TUMAKURU:SHAKTHIPEETA FOUNDATION
ಹೀರೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಮೇಳಕ್ಕೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆ ಹೋಗಿದ್ದೆ. ಅಲ್ಲಿ ಒಬ್ಬ ರೈತರೊಬ್ಬರು ಹತ್ತಾರು ಜಾತಿಯ ಹಣ್ಣುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು.
ನಮಗೆ ತಿನ್ನಲು ಹಣ್ಣು ಕೊಟ್ಟರು,ಎಷ್ಟು ಜಾತಿಯ ಹಣ್ಣಿನ ಗಿಡ ಹಾಕಿದ್ದೀರಿ ಎಂದು ಕೇಳಿದಾಗ ಆತ ಸುಮಾರು 150 ಜಾತಿ ಇವೆ ಎಂದಾಗ ನಾನು ಸುಸ್ತಾದೆ. ಯಾವ ಊರು ಎಂದಾಗ ಅವರು ಮುಖದ ಮೇಲೆ ಒಡೆದ ಹಾಗೆ ಹೇಳಿದ್ದು, ಯಾಕೆ ರಮೇಶ್ ನೀವು ನಮ್ಮ ಸಂಬಂಧಿಗಳು, ನಿಮ್ಮ ಊರಿನಿಂದ ಹೆಣ್ಣು ತಂದಿದ್ದೆವಲ್ಲಾ ಎಂದಾಗ ನನಗೆ ಮೊದಲು ಗೊತ್ತಾಗಲಿಲ್ಲ.
ನಂತರ 25 ವರ್ಷಗಳ ಕಹಿ ಘಟನೆಯೊಂದನ್ನು ಹೇಳಿದಾಗ ನನಗೆ ಅವರ ಸಂಭಂದ ತಿಳಿಯಿತು. ನಾನು ನಿಮ್ಮ ತೋಟಕ್ಕೆ ಬರುತ್ತೇನೆ ಎಂದು ಮೊಬೈಲ್ ನಂಬರ್ ತೆಗೆದುಕೊಂಡೆ. ನಂತರ ಒಂದು ವಾರದಲ್ಲೀಯೇ ಕೇಂದ್ರ ಕೃಷಿ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ರವರು ಅವರ ತೋಟಕ್ಕೆ ಭೇಟಿ ನೀಡಿದ್ದು ನೋಡಿ ನನಗೂ ಖುಷಿಯಾಯಿತು.
ನಿನ್ನೆ ಬಿಜೆಪಿ ಮುಖಂಡರಾದ ಶ್ರೀ ಶಿವಪ್ರಸಾದ್ ರವರು, ಶ್ರೀ ಶಿವಕುಮಾರ್ ರವರು ಮತ್ತು ನಾನು ಅವರ ತೋಟಕ್ಕೆ ಭೇಟಿ ನೀಡಿದ್ದೆವು. ಅವರ ತೋಟ ಒಂದು ಸುತ್ತು ಹೊಡೆದೆವು, ನಂತರ ಪುಸ್ತಕ ಕೊಟ್ಟು ಅಭಿಪ್ರಾಯ ಬರೆಯಿರಿ ಎಂದಾಗ ನಮ್ಮ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಬರೆದಿದ್ದನ್ನು ಓದಿದೆ.
‘ನಾನು ಬರೆದಿದ್ದು ಇಷ್ಟೇ ನಿಮ್ಮ ತೋಟವೇ ಕೃಷಿ ಸ್ವರ್ಗ, ನಿಮ್ಮಂಥರವರಿಗೆ ಡಾಕ್ಟರೇಟ್ ನೀಡಲು ಸರ್ಕಾರಗಳ ಜೊತೆ ಸಮಾಲೋಚನೆ ನಡೆಸುವುದು ಒಂದು ನನ್ನ ಪ್ರಮುಖ ಅಜೆಂಡಾ’. ನಮ್ಮ ಶ್ರೀ ಟಿ.ಆರ್.ರಘೋತ್ತಮರಾವ್ ರವರು ನನ್ನೊಂದಿಗೆ ಮತ್ತು ಮಾಜಿ ಸಂದರಾದ ಶ್ರೀ ಎಸ್.ಪಿ.ಮುದ್ದುಹನುಮೇಗೌಡರು ಕೆಲವು ಭಾರಿ ಮಾಧ್ಯಮಗಳಲ್ಲಿ ರೈತರಿಗೆ ಡಾಕ್ಟರೇಟ್ ನೀಡುವ ಬಗ್ಗೆ ಮಾತನಾಡಿದ್ದು ನನಗೆ ನೆನಪಿಗೆ ಬಂತು.
ಪಿಯುಸಿ ಓದಿ ಕೃಷಿ ತಜ್ಞರಾಗಿರುವ ಶ್ರೀ ಜಯಣ್ಣನವರು ಮತ್ತು ಅವರ ಮಗ ಶ್ರೀ ಚನ್ನಕೇಶವ ಸ್ವಾಮಿರವರು ನಾವು ಒಂದು ‘ಮುಯ್ಯಾಳು ಒಪ್ಪಂದ’ ಮಾಡಿಕೊಂಡೆವು. ಅವರ ಜಮೀನು ಹದ್ದುಬÀಸ್ತು ನಿಗದಿ ಮಾಡಿಸಿ ಮುಳ್ಳು ತಂತಿಹಾಕಿಸಲು ನನ್ನ ಸಹಕಾರ ಕೋರಿದರು. ಅವರು ನಮ್ಮ ಶಕ್ತಿಪೀಠ ಕ್ಯಾಂಪಸ್ ನಲ್ಲಿ ಅವರ ತೋಟದಲ್ಲಿರುವ ಪ್ರತಿಯೊಂದು ಜಾತಿಯ ಗಿಡಗಳನ್ನು ಹಾಕಿಸುವ ಮೂಲಕ ಅವರು ಮುಯ್ಯಾಳು ತೀರಿಸುವ ಮೌಖಿಕ ಒಪ್ಪಂದಕ್ಕೆ ಸಾಕ್ಷಿಯಾಗಿದ್ದವರು ಶ್ರೀ ಶಿವಪ್ರಸಾದ್ ರವರು, ಶ್ರೀ ಶಿವಕುಮಾರ್ ರವರು.
ತುಮಕೂರು ತಾಲ್ಲೋಕು ಮಷಣಾಪುರದ ಚನ್ನಕೇಶವ ಸ್ವಾಮಿ(9972077357) ಫಾರಂಗೆ ಒಮ್ಮೆ ಭೇಟಿ ನೀಡಿ.