19th April 2024
Share
ಈ ಎರಡು GREEN & RED COLOUR SQUARE WORK FROM GARDEN ರೀತಿಯಲ್ಲಿ ಕ್ಯಾಂಪಸ್‌ನಲ್ಲಿಯೇ ಶ್ರೀ ಸತ್ಯಾನಂದ್ ಮಾಡಿದ SQUARES ಗಳು.

TUMAKURU:SHAKTHIPEETA FOUNDATION

ಯಾವುದೇ ಒಂದು ಯೋಜನೆ ಜಾರಿಮಾಡಬೇಕಾದರೆ, ಕೆಲವರು ಮೊದಲು ಯೋಜನೆ ರೂಪಿಸಿ, ಅದಕ್ಕೆ ತಕ್ಕಂತ ಜಮೀನು ಹುಡುಕುತ್ತಾರೆ. ಇನ್ನೂ ಕೆಲವರು ಇರುವ ಜಮೀನಿನನಲ್ಲಿಯೇ ಯೋಜನೆ ಮಾಡಲು ಆರಂಭಿಸುತ್ತಾರೆ.

ಇರುವ ಜಮೀನಿನಲ್ಲಿ ಹೇಗೆ ಮಾಡಬೇಕು ಎಂದು ಯೋಚನೆ ಮಾಡುವ ಮೊದಲೇ ಕೆಲಸ ಆರಂಭಿಸಿ, ನಂತರ ವಾಸ್ತು ಆಗಮಶಾಸ್ರ್ತದ ಬಗ್ಗೆ ಯೋಚಿಸಿ ತಲೆಕಡಿಸಿಕೊಂಡು ಹುಚ್ಚರಾಗುವವರು ಇದ್ದಾರೆ.  ಕೆಲಸ ಆರಂಭಕ್ಕೆ ಮೋದಲೇ ಪಕ್ಕಾ ಯೋಚನೆ ಮಾಡಿ ನಂತರ ಕೆಲಸ ಆರಂಭಿಸುತ್ತಾರೆ.

ನಮ್ಮ ಕ್ಯಾಂಪಸ್‌ನಲ್ಲಿ ಆಗಿದ್ದು ಬೇರೆ,  ಭಾರತ ನಕ್ಷೆಯನ್ನು ಭೂಮಿಯ ಮೇಲೆ ಇಳಿಸಬೇಕು, ಕೃತಕವಾಗಿ ನಿರ್ಮಾಣ ಮಾಡಿರುವ ಬಂಗಾಳಕೊಲ್ಲಿ, ಅರಬ್ಭಿ ಸಮುದ್ರ ಮತ್ತು ಹಿಂದೂ ಮಹಾಸಾಗರದಲ್ಲಿ   ಮಳೆ ನೀರು ಸಂಗ್ರಹವಾಗುವುದು ನಮ್ಮ ಆಧ್ಯತೆಯಾಗಿತ್ತು.

ಇವೆಲ್ಲವೂ ಚೆನ್ನಾಗಿಯೇ ಆಯಿತು, ಸುತ್ತಲೂ ವೃತ್ತವನ್ನು ರಚಿಸಲಾಯಿತು, ನಂತರ ಶುರು ಮಾಡಿದವರು ವಾಸ್ತು, ಆಗಮಶಾಸ್ತ್ರದವರು. ಹಿಂದೂ ನಿಯಮಗಳ ಪ್ರಕಾರ  SQUARE ಗೆ ಮೊದಲ ಆಧ್ಯತೆ, ವೃತ್ತ ಸರಿಯಲ್ಲ, ನೀವೂ SQUARE  ಮಾಡಲೇ ಬೇಕು.

SQUARE ಮಾಡಲು ಹೋದರೆ ಈಶಾನ್ಯ ದಿಕ್ಕಿನಲ್ಲಿ ಬೇರೆಯವರ ಜಮೀನಿಗೆ ಹೋಗಿ ನಿಲ್ಲುವುದು, ವೃತ್ತದ ಹೊರಭಾಗದಲ್ಲ SQUARE -ಮಾಡಿ ನೋಡಿದೆವು. ವೃತ್ತದ ಒಳ ಭಾಗಕ್ಕೆ SQUARE ಮಾಡಿದೆವು. ಏನೇ ಆದರೂ ಈಶಾನ್ಯ ಮೂಲೆ ಕಟ್ ಆಗುವುದು ನಿಲ್ಲಲಿಲ್ಲ. ಬೇರೆಯವರ ಜಮೀನಿಗೆ ಹೋಗುವುದು ತಪ್ಪಲಿಲ್ಲ.

 ಕೊನೆಗೆ ಸಂಶೋಧಕರೊಬ್ಬರ ಸಲಹೆಯಂತೆ ಉಪದಿಕ್ಕುಗಳು ಮತ್ತು ದಿಕ್ಕುಗಳಿಗೆ SQUARE ಮಾಡಿ ನೋಡಿದಾಗ  ದಿಕ್ಕುಗಳಿಗೆ ನಮ್ಮ ಜಮೀನಿನಲ್ಲಿಯೇ SQUARE ಕುಳಿತು ಕೊಂಡಿತು. ಸ್ವಲ್ಪ ಸಮಾಧಾನ ಆಯಿತು.

ಭೂಮಿಗೆ ಇಳಿಸಲು ಹೋದಾಗ ಉಪದಿಕ್ಕುಗಳು ಮತ್ತು ದಿಕ್ಕುಗಳಿಗೆ ಎರಡು SQUARES ಕುಳ್ಳಿರಿಸಿದೆವು, ಆಗಲೂ ಈಶಾನ್ಯ ಮೂಲೆ ಕಟ್ ಆಯಿತು, ಬೇರೆಯವರ ಜಮೀನಿಗೆ ಹೋಗಲೇ ಬೇಕಾಯಿತು. ಆ ಜಮೀನಿನ ತಾಯಿ  ಸಂಸ್ಕೃತ ಆರಂಭಿಸಿದರು.

ಕೊನೆಗೆ ಉಲ್ಟಾ ಪ್ಲಾನ್ ಮಾಡಲು ನಾನು ಮತ್ತು ಶ್ರೀ ಸತ್ಯಾನಂದ್ ಯೋಚಿಸಿ, ಮೊದಲು ನಮ್ಮ ಜಮೀನಿನ ಈಶಾನ್ಯ ದಿಕ್ಕಿಗೆ ಕಲ್ಲು ಹಾಕಿ, ನಂತರ  ಆ ಪಾಯಿಂಟ್ ನಿಂದ SQUARES ಕುಳ್ಳಿರಿದೆವು. ನಕ್ಷೆ ನೋಡಿ ಎರಡು ಕಲರ್ SQUARES ನಮ್ಮ ಜಮೀನಿನಲ್ಲಿ ಕುಳಿತಿವೆ.

ವಾಸ್ತು, ಆಗಮಶಾಸ್ತ್ರದವರು, ಓಕೆ ಈ ರೀತಿ ಅಷ್ಟಭುಜಾಕೃತಿ ಮಾಡ ಬಹುದು ಎನ್ನಲು ಶುರು ಮಾಡಿದ್ದಾರೆ, ಆರ್ಕಿಟೆಕ್ಟ್ ಸಹ ಇದು ಓಕೆ, ನನಗೂ ಒಪ್ಪಿಗೆಯಿದೆ ಎನ್ನುತ್ತಿದ್ದಾರೆ.

ಈ ದಿನದ ಮಟ್ಟಿಗೆ ನಮಗಂತೂ ನೆಮ್ಮದಿಯಾಗಿದೆ. ನೋಡೋಣ ಇನ್ನೂ ಯಾರು ಬಂದು ಏನು ಹೇಳುತ್ತಾರೆ.

ನೀವೂ ಸಲಹೆ ನೀಡಬಹುದು.