್ & ಪೇಸ್ಟ್ ಮಾಹಿತಿ ಇರಲಿದೆ. ಪಿಡಿಓ ಶ್ರೀ ಗುರುಮೂರ್ತಿಯವರೇ ಜವಾಬ್ಧಾರಿ ನಿಮ್ಮದು ಸ್ವಾಮಿ.