15th January 2025
Share

TUMAKURU:SHAKTHIPEETA FOUNDATION

ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿಪೀಠಗಳ ಕ್ಯಾಂಪಸ್‌ನಲ್ಲಿ ಸುಮಾರು ಐದು ಎಕರೆ ಜಾಗದಲ್ಲಿ  ಅಷ್ಟಭುಜಾಕೃತಿ ಬರಲಿದೆ. ದೇವರು ಈಗ ನೀಡಿರುವ ಭೂಮಿ   ವಾಸ್ತು ಪ್ರಕಾರ ಇಲ್ಲ. ವಾಸ್ತು ಪ್ರಕಾರ ಈಶಾನ್ಯದಲ್ಲಿ  ಅತ್ಯಂತ ತಗ್ಗು ಇರಬೇಕು. ನೈರುತ್ಯದಲ್ಲಿ ಅತ್ಯಂತ ಎತ್ತರ ಇರಬೇಕಂತೆ.

 ನಕ್ಷೆಯನ್ನು ಗಮನಿಸಿ ಸಮುದ್ರಮಟ್ಟದಿಂದ(MSL) ಹಾಲಿ ಇರುವ ಎಂಟು ದಿಕ್ಕುಗಳ ಎತ್ತರವನ್ನು ಬರೆಯಲಾಗಿದೆ. ಬಣ್ಣದಲ್ಲಿ ವಾಸ್ತುಪ್ರಕಾರ ಮಾಡಲು ಉದ್ದೇಶಿಸಿರುವ ಎತ್ತರವನ್ನು ಸಹ ಬರೆಯಲಾಗಿದೆ.

  1. ನೈರುತ್ಯದಲ್ಲಿ – ಹಾಲಿ 605.80 ಮೀ ಎತ್ತರವಿದೆ. ೦.7೦ ಮೀಟರ್ ಎತ್ತರಿಸಿ 606.50 ಮೀ ನಿಗದಿ ಮಾಡಲು ಉದ್ದೇಶಿಸಿದೆ.
  2. ದಕ್ಷಿಣದಲ್ಲಿ – ಹಾಲಿ 605.70  ಮೀ ಎತ್ತರವಿದೆ. ೦.55 ಮೀಟರ್ ಎತ್ತರಿಸಿ 606.25 ಮೀ ನಿಗದಿ ಮಾಡಲು ಉದ್ದೇಶಿಸಿದೆ.
  3. ಆಗ್ನೇಯದಲ್ಲಿ – ಹಾಲಿ 605 ಮೀ ಎತ್ತರವಿದೆ. 1.೦೦ ಮೀಟರ್ ಎತ್ತರಿಸಿ 606.೦೦ಮೀ ನಿಗದಿ ಮಾಡಲು ಉದ್ದೇಶಿಸಿದೆ.
  4. ಪೂರ್ವದಲ್ಲಿ – ಹಾಲಿ 607.20 ಮೀ ಎತ್ತರವಿದೆ. 1.70 ಮೀಟರ್ ತಗ್ಗು ಮಾಡಿ 605.50  ಮೀ ನಿಗದಿ ಮಾಡಲು ಉದ್ದೇಶಿಸಿದೆ.
  5. ವಾಯುವ್ಯಯದಲ್ಲಿ – ಹಾಲಿ 604.10  ಮೀ ಎತ್ತರವಿದೆ. 1.65 ಮೀಟರ್ ಎತ್ತರಿಸಿ 605.75 ಮೀ ನಿಗದಿ ಮಾಡಲು ಉದ್ದೇಶಿಸಿದೆ.
  6. ಪಶ್ಚಿಮದಲ್ಲಿ – ಹಾಲಿ 606.25 ಮೀ ಎತ್ತರವಿದೆ. 0.25  ಮೀಟರ್ ಎತ್ತರಿಸಿ 606.50   ಮೀ ನಿಗದಿ ಮಾಡಲು ಉದ್ದೇಶಿಸಿದೆ.
  7. ಉತ್ತರದಲ್ಲಿ – ಹಾಲಿ 606.50   ಮೀ ಎತ್ತರವಿದೆ. 1.೦೦ ಮೀಟರ್ ಮಣ್ಣನ್ನು ತೆಗೆಸಿ ತಗ್ಗು ಮಾಡಿ   605.50 ಮೀ ನಿಗದಿ ಮಾಡಲು ಉದ್ದೇಶಿಸಿದೆ.
  8. ಈಶಾನ್ಯದಲ್ಲಿ – ಹಾಲಿ 607.00 ಮೀ ಎತ್ತರವಿದೆ. 2.೦೦ ಮೀಟರ್ ಮಣ್ಣನ್ನು ತೆಗೆಸಿ ತಗ್ಗು ಮಾಡಿ   605.೦೦ ಮೀ ನಿಗದಿ ಮಾಡಲು ಉದ್ದೇಶಿಸಿದೆ.
  9. ಅಷ್ಟಭುಜಾಕೃತಿಯ ಕೇಂದ್ರ ಬಿಂದು ಸಹ ತಗ್ಗು ಇರಬಾರದಂತೆ, ಈ ಎತ್ತರವನ್ನು 605.00 ಮೀ ಎತ್ತರವಿರುವಂತೆ ಕಾಯ್ದುಕೊಳ್ಳಬೇಕಂತೆ.

  ವಾಸ್ತು ತಜ್ಞರುಗಳು ಸರ್ಟಿಪೈ ಮಾಡಿದ ನಂತರ ನಿಗದಿತ ಎತ್ತರಕ್ಕೆ ಅನುಗುಣವಾಗಿ ಕಾಮಗಾರಿ ಮಾಡಬೇಕಾಗುವುದು. ನಮ್ಮ ಸಂಸ್ಥೆ ಇದೂವರೆಗೂ ವಾಸ್ತು ಸಲಹಾಗಾರರನ್ನು ಅಂತಿಮಗೊಳಿಸಿಲ್ಲ. ಬಹಳಷ್ಟು ಜನ ಸ್ಥಳಕ್ಕೆ ಬಂದು ಸಲಹೆ ನೀಡಿದ್ದಾರೆ. ಪ್ರಸ್ತುತ ವಾಸ್ತು ಸಲಹಾಗಾರರು ಒಬ್ಬರು ಹಾಗೂ 3 ನೇ ವ್ಯಕ್ತಿ ತಪಾಸಣೆಗೆ ಇನ್ನೊಬ್ಬರನ್ನು ಗುರುತಿಸಬೇಕಿದೆ. ಶಕ್ತಿದೇವತೆ  ಆಶೀರ್ವಾದ ಯಾರಿಗಿದೆ ನೋಡೋಣ.

ತಾವೂ ಸಹ ಸಲಹೆ ನೀಡಬಹುದಾಗಿದೆ. ಇದು ಒಂದು ನಮಗೆ ದೊಡ್ಡ ಕೊಡುಗೆಯಾಗಲಿದೆ.