22nd November 2024
Share

TUMKURU:SHAKTHIPEETA FOUNDATION

ಪ್ರಧಾನಿ ಮೋದಿಯವರು ಘೋಶಿಸಿರುವ ಒಂದು ಜಿಲ್ಲೆ-ಒಂದು ಉತ್ಪನ್ನ’ ಯೋಜನೆಯಡಿ, ತುಮಕೂರು ಜಿಲ್ಲೆಯಲ್ಲಿ ತೆಂಗು ಉತ್ಪನ್ನಗಳ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ವಿಶ್ವದ ಗಮನವನ್ನು ಕಲ್ಪತರು ನಾಡಾದ ತುಮಕೂರು ಜಿಲ್ಲೆಯ ಕಡೆ ಸೆಳೆಯಲಾಗುವುದು ಎಂದು ಜಿಲ್ಲೆಯಲ್ಲಿನ ದೀನ್ ದಯಾಳ್ ಉಪಾಧ್ಯಾಯ ಯೋಜನೆ-ರಾಷ್ಟ್ರೀಯ ಗ್ರಾಮೀಣಾ ಜೀವನೋಪಾಯ ಅಭಿಯಾನ ಪದಾಧಿಕಾರಿಗಳಾದ  (ಡೇ-ಎನ್‌ಆರ್‌ಎಲ್‌ಎಮ್) ನಾರಿಶಕ್ತಿ ಪ್ರತಿಜ್ಞೆ ಮಾಡಿದರು.

ದಿನಾಂಕ:20.01.2021  ರಂದು ತುಮಕೂರು ನಗರದಲ್ಲಿನ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿನ ಸಂಪನ್ಮೂಲ ಕೇಂದ್ರದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಪ್ರತಿಜ್ಞೆ ಮಾಡಿದರು.

  1. ತುಮಕೂರು ಜಿಲ್ಲೆಯಲ್ಲಿ ಉತ್ಪಾದಿಸುವ ತೆಂಗು ಉತ್ಪನ್ನಗಳಿಗೆ ಕಲ್ಪತರು ಬ್ರ್ಯಾಂಡ್’ ಮಾಡಿ ಮಾರಾಟ ವ್ಯವಸ್ಥೆ ಮಾಡುವುದು.
  2. ತುಮಕೂರು ನಗರದಲ್ಲಿ ಮಾರಾಟ ಮಳಿಗೆ ಅಂದರೆ ತೆಂಗು ಉತ್ಪನ್ನಗಳ ಮಾಲ್’ ಸ್ಥಾಪಿಸುವುದು.
  3. ಜಿಲ್ಲೆಯ 330 ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ 13514   ಸ್ವ-ಸಹಾಯ ಗುಂಪುಗಳ ಸುಮಾರು 173279  ಸಂಜೀವಿನಿ ಸದಸ್ಯರು ಉತ್ಪಾದನೆ ಮಾಡುವ ಉತ್ಪನ್ನಗಳನ್ನು ಎಂಪಿಸಿಎಸ್ ಮಾದರಿಯಲ್ಲಿ ಸಂಗ್ರಹ’ ಮಾಡುವುದು.
  4. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಜಿಲ್ಲೆ-ಒಂದು ಉತ್ಪನ್ನ ಯೋಜನೆಯಡಿ ಕಾರ್ಯನಿರ್ವಹಿಸಲು ಗ್ರಾಮಠಾಣಗಳಲ್ಲಿನ ಜಾಗ ಅಥವಾ ಸರ್ಕಾರಿ ಜಮೀನುಗಳಲ್ಲಿ ಕಾಮನ್ ಫೆಸಿಲೆಟಿ ಸೆಂಟರ್’ ನಿರ್ಮಾಣ ಮಾಡುವುದು.
  5. ಉದ್ಧಿಮೆಗಳನ್ನು ಸ್ಥಾಪಿಸಲು  ‘ಆರ್ಥಿಕನೆರವು ಮತ್ತು ಅಗತ್ಯ ಮೂಲಭೂತ ಸೌಲಭ್ಯ’ ಕಲ್ಪಿಸುವುದು.
  6. ಫಾರ್‌ವಾರ್ಡ್ & ಬ್ಯಾಕ್‌ವಾರ್ಡ್ ಲಿಂಕೇಜ್’ ವ್ಯವಸ್ಥೆ ಕಲ್ಪಿಸುವುದು.
  7. ರಫ್ತು’ ಮಾಡಲು ವಿಶೇಷ ವ್ಯವಸ್ಥೆ ಕಲ್ಪಿಸುವುದು.
  8. ಕೋಕನಟ್ ಸ್ಪೆಷಲ್ ಎಕನಾಮಿಕ್ ಝೋನ್’ ಮಾಡಿ ಅಂತರರಾಷ್ಟ್ರಿಯ ಮೂಲಭೂತ ಸೌಲಭ್ಯ ಕಲ್ಪಿಸುವುದು.
  9. ತೆಂಗು, ನಾರು, ಮರಗಳ ಭಾಗ, ಚಿಪ್ಪು ಮತ್ತು ಬೇರುಗಳಿಂದ ಸುಮಾರು 150  ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾಡಬಹುದು, ಇವುಗಳ ಗುಣಮಟ್ಟ ಮತ್ತು ತಾಂತ್ರಿಕತೆ ಬಗ್ಗೆ ವಿಶೇಷ ತರಬೇತಿ ‘ನೀಡುವುದು.

 ಇತ್ಯಾದಿ ಯೋಜನೆಗಳ ಬಗ್ಗೆ  ಭಾಗವಹಿಸಿದ್ಧ ಮಹಿಳೆಯರು ಸಲಹೆ ನೀಡಿದರು.  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳಾದ ಶ್ರೀ ಮೋಹನ್ ಕುಮಾರ್, ಶ್ರೀ ಕೃಷ್ಣಮೂರ್ತಿ, ಶ್ರೀ ಅಶೋಕ್ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿ ಕುಂದರನಹಳ್ಳಿ ರಮೇಶ್ ಭಾಗವಹಿಸಿದ್ದರು.