24th April 2024
Share

TUMAKURU:SHAKTHIPEETA FOUNDATION

ವ್ಯವಸಾಯ ಕ್ಷೇತ್ರದಲ್ಲಿ ತರಬೇತಿ/ಪ್ರಾತ್ಯಕ್ಷಿತೆ /ಟೆಸ್ಟಿಂಗ್-ಕೇಂದ್ರ – ಕೃಷಿವಲಯವನ್ನು ಬಲಪಡಿಸಲು  ರಾಜ್ಯಕ್ಕೆ  ಬೇಕು ಅಂತಹ ಒಂದು ಸಂಸ್ಧೆ

 ಕೇಂದ್ರ ಸರಕಾರದ ಕೃಷಿ ಸಚಿವಾಲಯದ ಅಧೀನದಲ್ಲಿ ದೇಶದಲ್ಲಿ ವ್ಯವಸಾಯ ಕ್ಷೇತ್ರದಲ್ಲಿಯಾಂತ್ರೀಕೃತ ಅಭ್ಯಾಸಗಳನ್ನು ಅಳವಡಿಸಿಕೊಂಡು ಆಧುನಿಕ ತಂತ್ರಜ್ನಾನ ದ ಉಪಯೊಗ ಗಳನ್ನು ಪಡೆದು ವ್ಯವಸಾಯ ಉತ್ಪನ್ನಗಳ ಅಂಶ ಹೆಚ್ಚಿಸಲು ಮತ್ತು ರೈತರಿಗೆ ಆಧುನಿಕ ಬೇಸಾಯ ಪದ್ದತಿಯನ್ನು ಪರಿಚಯಿಸಲು ಫಾರಂ ಮೆಷನರಿಗಳ ಬಗ್ಗೆ ಉಪಯೋಗದ ಬಗ್ಗೆ/ರಿಪೇರಿ/ ಟೆಸ್ಟಿಂಗ್ ಗಳ ಬಗ್ಗೆತರಬೇತಿ ನೀಡಲು ಈ ಎಲ್ಲಾ ಸೌಲಭ್ಯ ಇರುವ ತರಬೇತಿ ಕೇಂದ್ರಗಳನ್ನು                ಸ್ಧಾಪಿಸಿದೆ.

  ಸದ್ಯಕ್ಕೆ ಇಂತಹ ನಾಲ್ಕು ಕೇಂದ್ರಗಳು ದೇಶದಲ್ಲಿದೆ, ಅವುಗಳು ಬುದನಿ[ಮದ್ಯಪ್ರದೇಶ್], ಹಿಸ್ಸಾರ್[ಹರಯಾಣ], ಬಿಸ್ವನಾಥ್ ಚಾರಿಯರ್ಲಿ[ಅಸ್ಸಾಂ] ಹಾಗೂ ಆಂಧ್ರದ ಅನಂತಪುರಂ ಜಿಲ್ಲೆಯ ಗಾರಲದಿನ್ನೆ ಕಾರ್ಯನಿರ್ವಹಿಸುತ್ತಿದೆ.

ಈ ಕೇಂದ್ರಗಳು ಕೇಂದ್ರ ಸರಕಾರದ ಶೇ೧೦೦ ರಷ್ಟು ಅನುದಾನ ಪಡೆಯುವ ಸಂಸ್ಧೆಯಾಗಿದೆ. ರೈತರಿಗೆ ತರಬೇತಿ ನೀಡುವ ಈ ಸಂಸ್ಧೆಫ಼ಾರಂ ಮೆಶನರಿ ಗಳ ಬಳಕೆ ವಿಧಾನ/ಆಧುನಿಕ ಬೇಸಾಯಪದ್ದತಿಗಳ ಬಗ್ಗೆ ಪ್ರಾತ್ಯಕ್ಷತೆ ಅಗ್ರಿ ವಿಶ್ವವಿದ್ಯಾಲಯದ ಪರಿಣಿತಿಯವರಿಂದ ಮಾರ್ಗದರ್ಶನ ಕೊಡಿಸುವುದರ ಮೂಲಕ ತಾವು ಬೆಳೆಯುವ ಉತ್ಪನ್ನವನ್ನು ಹೆಚ್ಚಿಸಿ ಅವರ ವೃತ್ತಿ ಮೌಲ್ಯ ಹೆಚ್ಚಲು ಕಾರಣವಾಗುತ್ತದೆ.

  ಇಂತಹ ತರಬೇತಿ ಅವಧಿಯಲ್ಲಿ ಪ್ರತಿ ವಾರಕ್ಕೆ ಪ್ರತಿರೈತರಿಗೆ ರೂ೫೦೦ ಶಿಶುಕ್ಷು ಭತ್ಯೆ ಸಹಾ ಕೇಂದ್ರಸರಕಾರ ನೀಡುತ್ತದೆ ಮತ್ತು ತರಬೇತಿ  ಪದೆಯುವ ಆವಧಿಯಲ್ಲಿ ರೈತರಿಗೆ ಪುಕ್ಕಟೆಯಾಗಿ ವಸತಿ ಸೌಲಭ್ಯ ಹಾಗೂ ಟೈನಿಂಗ್ ಸೆಂಟರ್‌ಗೆ ಹೋಗಿ ಬರಲು ಸಾರಿಗೆ ಭತ್ಯೆಯನ್ನು ನೀಡಲು ಅವಕಾಶವಿದೆ. 

 ಇದಲ್ಲದೇ ರಾಜ್ಯಸರಕಾರ ಮತ್ತು ಐಸಿಎಆರ್ ಸಂಸ್ಧೆಗುರುತಿಸಿರಿವ ಸಂಸ್ಧೆ ಗಳ ಮೂಲಕ ತರಬೇತಿ ನೀಡಿದರೆ ಪ್ರತಿಯಾಗಿ ಪ್ರತಿ ತರಬೇತಿದಾರರಿಗೆ ಲೆಕ್ಕಾಚಾರವಾಗಿ ರೂ 4೦೦೦ ಗಳನು ಪಡೆಯಲು ರಾಜ್ಯಸರಕಾರ ಮತ್ತು ಐಸಿಎಆರ್‌ಗಳಿಗೆ ಅವಕಾಶವಿದೆ. ಮುಂದುವರೆದಂತೆ ಫಾರಂ ಮೆಶನರಿ ಸಂಸ್ಧೆಯ ಮೆಶನರಿಗಳನ್ನು ರಾಜ್ಯಸರಕಾರ/ಐಸಿಎಆರ್ ಸಂಸ್ಧೆಯು ಪರಿಣಿತರಮೂಲಕ ರೈತರ ಜಮೀನುನಲ್ಲಿಯೇ ಪ್ರಾತ್ಯಕ್ಷಿತೆ ಮೂಲಕ ತರಬೇತಿ ನೀಡಿದರೆ  ಅಂತಹ ಕ್ರಮಒಂದಕ್ಕೆ ರೂ 4೦೦೦ ಗಳನ್ನು ಕೇಂದ್ರ ಸರಕಾರ ಅನುದಾನ ನೀಡುತ್ತದೆ. ಆದ್ದರಿಂದ ರಾಜ್ಯದ ರೈತರ ಅಭ್ಯುದಯಕ್ಕಾಗಿ ಕರ್ನಾಟಕದಲ್ಲಿಯೂ ಸಹಾ ಇಂತಹ ಒಂದು ಕೇಂದ್ರವನ್ನು ಸ್ಧಾಪಿಸಲು ಕೇಂದ್ರ ಸರಕಾರದ ಕೃಷಿ ಸಚಿವಾಲಯಕ್ಕೆ ರಾಜ್ಯಸರಕಾರ ಆಗ್ರಹಿಸಬೇಕಿದೆ. 

 ಈ ಬಗ್ಗೆ ಹಾಲಿ ಸಂಸದರು ಶ್ರೀ ಜಿ.ಎಸ್.ಬಸವರಾಜ್‌ರವರ ಈ ಹಿಂದಿನ ತಮ್ಮ ಸಂಸದ ಸದಸ್ಯ ಅವಧಿಯಲ್ಲಿ 12/2010  ರಲ್ಲಿ ಸನ್ಮಾನ್ಯಶ್ರೀ ಶರದ್‌ಪವಾರ್, ಅಂದಿನ ಕೃಷಿ ಸಚಿವರು, ಕೇಂದ್ರ ಸರಕಾರ ನವದೆಹಲಿ 2/2011 ರಲ್ಲಿ ಸನ್ಮಾನ್ಯ ಬಿಎಸ್. ಯಡಿಯೂರಪ್ಪನವರು, ಅಂದಿನ ಮುಖ್ಯ ಮಂತ್ರಿಗಳು, 3/2012 ರಲ್ಲಿ ಸನ್ಮಾನ್ಯ ಶ್ರೀಉಮೇಶ್ ಕತ್ತಿ ಅಂದಿನ ಕೃಷಿ ಸಚಿವರಿಗೆ, ನಂತರದಲ್ಲಿ 2013 ರಲ್ಲಿ ಅಂದಿನ ಮಾನ್ಯ ಮುಖ್ಯಮಂತ್ರಿಗಳು ಸನ್ಮಾನ್ಯ ಸಿದ್ದರಾಮಯ್ಯ, ಸನ್ಮಾನ್ಯ ಶ್ರೀ ಕೃಷ್ಣಬೈರಗೌಡ , ಅಂದಿನ ಕೃಷಿ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಆಗಿದ್ದ  ಸನ್ಮಾನ್ಯ ಶ್ರೀ ಟಿ.ಬಿ.ಜಯಚಂದ್ರಅವರುಗಳಿಗೆ ಪತ್ರಬರೆದು ರಾಜ್ಯದಲ್ಲಿ ವ್ಯವಸಾಯ ಕ್ಷೇತ್ರದಲ್ಲಿಯಾಂತ್ರೀಕೃತ ಅಭ್ಯಾಸಗಳನ್ನು ಅಳವಡಿಸಿಕೊಂಡು ಆಧುನಿಕ ತಂತ್ರಜ್ಞಾನದ ಉಪಯೊಗಗಳನ್ನು ಪಡೆದು ವ್ಯವಸಾಯ ಉತ್ಪನ್ನಗಳ ಅಂಶ ಹೆಚ್ಚಿಸಲು ಮತ್ತು ರೈತರಿಗೆ ಆಧುನಿಕ ಬೇಸಾಯ ಪದ್ದತಿಯನ್ನು ಪರಿಚಯಿಸಲು ಫಾರಂ ಮೆಷನರಿಗಳ ಬಗ್ಗೆ ಉಪಯೋಗದ ಬಗ್ಗೆ/ರಿಪೇರಿ/ ಟೆಸ್ಟಿಂಗ್‌ಗಳ ಬಗ್ಗೆ ತರಬೇತಿ ನೀಡಲು ಈ ಎಲ್ಲಾ ಸೌಲಭ್ಯ ಇರುವ ತರಬೇತಿ ಕೇಂದ್ರ ಸ್ಧಾಪಿಸಲು ಅದರಲ್ಲೂ ತುಮಕೂರು ಜಿಲ್ಲೆಯಲ್ಲಿ ಈ ಸಂಸ್ಧೆಯನ್ನು ಪ್ರಾರಂಭಿಸಲು ಆಗ್ರಹಿಸಿರುವುದು ಮಾಹಿತಿ ಇದೆ.

 ಅವರ ಪ್ರಯತ್ನಕ್ಕೆ ಉತ್ತರವಾಗಿ 8/2013 ರಲ್ಲಿ ಮುಖ್ಯಮಂತ್ರಿಯವರಿಂದ ಕೃಷಿ ಸಚಿವಾಲಯಕ್ಕೆ ಸೂಚಿಸಿ ಅವರಿಂದ ಅಗತ್ಯ ಮಾಹಿತಿ ಒದಗಿಸಲು ಕೋರಿರುವುದು ಕಂಡು ಬಂದಿದೆ. ತಮ್ಮ ಈಗಿನ ಅವಧಿಯಲ್ಲಿ ವಿಲೆ ಇರುವ ಈ ವಿಷಯವನ್ನು ಪುನ: ಕೈಗೆತ್ತಿಕೊಂಡು ಶ್ರೀ ಜಿಎಸ್ ಬಸವರಾಜ್ ರವರು6/2019.7/2019    ರಲ್ಲಿ ಕೇಂದ್ರಸರಕಾರದ ಕೃಷಿ ಸಚಿವರು ಆದ ಸನ್ಮಾನ್ಯ ಶ್ರೀ ನರೇಂದ್ರ ಸಿಂಗ್ ತೊಮರ್ ಆವರಿಗೆ ಆಗ್ರಹಿಸಿ ತುಮಕೂರು ಜಿಲ್ಲೆಯಲ್ಲಿ ಸ್ಥಾಪಿಸಲು ಕೋರಿದ್ದು,8/2019 ರಲ್ಲಿ ಕೇಂದ್ರ ರಕಾರದ ಕೃಷಿ ಸಚಿವರು ಆದ ಸನ್ಮಾನ್ಯ ಶ್ರೀ ನರೇಂದ್ರ ಸಿಂಗ್ ತೊಮರ್ ರವರು ಉತ್ತರಿಸಿ ಇಂತಹ ಒಂದು ಕೇಂದ್ರವನ್ನು ತುಮಕೂರು ಜಿಲ್ಲೆಯ ಸ್ಥಾಪನೆ ಬಗ್ಗೆ  ಆಸಕ್ತಿ ವ್ಯಕ್ತಪಡಿಸಿರುತ್ತಾರೆ. ಅನುಸರಣೆ ಆದರೆ ಮಾತ್ರ ಇಂತಹ ಮಹತ್ವದ ಕೇಂದ್ರ ಪಡೆಯಲು ಸಾಧ್ಯ.

                                                                                ಟಿ.ಆರ್.ರಘೋತ್ತಮರಾವ್