19th April 2024
Share

TUMAKURU:SHAKTHI PEETA FOUNDATION

ಕೇಂದ್ರ ಸರ್ಕಾರ ದೇಶದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮಪಂಚಾಯಿತಿಗಳ ಮಟ್ಟದಲ್ಲಿ ಜನತಾ ಜೀವ ವೈವಿಧ್ಯ ದಾಖಲಾತಿ ಮಾಡಲು ಮಹತ್ತರವಾದ ನಿರ್ಧಾರ ಕೈಗೊಂಡಿದೆ. ತುಮಕೂರು ಜಿಲ್ಲೆಯ 330 ಗ್ರಾಮಪಂಚಾಯಿತಿಗಳ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯಾವ ರೀತಿ ಮಾಡಲಾಗಿದೆ ಎಂಬ ಬಗ್ಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು  ಜಿಲ್ಲಾ ಮಟ್ಟದ ದಿಶಾ ಸಮಿತಿಯ ಮೂಲಕ ತಪಾಸಣೆ ಮಾಡಲು ಮುಂದಾಗಿದ್ದಾರೆ.

ಈ ಹಿನ್ನಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದಿನಾಂಕ:13.09.2021 ರಂದು ಪರಿಶೀಲನೆ ನಡೆಸಲಿದ್ದಾರೆ.

ನಮ್ಮೂರಿನ ಪಾರ್ಕ್ ನಮ್ಮೆಲ್ಲರ ಹೊಣೆ’  ಘೋಷಣೆ ಮಾಡಿದ ತುಮಕೂರು ಮಹಾನಗರ ಪಾಲಿಕೆ ಲೇ ಔಟ್ ವಾರು ಉಧ್ಯಾನವನಗಳನ್ನು ಗುರುತಿಸಲಾಗಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ.

ಜನತಾ ಜೀವ ವೈವಿಧ್ಯ ದಾಖಲಾತಿ ಪ್ರಕಾರ ಕೈಗೊಳ್ಳ ಬೇಕಾಗಿರುವ ಎಲ್ಲಾ ಅಂಶಗಳ ಬಗ್ಗೆ ಜೀವ ವೈವಿಧ್ಯ ತಜ್ಞ ಶ್ರೀ ಟಿ.ವಿ.ಎನ್ ಮೂರ್ತಿಯವರು ಪಿಪಿಟಿ ಪ್ರದರ್ಶನ ಮಾಡಲಿದ್ದಾರೆ.

ವಿಶೇಷವಾಗಿ ಜಲದೃಶ್ಯದ ಪ್ರಕಾರ ಆಯಾ ವ್ಯಾಪ್ತಿಯಲ್ಲಿರುವ ಕೆರೆ ಕಟ್ಟೆಗಳ, ಜಲಮೂಲಗಳ, ಕರಾಬು ಹಳ್ಳಗಳ ಬಗ್ಗೆ  ಎಲ್ಲಾ 341 ಸ್ಥಳೀಯ ಸಂಸ್ಥೆಗಳ ಮೂಲಕ ಪರಿಶೀಲನೆ ನಡೆಸಲು ಚಾಟಿ ಬೀಸಲಿದ್ದಾರೆ.

ನಾಟಿ ವೈಧ್ಯರು, ಹಕೀಮರು ಮತ್ತು ಪಾರಂಪರಿಕ ವೈಧ್ಯರಿಗೆ ಧೃಡೀಕರಣ ಪತ್ರ ನೀಡುವ  ಆಂದೋಲನಕ್ಕೂ ಚಾಲನೆ ನೀಡಲಿದ್ದಾರೆ.

ಇದೊಂದು ಮಹತ್ವದ ನಿರ್ಧಾರವಾಗಿದೆ. ಜಿಲ್ಲಾ ಮಟ್ಟದ ಜೀವ ವೈವಿಧ್ಯ ದಾಖಲಾತಿ ಸಮಿತಿ ಚುರುಕು ಆಗಬೇಕಿದೆ.

ಈ ಸಭೆಯ ನಿರ್ಣಯ ಜಿಲ್ಲೆಯ ಎಲ್ಲಾ 341 ಸ್ಥಳೀಯ ಸಂಸ್ಥೆಗಳಿಗೂ ಮಾದರಿಯಾಗಲಿದೆ.