19th April 2024
Share

TUMAKURU:SHAKTHIPEETA FOUNDATION

  ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಸಂಸದರ ಆದರ್ಶ ಗ್ರಾಮ ಯೋಜನೆ ವ್ಯಾಪ್ತಿಯಲ್ಲಿನ 18 ಗ್ರಾಮಗಳಿಗೂ ಮಾದರಿ ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸಲು ವಿವರವಾದ ಯೋಜನೆ ವರದಿ ಸಿದ್ಧಪಡಿಸಲು ಕಾವೇರಿ ನೀರಾವರಿ ನಿಗಮದ ನಿರ್ಧೇಶಕರಾದ ಶ್ರೀ ಕೆ.ಜೈಪ್ರಕಾಶ್‌ರವರು ಮುಂದೆ ಬಂದಿದ್ದಾರೆ.

  ‘ಅವರು ನಮ್ಮ ಸಂಸ್ಥೆಗೆ ವಿಧಿಸಿರುವ ಷರತ್ತುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ ಕನ್ವರ್ಜೆನ್ಸ್ ಮಾಡಿ, ನೀರಿಗೆ ಸಂಬಂಧಿಸಿದ ಯಾವ ಯೋಜನೆಗಳನ್ನು ಜಾರಿ ಮಾಡಿದಲ್ಲಿ ಶಾಶ್ವತವಾಗಿ ರೈತರ ಸಮಸ್ಯೆ ಬಗೆಹರಿಸಬಹುದು ಎಂಬ ಕನಸಿಗೆ ಸಂಸದರ ಗ್ರಾಮ ಮಾದರಿಯಾಗ ಬೇಕು.

  ಪುಣೆಯ ಪಾನಿ ಫೌಂಡೇಷನ್ ಬಹಳ ಉತ್ತಮವಾಗಿ ಕೆಲಸ ಮಾಡಿದೆಯಂತೆ, ಇದೇ ರೀತಿ ದೇಶದ ಯಾವ ಮೂಲೆಯಲ್ಲಾಗಲಿ ಬೆಸ್ಟ್ ಪ್ರಾಕ್ಟೀಸಸ್ ಯೋಜನೆಯಿದ್ದಲ್ಲಿ ಅದಕ್ಕಿಂತ ಉತ್ತಮ ಯೋಜನೆಗೆ ಪ್ರಸ್ತಾವನೆ ಸಿದ್ಧಪಡಿಸಲು ಶಕ್ತಿಪೀಠ ಫೌಂಡೇಷನ್‌ಗೆ ಈಗಾಗಲೇ ಸೂಚಿಸಿದ್ದಾರೆ’

 ಈ ಹಿನ್ನೆಲೆಯಲ್ಲಿ ಮಾದರಿ ನೀರಾವರಿ ಯೋಜನೆಗಳನ್ನು ಕಾವೇರಿ ನೀರಾವರಿ ನಿಗಮದಿಂದ ಕೆರೆ ಕಟ್ಟೆಗಳಿಗೆ ನದಿ ನೀರು ಸರಬರಾಜು, ರೈತರ ಜಮೀನುಗಳಿಗೆ ಹನಿ ನೀರಾವರಿ ಅಥವಾ ತುಂತುರು ನೀರಾವರಿ ಯೋಜನೆ, ಮಳೆ ನೀರನ್ನು ಸಂಗ್ರಹಿಸಲು ಜಲಸಂಗ್ರಹಾಗಾರಗಳ ಅಭಿವೃದ್ಧಿ ಯೋಜನೆಗಳ ಜಾರಿಯಾಗಲಿವೆ.

  ಬೆಂಗಳೂರಿನ ಇಐ ಟೆಕ್ನಾಲಜಿ ಮತ್ತು ತುಮಕೂರಿನ ಸ್ಪೆಕ್ಟ್ರಾ ಅಸೋಸಿಯೇಷನ್ ಕಲ್ಪನಾವರದಿಯನ್ನು ಸಿದ್ದಪಡಿಸಲು ಆರಂಭಿಸಿವೆ. ಜಲಗ್ರಾಮ ಕ್ಯಾಲೆಂಡರ್’ ಮೂಲಕ ದೇಶಕ್ಕೆ ಮಾದರಿಯಾದ ಯೋಜನೆ ಜಾರಿ ಮಾಡಲು ತುಮಕೂರಿನ ಉಪವಿಭಾಗಾಧಿಕಾರಿಗಳು ಮತ್ತು ಒತ್ತುವರಿ ತೆರವು ಟಾಸ್ಕ್ ಪೋರ್ಸ್ ಅಧ್ಯಕ್ಷರಾದ  ಶ್ರೀ ಅಜಯ್‌ರವರು ಜಲಸಂಗ್ರಹಾಗಾರಗಳ ಮತ್ತು ಕರಾಬು ಹಳ್ಳಗಳ ಒತ್ತುವರಿ ತೆರವು ಮಾಡುವ ಮೂಲಕ ಸಹಕರಿಸ ಬೇಕಿದೆ.

 ನಾನೇ ನನ್ನ ಜಮೀನಿನನಲ್ಲಿ ಇದ್ದ ಕರಾಬುಹಳ್ಳ ಅಭಿವೃದ್ಧಿ ಪಡಿಸಿ, ವಿಶ್ವೇಶ್ವರಯ್ಯ ನಿಗಮದಿಂದ ಪಿಕ್‌ಅಫ್ ನಿರ್ಮಾಣ ಮಾಡಿ ಮಳೆ ನೀರು ಸಂಗ್ರಹ ಮಾಡಿರುವ ಉದಾಹರಣೆಯನ್ನು ರೈತರಿಗೆ ಪ್ರಾತ್ಯಕ್ಷಿಕೆಯಾಗಿ ತೋರಿಸುವ ಶಕ್ತಿ ನನಗೂ ಬಂದಿದೆ.

 ನೀರಿನ ಗತಕಾಲದ ವೈಭವದ ನೆನಪು ಬರಬೇಕು ಎಂದಾದಲ್ಲಿ 18 ಗ್ರಾಮಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಗಿಡಗಳನ್ನು ಹಾಕಿಸಲು ಅರಣ್ಯ ಇಲಾಖೆ ಮುಂದಾಗಬೇಕಿದೆ. ಕರಾಬುಹಳ್ಳಗಳಿಗೆ ಮತ್ತು ಜಲಸಂಗ್ರಹಾಗಾರಗಳಿಗೆ ಪುನರ್ ಜೀವನ ನೀಡಲೇ ಬೇಕಿದೆ. ಯಾವುದೇ ಕಾರಣಕ್ಕೂ ರಾಜಿಮಾಡಿಕೊಳ್ಳಬಾರದು, ಒತ್ತುವರಿ ಗುರುತಿಸಿ ರೈತರ ಮನವೊಲಿಸುವ ಕಾರ್ಯಕ್ಕೆ ಯಾವುದಾದರೂ ಒಂದು ಮಠದ ಸ್ವಾಮೀಜಿಗಳು ಮುಂದೆ ಬಂದಲ್ಲಿ ಅನೂಕೂಲವಾಗಲಿದೆ.

 ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ-ಮನೆಗೆ ನಲ್ಲಿ ಮೂಲಕ ಕುಡಿಯುವ  ನೀರು ಸರಬರಾಜು ಮಾಡುವ ಯೋಜನೆಯ ವಿವರವಾದ ಯೋಜನಾವರದಿ ಸಿದ್ಧಪಡಿಸಲು ಗ್ರಾಮೀಣ ನೀರು ಸರಬರಾಜು ಇಇ ಶ್ರೀ ಚನ್ನವೀರಯ್ಯನವರಿಗೆ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಸೂಚಿಸಿದ್ದಾರೆ.

 ಪ್ರತಿಯೊಂದು ಗ್ರಾಮಗಳಿಗೆ ಹಾಲಿ ಕುಡಿಯುವ ನೀರಿನ ವ್ಯವಸ್ಥೆಗಳ ಜಿಐಎಸ್ ಲೇಯರ್ ಮಾಡುವುದರ ಜೊತೆಗೆ ಹೊಸದಾಗಿ ನೀರು ಸರಬರಾಜು ಮಾಡುವ ಪ್ರಸ್ತಾವನೆಯನ್ನು ಸಹ ಜಿಐಎಸ್ ಲೇಯರ್ ಮಾಡುವುದು ಅಗತ್ಯವಾಗಿದೆ.

 ನಿಟ್ಟೂರು ಕೆರೆ ಅಥವಾ ಕಡಬ ಕೆರೆಯಿಂದ ಯೋಜನೆ ಮಾಡುವುದು ಸೂಕ್ತವಾಗಿದೆ. ಈ ವ್ಯಾಪ್ತಿಯಲ್ಲಿ ವರ್ಷ ಪೂರ್ತಿ ನೀರು ಸಾಕಾಗುವಷ್ಟು ಸಾಮಾರ್ಥ್ಯದ ಯಾವುದೇ ಬೇರೆ ಕೆರೆಗಳು ಇಲ್ಲ. 18 ಗ್ರಾಮಗಳ ಪ್ರತಿಯೊಂದು ಮನೆಗೂ 2023 ರೊಳಗೆ ಕುಡಿಯುವ ನೀರಿನ ನಲ್ಲಿ ಹಾಕುವುದು ಕೇಂದ್ರ ಸರ್ಕಾರದ ಕಾಲಮಿತಿ ಗಡುವು ಆಗಿದೆ.

  ಪ್ರತಿಯೊಂದು ಗ್ರಾಮಗಳಲ್ಲಿಯೂ ಕೃಷಿ ಜಮೀನುಗಳಲ್ಲಿ ವಾಸಿಸುವ ಜನರು ಜಾಸ್ತಿ ಇದ್ದಾರೆ, ಅಂಥಹ ಕಡೆ ಯಾವ ರೀತಿ ನೀರು ಸರಬರಾಜು ಮಾಡಬಹುದು ಎಂಬ ಬಗ್ಗೆಯೂ ಚಿಂತನೆ ನಡೆಸುವುದು ಅಗತ್ಯವಾಗಿದೆ. ಕೆಲವು ಮನೆಗಳಿಗೆ ನಲ್ಲಿ ನೀರು ಸರಬರಾಜು ಮಾಡಲು ಸಾಧ್ಯವಾಗದೇ ಇಲ್ಲದೆ ಇದ್ದಲ್ಲಿ, ಯಾವ ಕಾರಣಕ್ಕೆ ಅಂತಹ ಮನೆಗಳಿಗೆ ನೀರು ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಜಿಐಎಸ್ ಲೇಯರ್‌ನಲ್ಲಿ ನಮೂದಿಸುವುದು ಕಡ್ಡಾಯ.

  ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಮನವಿ ಮೇರೆಗೆ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ತುಮಕೂರು ಜಿಲ್ಲೆಯನ್ನು ಸಮಗ್ರ ನೀರಾವರಿ ಯೋಜನೆ ಜಾರಿ ಮಾಡಲು ಪತ್ರ ಬರೆದಿದ್ದಾರೆ.

 ಪೂರಕವಾಗಿ ಗ್ರಾಮ ಪಂಚಾಯತಿಯಲ್ಲಿ ಫೈಲಟ್ ಯೋಜನೆ ಜಾರಿ ಮಾಡಲು ಮಹಿಳೆಯರ ಹಾಗೂ ಯುವ ರೈತರ ತಂಡ ಕಟ್ಟುವುದು ಅಗತ್ಯವಾಗಿದೆ.