TUMAKURU:SHAKTHIPEETA FOUNDATION
ದಿನಾಂಕ:06.07.2022 ರಂದು ತುಮಕೂರಿನ ಶಕ್ತಿಪೀಠ ಫೌಂಡೇಷನ್ ಕಚೇರಿಯಲ್ಲಿ ನಡೆದ 6 ನೇ ಜನ ಜಾಗೃತಿ ಸಭೆಯಲ್ಲಿ ಕೆಳಕಂಡ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
- ಶಕ್ತಿಪೀಠ ಫೌಂಡೇಷನ್ ಪ್ರಾಯೋಗಿಕವಾಗಿ ಸಿದ್ಧಪಡಿಸುತ್ತಿರುವ ಮೌಲ್ಯ ಮಾಪನ ವರದಿಗಳನ್ನು 75 ಜನಜಾಗೃತಿ ಸಭೆ ಆಯೋಜಿಸುವ ಸಂಘ ಸಂಸ್ಥೆಗಳ, ಕುಟುಂಬಗಳ ಮತ್ತು ವ್ಯಕ್ತಿಗಳ ನೇತೃತ್ವದಲ್ಲಿ ‘ಮಾನ್ಯ ಮುಖ್ಯ ಮಂತ್ರಿ’ ಯವರಿಗೆ ಸಲ್ಲಿಸಲು ನಿರ್ಣಯ ಮಾಡಲಾಯಿತು.
- ಶಕ್ತಿಪೀಠ ಫೌಂಡೇಷನ್ ಪ್ರಾಯೋಗಿಕವಾಗಿ ಸಿದ್ಧಪಡಿಸುತ್ತಿರುವ ಮೌಲ್ಯ ಮಾಪನ ವರದಿಗಳನ್ನು 75 ಜನಜಾಗೃತಿ ಸಭೆ ಆಯೋಜಿಸುವ ಸಂಘ ಸಂಸ್ಥೆಗಳ, ಕುಟುಂಬಗಳ ಮತ್ತು ವ್ಯಕ್ತಿಗಳ ನೇತೃತ್ವದಲ್ಲಿ ‘ಮಾನ್ಯ ಪ್ರಧಾನ ಮಂತ್ರಿ’ ಯವರಿಗೆ ಸಲ್ಲಿಸಲು ನಿರ್ಣಯ ಮಾಡಲಾಯಿತು.
- ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣರವರು ಬೆಂಗಳೂರನ್ನು ಐಟಿ-ಬಿಟಿ ಕೇಂದ್ರವನ್ನಾಗಿ ಮಾಡಿ, ವಿಶ್ವದ ಗಮನವನ್ನು ಬೆಂಗಳೂರಿನ ಕಡೆಗೆ ಸೆಳೆಯಲು ಕಾರಣೀಭೂತರಾಗಿದ್ದಾರೆ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆದಾಯ ಹೆಚ್ಚಳದ ‘ಐಟಿ–ಬಿಟಿ ಜನಕ’ರಾಗಿದ್ದಾರೆ ಹಾಗೂ ಪಶ್ಚಿಮಾಭಿಮುಖವಾಗಿ ನೀರು ತರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಯೋಜನೆಗೆ ಚಾಲನೆ ನೀಡಿದ ಒಂದು ಶಕ್ತಿಯಾಗಿದ್ದಾರೆ, ಅವರಿಗೆ ಅಭಿನಂದನೆÀ ಸಲ್ಲಿಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
- ತುಮಕೂರಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರು ಮತ್ತು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯರವರ ಜ್ಞಾನದ ಧಾರೆಯಿಂದ ರಾಜ್ಯ ‘ಜಲಗ್ರಂಥ’ ಸಿದ್ಧಪಡಿಸಲು ಒಂದು ಶಕ್ತಿಯಾಗಿದೆ. ಕಳೆದ 40 ವರ್ಷಗಳಿಂದಲೂ ನೀರಾವರಿ ಯೋಜನೆಗಳಿಗಾಗಿ ನಿರಂತವಾಗಿ ‘ಜಲ ಋಷಿ’ ಗಳಂತೆ ಶ್ರಮಿಸಿರುವ ಮತ್ತು ಶ್ರಮಿಸುತ್ತಿರುವ ಅವರಿಬ್ಬರಿಗೆ ಅಭಿನಂದನೆ ಸಲ್ಲಿಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
- ತುಮಕೂರು ನಗರದಲ್ಲಿ ಇವೆ ಎನ್ನಲಾದ ಸುಮಾರು 939 ಉಧ್ಯಾನವನಗಳ ಹುಡುಕಾಟ ಮಾಡಿ, 3 ನೇ ಹಂತದ ಹಸಿರು ತುಮಕೂರು ಯೋಜನೆಗೆ ಜನ ಜಾಗೃತಿ ಮೂಡಿಸಲು ‘ತುಮಕೂರಿನ ಪ್ರೆಸ್ ಕ್ಲಬ್’ ಮುಂದೆ ಬಂದಿದೆ. ಶೀಘ್ರದಲ್ಲಿ ಎಂ.ಓ.ಯು ಮಾಡಿಕೊಳ್ಳಲಾಗುವುದು.
- ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇವೆ ಎನ್ನಲಾದ 4365 ಜಲಸಂಗ್ರಹಾಗಾರಗಳ ಹುಡುಕಾಟದ ಜನ ಜಾಗೃತಿ ಮೂಡಿಸಲು ತುಮಕೂರಿನ ‘ಪ್ರಗತಿ ಟಿವಿ ಮತ್ತು ಪ್ರಜಾಪ್ರಗತಿ ದಿನ ಪತ್ರಿಕೆ’ ಮುಂದೆ ಬಂದಿದೆ. ಶೀಘ್ರದಲ್ಲಿ ಎಂ.ಓ.ಯು ಮಾಡಿಕೊಳ್ಳಲಾಗುವುದು.
- ತುಮಕೂರು ನಗರದಲ್ಲಿ ಇವೆ ಎನ್ನಲಾದ ಸುಮಾರು 939 ಉಧ್ಯಾನವನಗಳ ಮತ್ತು ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇವೆ ಎನ್ನಲಾದ 4365 ಜಲಸಂಗ್ರಹಾಗಾರಗಳ ‘ಜಿಯೋಟ್ಯಾಗಿಂಗ್’ ಮಾಡಲು ತಜ್ಞರಾದ ಶ್ರೀ ಮಲ್ಲೇಶ್. ಶ್ರೀ ಸತ್ಯಾನಂದ್, ಶ್ರೀ ಬಸವರಾಜ್ ಸುರಣಗಿ, ಶ್ರೀ ಶಶಿಧರ್, ಶ್ರೀ ಪ್ರಮೋದ್ ಸಿದ್ದಗಂಗಯ್ಯ, ಶ್ರೀ ರಾಮಮೂರ್ತಿ, ಶ್ರೀ ರಮೇಶ್ ತಂಡ ಮುಂದೆ ಬಂದಿದೆ. ಶೀಘ್ರದಲ್ಲಿ ಎಂ.ಓ.ಯು ಮಾಡಿಕೊಳ್ಳಲಾಗುವುದು.
- ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಘೋಷಣೆಯಡಿ ತುಮಕೂರು ಜಿಲ್ಲೆಯ 2715 ಕ್ಕೂ ಗ್ರಾಮಗಳ ‘ನದಿ ನೀರಿನ ಅಲೋಕೇಷನ್ ಮೌಲ್ಯಮಾಪನ’ ಮಾಡಲು ತಜ್ಞರಾದ ಶ್ರೀ ಮಲ್ಲೇಶ್. ಶ್ರೀ ಸತ್ಯಾನಂದ್, ಶ್ರೀ ಬಸವರಾಜ್ ಸುರಣಗಿ, ಶ್ರೀ ಶಶಿಧರ್, ಶ್ರೀ ಪ್ರಮೋದ್ ಸಿದ್ದಗಂಗಯ್ಯ, ಶ್ರೀ ರಾಮಮೂರ್ತಿ, ಶ್ರೀ ರಮೇಶ್ ಇನ್ನೂ ಮುಂತಾದವರ ತಂಡ ಮುಂದೆ ಬಂದಿದೆ. ಶೀಘ್ರದಲ್ಲಿ ಎಂ.ಓ.ಯು ಮಾಡಿಕೊಳ್ಳಲಾಗುವುದು.
- ‘ಕರ್ನಾಟಕ ರಾಜ್ಯ, ಕೇಂದ್ರ ಸರ್ಕಾರದಿಂದ ಅತಿಹೆಚ್ಚು ಅನುದಾನ ಪಡೆದ ರಾಜ್ಯವನ್ನಾಗಿಸಲು ಸ್ಟ್ರಾಟಜಿ’ ಮಾಡಲು ಡಾಟಾ ವಿಜ್ಞಾನಿ ಚಿ! ಕೆ.ಆರ್.ಸೋಹನ್ ಇನ್ನೂ ಮುಂತಾದವರ ತಂಡ ಮುಂದೆ ಬಂದಿದೆ. ಶೀಘ್ರದಲ್ಲಿ ಎಂ.ಓ.ಯು ಮಾಡಿಕೊಳ್ಳಲಾಗುವುದು.
- ಶಕ್ತಿಪೀಠ ಫೌಂಡೇಷನ್ ವತಿಯಿಂದ, ಶಕ್ತಿಪೀಠ ಕ್ಯಾಂಪಸ್ ನಲ್ಲಿ ನಿರ್ಮಾಣ ಮಾಡುತ್ತಿರುವ ‘ಅನ್ನ ಜ್ಞಾನ ಪರಿಸರ’ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲು ಮತ್ತು ನಿಧಿ ಸಂಗ್ರಹದಲ್ಲಿ ಪಾರದರ್ಶಕತೆ ತರಲು ಡಿಜಿಟಲ್ ರೂಪದಲ್ಲಿ ನಿಧಿ ಸಂಗ್ರಹ ಅಭಿಯಾನ ಮಾಡಲು ಶ್ರೀ ಸಿದ್ಧರಾಮಯ್ಯ, ಶ್ರೀ ಕೆ.ಆರ್.ಮಹೇಶ್, ಶ್ರಿ ಎಂ.ಆರ್.ಶಿವಣ್ಣ, ಶ್ರೀ ಚಂದ್ರಶೇಖರ್, ಶ್ರೀ ರಾಜೇಶ್ ರವರು ಮತ್ತು ಇನ್ನೂ ಮುಂತಾದವರ ತಂಡ ಮುಂದೆ ಬಂದಿದೆ. ಶೀಘ್ರದಲ್ಲಿ ಎಂ.ಓ.ಯು ಮಾಡಿಕೊಳ್ಳಲಾಗುವುದು.
- ಬೆಂಗಳೂರಿನ ಸುತ್ತ-ಮುತ್ತ ‘ರೈಲ್ ಕಾರಿಡಾರ್’ ಯೋಜನೆಯ ಚಾಲನೆಗೆ ಶ್ರಮಿಸಲು ಶ್ರೀ ಟಿ.ಆರ್.ರಘೋತ್ತಮರಾವ್‍ರವರು ಮತ್ತು ಇನ್ನೂ ಮುಂತಾದವರ ತಂಡ ಮುಂದೆ ಬಂದಿದೆ. ಶೀಘ್ರದಲ್ಲಿ ಎಂ.ಓ.ಯು ಮಾಡಿಕೊಳ್ಳಲಾಗುವುದು.
- ಕರ್ನಾಟಕ ರಾಜ್ಯದಲ್ಲಿರುವ ಜಲಸಂಗ್ರಹಾಗಾರಗಳನ್ನು ‘ಗಂಗಾಮಾತಾ ದೇವಾಲಯ’ ಎಂದು ಪೂಜಿಸಲು ಜನ ಜಾಗೃತಿ ಮೂಡಿಸಲು ಶ್ರೀಮತಿ ಉಮಾರವರು ಮತ್ತು ಅವರ ತಂಡ ಮುಂದೆ ಬಂದಿದೆ. ಶೀಘ್ರದಲ್ಲಿ ಎಂ.ಓ.ಯು ಮಾಡಿಕೊಳ್ಳಲಾಗುವುದು.
- ಶಕ್ತಿಪೀಠ ಫೌಂಡೇಷನ್ ರಾಜ್ಯಧ್ಯಾಂತ ಆಯೋಜಿಸಲು ಉದ್ದೇಶಿರುವ 75 ಜನ ಜಾಗೃತಿ ಸಭೆಗಳನ್ನು ಆಯೋಜಿಸುವವರ ‘ನೋಂದಣೆ’ ಮಾಡಿಕೊಳ್ಳಲು ನಿರ್ಣಯ ಮಾಡಲಾಗಿದೆ.
- ಶಕ್ತಿಪೀಠ ಫೌಂಡೇಷನ್‍ನ ಮೂರನೇ ವರ್ಷದ ಆಚರಣೆಯ ಅಂಗವಾಗಿ ‘ಪ್ರಾಮಾಣಿಕ ಪತ್ರಕರ್ತ ಮತ್ತು ಪ್ರಗತಿಪರ ಚಿಂತಕ’ ಶ್ರೀ ಅದಲಗೆರೆ ನಾಗೇಂದ್ರರವರಿಗೆ ಅಭಿನಂದನೆ ಸಲ್ಲಿಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
- ಕರ್ನಾಟಕ ರಾಜ್ಯ, ಕೇಂದ್ರ ಸರ್ಕಾರದಿಂದ ಅತಿಹೆಚ್ಚು ಅನುದಾನ ಪಡೆದ ರಾಜ್ಯವನ್ನಾಗಿಸಲು ಸ್ಟ್ರಾಟಜಿ ಸಿದ್ಧಪಡಿಸುತ್ತಿರುವ ಹಿನ್ನಲೆಯಲ್ಲಿ ‘ದೆಹಲಿಯಲ್ಲಿ 40 ಜನ ಲೋಕಸಭಾ ಸದಸ್ಯರ’ ಸಭೆ ಆಯೋಜಿಸುವ ಮಹತ್ವದ ನಿರ್ಣಯ ಮಾಡಲಾಗಿದೆ.
- ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಯೋಜನೆಗಳ ಜಾರಿಗಾಗಿ ರಾಜ್ಯದ್ಯಾಂತ ‘ಮಠಾಧಿಪತಿಗಳು, ವಿವಿಧ ವರ್ಗದ ಧಾರ್ಮಿಕ ಮುಖಂಡರ’ ಸೇವೆ ಬಳಸಿಕೊಳ್ಳಲು ರೂಪುರೇಷೆ ನಿರ್ಧರಿಸಲು ನಿರ್ಣಯ ಮಾಡಲಾಯಿತು.
- ಕುಂದರನಹಳ್ಳಿ ರಮೇಶ್ ರವರ ‘ಕೇಂದ್ರೀಯ ವಿದ್ಯಾಲಯ ಪೋಷಕರ ಸಮಿತಿಗೆ ಕಟ್ಟಡ ಮಾಡಬೇಕೆನ್ನುವ ಕನಸಿನ ವಿವಾದಕ್ಕೆ’ ಆರಂಭದಿಂದ ಎಲ್ಲಾ ಪೋಷಕರ ಸಭೆ ಆಯೋಜಿಸಿ, ಅಂತಿಮ ನಿರ್ಧಾರ ಕೈಗೊಳ್ಳುವ ನಿರ್ಣಯ ಮಾಡಲಾಗಿದೆ.
- ಕಳೆದ 34 ವರ್ಷಗಳ ಅವಧಿಯ ಸಮಾಜ ಸೇವೆ ಅವಧಿಯಲ್ಲಿ ಕುಂದರನಹಳ್ಳಿ ರಮೇಶ್ ರವರ ಗಡುಸಾದ ಮಾತಿನಿಂದ ಇದೂವರೆಗೂ ಯಾರಿಗಾದರೂ ನೋವು ಮಾಡಿದ್ದರೆ ಅಥವಾ ಏನಾದರೂ ತೊಂದರೆ ಮಾಡಿದ್ದರೆ, ಬಹಿರಂಗವಾಗಿ ‘ಸಾರ್ವಜನಿಕ ಕ್ಷಮೆ’ ಕೋರುವ ನಿರ್ಣಯ ಮಾಡಲಾಗಿದೆ.
ವಿವಿಧ ಸಂಘ ಸಂಸ್ಥೆಗಳು ಮತ್ತು ಕುಂದರನಹಳ್ಳಿ ರಮೇಶ್ ರವರ ಸಂಬಂಧಿಕರ ಸಮ್ಮುಖದಲ್ಲಿ ಶಕ್ತಿಪೀಠ ಫೌಂಡೇಷನ್ ಕಚೇರಿಯಲ್ಲಿ ‘ನವಗ್ರಹ ದಾನ ನೀಡಿ’ ನಂತರ ನಡೆದ ಸರಣಿ ಸಭೆಯಲ್ಲಿ ಈ ನಿರ್ಣಯ ಮಾಡಲಾಗಿದೆ.