22nd November 2024
Share

TUMAKURU:SHAKTHIPEETA FOUNDATION

ಕುಂದರನಹಳ್ಳಿಯಲ್ಲಿ ನಡೆದ ಶಕ್ತಿಪೀಠ ಫೌಂಡೇಷನ್ ಜನಜಾಗೃತಿ ಸಭೆಯಲ್ಲಿ ಅವಿವಾಹಿತ ಗಂಡು ಮಕ್ಕಳು ಮೊದಲು ನಮಗೆ ಹೆಣ್ಣು ಸಿಗುವ ಜಾಗೃತಿ ಮೂಡಿಸಿ ಎಂಬ ವಿಶಿಷ್ಠವಾದ ಬೇಡಿಕೆ ಇಡುವ ಮೂಲಕ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರು ಕೆಲ ಸಮಯ ಮೂಕ ಪ್ರೇಕ್ಷಕರಾದ ಸನ್ನಿವೇಶ ಜರುಗಿತು.

ಯಾವುದೇ ಗ್ರಾಮಕ್ಕೆ ಹೋದರು ಸುಮಾರು 10 ರಿಂದ 50 ಜನ ಗಂಡು ಮಕ್ಕಳಿಗೆ ಮದುವೆ ಆಗಿಲ್ಲ. ಯಾರು ಹೆಣ್ಣು ಕೊಡುತ್ತಿಲ್ಲ. ಬ್ರೋಕರ್ ಗಳಿಗೆ ಲಕ್ಷಾಂತರ ರೂ ಹಣ ಸುರಿದು ಬೀದರ್, ಗುಲ್ಬರ್ಗ ಹೀಗೆ ಹಲವಾರು ಕಡೆ ಹೆಣ್ಣು ಕೊಡಿಸುತ್ತಾರೆ.

ನಾವೇ ವಧು ದಕ್ಷಿಣೆ ನೀಡಿ, ಹಣ ಖರ್ಚು ಮಾಡಿಕೊಂಡು ಮದುವೆಯಾದರೂ, ಮದುವೆಯಾದ ನಂತರ ಇನ್ನೂ ಹೆಚ್ಚಿಗೆ ವಧು ದಕ್ಷಿಣೆ ನೀಡುವವರು ಸಿಕ್ಕಿದರೆ ಇಲ್ಲಿಂದ ಕದ್ದು ಹೋಗುತ್ತಾರೆ. ಎಷ್ಟೋ ಗಂಡು ಮಕ್ಕಳಿಗೆ ಪ್ರಗ್ನೆಂಟ್ ಆಗಿರುವ ಹೆಣ್ಣುಗಳ ಜೊತೆ ಮದುವೆ ಮಾಡಿಸುತ್ತಾರೆ.

ಇದು ಒಂದು ದೊಡ್ಡ ಸಾಮಾಜಿಕ ಪಿಡುಗು ಆಗಿದೆ. ಮಠಾಧಿಪತಿಗಳೆಲ್ಲಾ ರಾಜಕಾರಣಕ್ಕೆ ಧುಮುಕಿದ್ದಾರೆ, ರಾಜಕಾರಣಿಗಳು ಶೇ 40 ಲಂಚದ ಕಡೆ ಗಮನ ಹರಿಸುತ್ತಾರೆನಮ್ಮ ಕಡೆ ಗಮನ ಹರಿಸುವವರೇ ಇಲ್ಲದಂತಾಗಿದೆ ಎಂಬ ನೋವು ತೋಡಿಕೊಂಡರು.

ಜೈಪ್ರಕಾಶ್ ರವರು ಈ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುವುದು ಸೂಕ್ತವಾಗಿದೆ. ಇದಕ್ಕೆ ಬೆರೊಂದು ಸಭೆಯನ್ನು ಆಯೋಜಿಸಿ ಎಂದು ಶಕ್ತಿಪೀಠ ಫೌಂಡೇಷನ್ ಪದಾಧಿಕಾರಿಗಳಿಗೆ ಸಲಹೆ ನೀಡಿದರು.

ಶಕ್ತಿಪೀಠ ಫೌಂಢೇಷನ್ ಅಭಿವೃದ್ಧಿ ವಿಚಾರಗಳಿಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಪಿಡುಗಗಳ ಬಗ್ಗೆಯೂ ವಿಶೇಷ ಗಮನ ಹರಿಸಬೇಕಿದೆ. ಸೋಹನ್ ನೀವೂ ಈ ಡಾಟಾ ಬೇಸ್ ಏಕೆ ಮಾಡಬಾರದು ಎಂದು ಶಕ್ತಿಪೀಠ ಫೌಂಡೇಷನ್ ಸಿಇಓ ರವರಾದ ಚಿ.ಕೆ.ಆರ್.ಸೋಹನ್ ಗೆ ಸಲಹೆ ನೀಡಿದರು.

ಶ್ರೀಮತಿ ಬಿ.ಸುಜಾತ ಕುಮಾರಿಯವರನ್ನು ಕರೆದು ಮಾತನಾಡಿದ ಜೈಪ್ರಕಾಶ್ ರವರು, ಮೇಡಂ ನೀವು ಕುಂದರನಹಳ್ಳಿ ರಮೇಶ್ ರವರ ಕಾಟವನ್ನು ಹೇಗೆ ಸಹಿಸಿಕೊಂಡಿದ್ದೀರಿ. ನಾನು ಈ ಸಭೆಯಲ್ಲಿ ಈ ಬಗ್ಗೆ ಮಾತನಾಡ ಬೇಕು ಎಂದು ಕೊಂಡಿದ್ದೆ, ಆದರೆ ಕೆಲಸದ ಒತ್ತಡದಿಂದ ನಾನು ಬರುವುದು ವಿಳಂಭವಾಯಿತು.

ಇವರು ರಾತ್ರಿಯೆಲ್ಲಾ ಕೆಲಸ ಮಾಡುತ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ಅಫ್ ಲೋಡ್ ಮಾಡುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ವಿವಿಧ ಯೋಜನೆಗಳ ಜಾರಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆ ಕಚೇರಿಗಳಿಗೆ ಸುತ್ತಾಡುತ್ತಾರೆ.

ನಾನು ಸುಮಾರು 20 ವರ್ಷಗಳಿಂದಲೂ ಗಮನಿಸುತ್ತಿದ್ದೇನೆ. ಅವರನ್ನೂ ಇನ್ನೂ ನೀವೂ ಸಹಿಸಿಕೊಂಡಿದ್ದೀರಿ ಎಂದರೆ ನಾವು ನಿಮಗೆ ನಾವು ಸನ್ಮಾನ ಮಾಡಲೇ ಬೇಕು ಎಂದಾಗ ಎಲ್ಲರೂ ಗೊಳ್ ಎಂದು ನಕ್ಕರು.