26th April 2024
Share

TUMAKURU:SHAKTHI PEETA FOUNDATION       

 ಇತ್ತೀಚಿನ ದಿನಗಳಲ್ಲಿ ರಾಜ್ಯಸರಕಾರವತಿಯಿಂದ ನವಿ ಮುಂಬೈ ಮಾದರಿಯಲ್ಲಿ ಬೆಂಗಳೂರು ಸಮೀಪ ನವ ಬೆಂಗಳೂರು ನಿರ್ಮಾಣ ಸಂಬಂಧಿಸಿದಂತೆ ವಿವಿಧ ಪ್ಲಾಟ್ ಫ಼ಾರಂಗಳಲ್ಲಿ ಚರ್ಚೆಯಾಗುತ್ತಿದೆ. ಅದು ಎಲ್ಲಿ ಆದರೆ ರಾಜ್ಯಕ್ಕೆ ಅನುಕೂಲವಾಗುವುದು ಎಂಬುದು ಇಲ್ಲಿ ಮುಖ್ಯವಾದ ಅಂಶ.

 ಈಗಾಗಲೇ ಬೆಂಗಳೂರು ಪೂರ್ವ್ ಮತ್ತು ದಕ್ಷಿಣದಲ್ಲಿ  ಮಾಹಿತಿ ತಂತ್ರಜ್ಞಾನ  ವಲಯಗಳನ್ನು ಸ್ಥಾಪಿಸಿದ ಪರಿಣಾಮವಾಗಿ, ಕರ್ನಾಟಕ ರಾಜ್ಯ ಆ ಭಾಗದಲ್ಲಿ ಕೈಗೊಂಡ ಉನ್ನತೀಕರಣದ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಪಕ್ಕದ ತಮಿಳುನಾಡು ಪ್ರದೇಶದ ಹೊಸೂರು ನಗರವನ್ನು ಆ ರಾಜ್ಯ ಸರಕಾರ ಸಂಪೂರ್ಣ ಕೈಗಾರಿಕಾ ನಗರ ವನ್ನಾಗಿ ಅಭಿವೃಧ್ಧಿ ಪಡಿಸಿಕೊಂಡು ಹೆಚ್ಚಿನ ಕೈಗಾರಿಕಾ ಬಂಡವಾಳ ಸೆಳೆದಿದೆ.

 ಅದೇ ರೀತಿ ಆಂಧ್ರ ಪ್ರದೇಶ ಸರಕಾರವೂ ಸಹಾ ಹಿಂದೂಪುರ ಮತ್ತು ಲೇಪಾಕ್ಷಿ ಕೈಗಾರಿಕಾ ವಲಯ ಸ್ಥಾಪಿಸಿ ಕೈಗಾರಿಕಾ ಬಂಡವಾಳ ಸೆಳೆಯುತ್ತಿದೆ. ಈ ಹಿಂದೆ ರಾಮನಗರವನ್ನು ನವ ಬೆಂಗಳೂರು ಎಂದು ಹೆಸರಿಸಿ ಕ್ರಮವಹಿಸುವ ಪ್ರಸ್ಥಾಪಿತ ಯೋಜನೆಗೆ ನಿರೀಕ್ಷಿತ ಬೆಂಬಲ ಕಂಡುಬಂದಿಲ್ಲ.

 ಈ ಎಲ್ಲಾ ಹಿನ್ನಲೆಯಲ್ಲಿ ಬೆಂಗಳೂರು ಉತ್ತರದಲ್ಲಿ ನ್ಯಾಶನಲ್ ಹೈವೇ-4 ,  ಭವಿಷ್ಯದ ಏಷ್ಯನ್ ಹೈವೇ -7 ಲಗತ್ತಾಗಿ ಬ್ರಹತ್ ಕೈಗಾರಿಕ ವಸಹಾತು ಪ್ರದೇಶ ಇರುವ ದಾಬಸ್ ಪೇಟೆ[ಸೋಂಪುರ] ಪ್ರದೇಶವನ್ನು ರಾಜ್ಯ ಸರಕಾರವತಿಯಿಂದ ನವಿ ಮುಂಬೈ ಮಾದರಿಯಲ್ಲಿ ನವ ಬೆಂಗಳೂರು ನಿರ್ಮಾಣಕ್ಕೆ  ಕ್ರಮ ವಹಿಸಬಹುದಾಗಿದೆ..

  ಈ  ಕ್ರಮವು ಸದ್ಯ ಮುಂದೂಡಿರುವ ಜಿಎಮ್2020-ಕರ್ನಾಟಕ ಬಹುಶ:  ಮುಂದಿನ ವರ್ಷದಲ್ಲಿ ನಡೆಯುವ ಸಾಧ್ಯತೆ ಇದ್ದು, ಈ ಪ್ರದೇಶ ಮತ್ತು ಲಗತ್ತಾದ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಹೆಚ್ಚಿನ  ಹೂಡಿಕೆಗೆ ಇದು ಪೂರಕವಾಗಲಿದೆ.             

ಪ್ರದೇಶವು ಕರ್ನಾಟಕ ರಾಜ್ಯದ ರಾಜಧಾನಿಗೆ ಗೇಟ್‌ವೇ ಮಾದರಿಯಲ್ಲಿದ್ದು, ಕೆಳಕಂಡ ಅನುಕೂಲಗಳನ್ನು ಮೈಗೂಡಿಸಿಕೊಂಡಿದೆ

  1. ಚನ್ನೈ-ಬೆಂಗಳೂರು-ಚಿತ್ರದುರ್ಗ ಕೈಗಾರಿಕಾ ಕಾರಿಡಾರ್ ಗೆ ಲಗತ್ತಾಗಿದೆ. ಮತ್ತು ಬೆಂಗಳೂರು ನಗರಕ್ಕೆ ಕೇವಲ 50 ಕಿಮೀ ದೂರದಲ್ಲಿದೆ.
  2. ಈ ಆವರಣ ಬೆಂಗಳೂರು ನಗರದ  ವಾಯುಮಾರ್ಗ ಸೌಲಭ್ಯದ ನಿಲ್ದಾಣ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಕ್ಕೆ ಕೇವಲ ಅರ್ಧ ಘಂಟೆ ಯೊಳಗೆ ತಲಪಬಹುದಾದ ಪ್ರತ್ಯೇಕ ರಾ.ಹೆ.4ಎ ಸೌಕರ್ಯ ಇದೆ.
  3. ಈ ಆವರಣ ರಾಜ್ಯದ ಮಹತಕಾಂಕ್ಶಿ ಯೋಜನೆ ಯಾದ ಐ.ಟಿ.ಐ.ಆರ್ ರೀಜನ್ ಗೆ ಲಗತ್ತಾಗಿದೆ. ಮತ್ತು ಪ್ರಸ್ಥಾಪಿತ ಏರೋಸ್ಪೇಸ್ ಪಾರ್‍ಕ್ ಮತ್ತು ಎಲೆಟ್ರಾನಿಕ್ಸ್‌ಸಿಸ್ಟ್ಂ ಡಿಸೈನ್ ಮಾನ್ಯುಫ಼್ಯಾಕ್ಛರ್ ಕ್ಲಸ್ಟರ್ ಪ್ರದೇಶಕ್ಕೆ ಲಗತ್ತಾಗಿದೆ.
  4. ಈ ಪ್ರದೇಶ ಮುಂದಿನ ದಿನಗಳಲ್ಲಿ ಬರುತ್ತಿರುವ ನ್ಯಾನೋ ಪಾರ್ಕ್[ನೆಲಮಂಗಲ ಬಳಿ] ಗೆ ಸಮೀಪದಲ್ಲಿದೆ.
  5. ಈ ಪ್ರದೇಶ ಚನ್ನೈ-ಬೆಂಗಳೂರು-ಚಿತ್ರದುರ್ಗ ಕೈಗಾರಿಕಾ ಕಾರಿಡಾರ್ ನಲ್ಲಿ ಬರುವ  ತುಮಕೂರು ಇಂಡಸ್ಟ್ರಿಯಲ್ ನೋಡ್ ಸಮೀಪದಲ್ಲಿದೆ[ನ್ಯಾಷನಲ್ ಹೂಡಿಕೆ ಮತ್ತು ಉತ್ಪಾದನಾ ವಲಯ ನಿಮ್ಜ್-] ಮತ್ತು ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್‌ಗೂ ಲಗತ್ತಾಗಿದೆ.
  6. ಭವಿಷ್ಯದ ಡಿಫ಼ೆನ್ಸ್ ಕಾರಿಡಾರ್‌ಗೂ ಲಗತ್ತಾಗಿರುತ್ತದೆ.
  7. ಈ ಪ್ರದೇಶ ಬೆಂಗಳೂರು-ಹುಬ್ಬಳ್ಳಿ-ಬೆಳಗಾವಿ-ಪುಣೆ-ಮುಂಬೈ ದ್ವಿಪಥ ರೈಲು ಮಾರ್ಗದ ಪಡಸಾಲೆಯಲ್ಲಿದ್ದು ಮತ್ತು ಬೆಂಗಳೂರು-ಗುಂತಕಲ್-ಮುಂಬೈ ರೈಲು ಮಾರ್ಗಕ್ಕೂ ಕೇವಲ 20 ಕಿಮಿ ದೂರದಲ್ಲಿದೆ. ಮೆಟ್ರೋ ಸೇವೆ ಸಹಾ ಪ್ರಸ್ಥಾವದಲ್ಲಿದೆ.
  8. ಬೆಂಗಳೂರು-ನಿಡುವಂದ-ದಾಬಸ್‌ಪೇಟೆ-ತುಮಕೂರು ನಡುವೆ ಉಪನಗರ ರೈಲು ಸೇವೆ ಎರಡೆನಯ ಹಂತದಲ್ಲಿ ಕೈಗೊಳ್ಳಲು ವರದಿ ಸಿದ್ದವಾಗಿದೆ.
  9. ಇಷ್ಟೆಲ್ಲಾ ಅನುಕೂಲಗಳನ್ನು ಇರುವ ಪ್ರದೇಶದಲ್ಲಿ ರಾಜ್ಯ ಸರ್ಕಾರ ನವಿ ಮುಂಬೈ ಮಾದರಿಯಲ್ಲಿ ಬೆಂಗಳೂರು ಸಮೀಪ ಬೆಂಗಳೂರು ನಗರದ ಉತ್ತರ ದಲ್ಲಿನ ದಾಬಸ್ ಪೇಟ್[ಸೋಂಪುರ] ಕೈಗಾರಿಕಾ ವಲಯ ಭಾಗದಲ್ಲಿ ಪ್ರಸ್ಥಾಪಿತ ನವ ಬೆಂಗಳೂರು ನಿರ್ಮಾಣ ಸೂಕ್ತ ವಾಗುತ್ತದೆ

 ಇಲ್ಲಿ ನಿರ್ಮಾಣವಾದರೆ ಕರ್ನಾಟಕ ಭಾಗದಲ್ಲಿ  ಅದರಲ್ಲೂ ಬೆಂಗಳೂರು ಪಡಸಾಲೆ ಜಿಲ್ಲೆಗಳಾದ ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ  ಆರ್ಥಿಕವಾಗಿ ಮುನ್ನೆಡೆಯಲು ಮತ್ತು ಈ ಜಿಲ್ಲೆಗಳ ಅಭಿವೃಧ್ಧಿ ಸೂಚ್ಯಂಕ ಏರುಮುಖವಾಗಲು ಸಹಕಾರಿಯಾಗುತ್ತದೆ ಮತ್ತು ಕೇವಲ 20 ಕೀಮಿ ದೂರದಲ್ಲಿರುವ ತುಮಕೂರಿಗೂ ಹೆಚ್ಚಿನ ಲಾಭವಾಗುವುದರಲ್ಲಿ ಸಂಶಯವಿಲ್ಲ.