20th April 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆ ವಸಂತಾನರಸಾಪುರ ಕೈಗಾರಿಕಾವಲಯ ಮತ್ತು ಇಂಡಸ್ಟ್ರಿಯಲ್ ನೋಡ್ 1 ನೇಂತದಿಂದ 6 ನೇ ಹಂತದವರೆಗೆ ಸುಮಾರು 12365 ಎಕರೆ ಪ್ರದೇಶದ ಬೃಹತ್ ಕೈಗಾರಿಕಾ ವಲಯ ಆಗಲಿದೆ. ಇದು ಗ್ರೇಟರ್ ನೋಯಿಡಾ ಬಿಟ್ಟರೆ ದೇಶದ 2 ನೇ ಅತಿದೊಡ್ಡ ಕೈಗಾರಿಕಾವಲಯ ಆಗುವ ಲಕ್ಷಣಗಳು ಇವೆ.

ಈ ಕೈಗಾರಿಕಾ ವಲಯಕ್ಕೆ ಕುಡಿಯುವ ನೀರಿಗಾಗಿ ಸುಮಾರು 1.25  ಟಿಎಂಸಿ ಅಡಿ ನೀರು ಮತ್ತು 1.12   ಟಿಎಂಸಿ ಅಡಿ ನೀರು ಸೇರಿದಂತೆ 2.37 ಟಿಎಂಸಿ ಅಡಿ ನೀರು ಬೇಕಂತೆ?

 ಪ್ರಸ್ತುತ ಹೇಮಾವತಿ ನದಿಯಿಂದ ಕುಪ್ಪೂರು ಕೆರೆಯಿಂದ 5 ಎಂ.ಎಲ್.ಡಿ ನೀರಿನ ಯೋಜನೆ ಹಾಲಿ ಇದೆ ಮತ್ತು ತುಮಕೂರು ನಗರದ ಭೀಮಸಂದ್ರ ಕೆರೆಯಿಂದ ನಗರದ ಯುಜಿಡಿ ಕೊಳಚೆ ನೀರನ್ನು ಶುದ್ಧಿಕರಿಸಿ ೩೦ ಎಂ.ಎಲ್.ಡಿ ನೀರಿನ ಯೋಜನೆ ಆರಂಭವಾಗಿದೆ. ಒಟ್ಟು ಸುಮಾರು 0.45  ಟಿ.ಎಂ.ಸಿ ಅಡಿ ನೀರು ಸರಬರಾಜು ಆಗಲಿದೆ.

 ಅಗತ್ಯವಿರುವ ಇನ್ನೂ ಸುಮಾರು 2 ಟಿಎಂಸಿ ಅಡಿ ನೀರಿಗೆ ಯಾವ ಯೋಜನೆ ರೂಪಿಸ ಬಹುದು, ಎಂಬ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು, ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಶ್ರೀ ನಾರಾಯಣಸ್ವಾಮಿರವರು, ಶಾಸಕರುಗಳಾದ ಶ್ರೀ ಡಾ.ಜಿ.ಪರಮೇಶ್ವರ್, ಶ್ರೀ ಗೌರಿಶಂಕರ್‌ರವರು ಮತ್ತು ಶ್ರೀ ರಾಜೇಶ್‌ಗೌಡರವರು ಕುಳಿತು ಚರ್ಚಿಸಬೇಕು, ಜನತೆಗೆ ಸ್ಪಷ್ಟ ಪಡಿಸಬೇಕು ಅಲ್ಲವೇ?

ಈ ಹಿನ್ನಲೆಯಲ್ಲಿ ದಿನಾಂಕ:08.12.2020 ರಂದು ಎತ್ತಿನಹೊಳೆ ಯೋಜನೆಯಿಂದ ನೀರು ನಿಗದಿಗೊಳಿಸಲು ಸಭೆ ನಡೆಯಲಿದೆ. ಕೈಗಾರಿಕಾ ಇಲಾಖೆಯವರು ಉದ್ದೇಶಿತ ಪ್ರದೇಶಕ್ಕೆ ಇರುವ ನೀರಿನ ಅಗತ್ಯ, ಹಾಲಿ ಇರುವ ನೀರಿನ ಮೂಲಗಳು, ಅಲೋಕೇಷನ್ ಮಾಡಬೇಕಾಗಿರುವ ನೀರಿನ ಬಗ್ಗೆ ಸರಿಯಾದ ಮಾಹಿತಿ ನೀಡುವ ಮೂಲಕ ನದಿ ನೀರಿನ ಅಲೋಕೇಷನ್ ಬಗ್ಗೆ ಮಾಹಿತಿ ನೀಡಲು ಸಜ್ಜಾಗಿದ್ದಾರೆ.

 ಕೆಐಡಿಬಿ ಈಗಾಗಲೇ ಯಾವ, ಯಾವ ಕೆರೆಯಲ್ಲಿ ನೀರು ಸಂಗ್ರಹಿಸಬಹುದು ಎಂಬ ಮಾಹಿತಿಯನ್ನು ಸಿದ್ಧಪಡಿಸಿದೆ. ಮುಂದಿನ 50 ವರ್ಷಗಳ ಅವಧಿಗೆ ಯೋಜನೆ ರೂಪಿಸಿ ಸಭೆಯಲ್ಲಿ ಮಂಡಿಸಲು ಸಿದ್ಧತೆ ಮಾಡಿಕೊಂಡಿದೆ. ಆದರೇ ಈ ಸಭೆಗೆ ಅವರಿಗೆ ಆಹ್ವಾನ ನೀಡಿಲ್ಲವಂತೆ.

 ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀ ರಾಕೇಶ್‌ಸಿಂಗ್‌ರವರೇ ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿ ಆಗಿದ್ದರೂ ಕೈಗಾರಿಕೆ ಇಲಾಖೆಯವರನ್ನು ಈ ಸಭೆಗೆ ಆಹ್ವಾನಿಸಿಲ್ಲ ಎನ್ನುತ್ತಾರೆ. ಹೆಸರು ಹೇಳಲು ಇಚ್ಚಿಸಿದ ಅಧಿಕಾರಿಗಳು.