22nd December 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರ ಎರಡನೇ ಸಭೆಯು ಬೆಂಗಳೂರಿನಲ್ಲಿ ದಿನಾಂಕ:13.07.2022 ರಂದು ಬೆಂಗಳೂರು ನಗರ ಜಿಲ್ಲೆಯ ಶ್ರೀ ಸರೇಶ್ ರವರ ಆತಿಥ್ಯದಲ್ಲಿ ನಡೆಯಿತು. ಈ ಸಭೆಯಲ್ಲಿ ಸರ್ವಾನುಮತದಿಂದ ಕೆಳಕಂಡ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ರಾಜ್ಯ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಒಬ್ಬೊಬ್ಬ ಸದಸ್ಯರು ಒಂದೊಂದು ಸಂಘಸಂಸ್ಥೆಗಳ ಮೂಲಕ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಶ್ರಮಿಸಲು, ರೂಪುರೇಷೆ ಸಿದ್ಧಪಡಿಸಲು ಯೋಜನೆ ರೂಪಿಸಲು ಸಮಾಲೋಚನೆ ನಡೆಸಲಾಗಿದೆ.

1.ಒಬ್ಬೊಬ್ಬ ರಾಜ್ಯ ಸಮಿತಿಯ ಸದಸ್ಯರು, ಕೆಳಕಂಡಂತೆ ಒಂದೊಂದು ಡಿವಿಸನ್ ಹೊಣೆಗಾರಿಕೆ ತೆಗೆದು ಕೊಳ್ಳುವುದು.

ಬೆಂಗಳೂರು ನಗರ ಜಿಲ್ಲೆಯ ಶ್ರೀ ಸರೇಶ್ ರವರು – ಬೆಂಗಳೂರು ಡಿವಿಸನ್

ಬೀದರ್ ಜಿಲ್ಲೆಯ ಶ್ರೀ ಶಿವಯ್ಯನವರು- ಮೈಸೂರು ಡಿವಿಸನ್

ಬಾಗಲಕೋಟೆ ಜಿಲ್ಲೆಯ ಶ್ರೀ ಎಲ್ಲಪ್ಪ್ಪ ಬೆಂಡಿಗೇರಿಯವರು- ಬೆಳಗಾಂ ಡಿವಿಸನ್

ಗುಲ್ಬರ್ಗ ಜಿಲ್ಲೆಯ  ಶ್ರೀಮತಿ ಸಂಗೀತಾ ರವರು – ಗುಲ್ಬರ್ಗ ಡಿವಿಸನ್

ತುಮಕೂರು ಜಿಲ್ಲೆಯ ಶ್ರೀ ಕುಂದರನಹಳ್ಳಿ ರಮೇಶ್- ನಾಲ್ಕು ಡಿವಿಸನ್ ವ್ಯಾಪ್ತಿಯ ಜಿಲ್ಲೆಗಳ ದಿಶಾ ಸಮಿತಿ ಸದಸ್ಯರ ಸಮಾವೇಶ ನಡೆಸಲು ಯೋಜನೆ ರೂಪಿಸುವುದು.ಒಬ್ಬೊಬ್ಬ ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸದಸ್ಯರು ಒಂದೊಂದು ಕೇಂದ್ರ ಸರ್ಕಾರದ ಯೋಜನೆಗಳ ಅಧ್ಯಯನ ಮಾಡಲು ಮನವೊಲಿಸುವುದು.

2.ಆಯಾ ಡಿವಿಸನ್ ವ್ಯಾಪ್ತಿಯ ಜಿಲ್ಲಾ ಮಟ್ಟದ ನಾಮನಿರ್ದೇಶಿತ ದಿಶಾ ಸಮಿತಿ ಸದಸ್ಯರ ಸಂಪರ್ಕ ಸಾಧಿಸುವುದು.

3.ಆಯಾ ಡಿವಿಸನ್ ವ್ಯಾಪ್ತಿಯ ಜಿಲ್ಲಾ ಮಟ್ಟದ  ದಿಶಾ ಸಮಿತಿ ಕಾರ್ಯವೈಖರಿ ಬಗ್ಗೆ ಮಾಹಿತಿ ಸಂಗ್ರಹಿಸುವುದು.

4.ಆಯಾ ಡಿವಿಸನ್ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕೈಗೊಂಡಿರುವ ಕೇಂದ್ರ ಸರ್ಕಾರದ ಬೃಹತ್ ಯೋಜನೆಗಳ ಮಾಹಿತಿ ಸಂಗ್ರಹಿಸುವುದು.

5.ಆಯಾ ಡಿವಿಸನ್ ವ್ಯಾಪ್ತಿಯ ಜಿಲ್ಲೆಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನವನ್ನು ಯಾವ ಯೋಜನೆಗಳಿಗೆ ಮಂಜೂರು ಮಾಡಿಸಬಹುದು ಎಂಬ ಅಧ್ಯಯನ ಮಾಡುವುದು.

6.ಆಯಾ ಡಿವಿಸನ್ ವ್ಯಾಪ್ತಿಯ ಲೋಕಸಭಾ ಸದಸ್ಯರ ಮತ್ತು ರಾಜ್ಯಸಭಾ ಸದಸ್ಯರ ನಿಕಟ ಸಂಪರ್ಕ ಇಟ್ಟುಕೊಳ್ಳುವುದು.

7.ಆಯಾ ಡಿವಿಸನ್ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಯೋಜನಾವಾರು ಅಭಿವೃದ್ಧಿ ಮೌಲ್ಯಮಾಪನ ಮಾಡುವುದು.

8.ಆಯಾ ಡಿವಿಸನ್ ವ್ಯಾಪ್ತಿಯ ವಿಷಯವಾರು ಪರಿಣಿತರ ಮಾಹಿತಿ ಸಂಗ್ರಹಿಸುವುದು.

9.ಒಬ್ಬೊಬ್ಬ ರಾಜ್ಯ ಸಮಿತಿಯ ಸದಸ್ಯರು, ಆರಂಭದಲ್ಲಿ ಕೇಂದ್ರ ಸರ್ಕಾರದ ಒಂದೊಂದು ಇಲಾಖೆಯ ಯೋಜನೆಗಳ ಅಧ್ಯಯನ ಹೊಣೆಗಾರಿಕೆ ತೆಗೆದು ಕೊಳ್ಳುವುದು.

ಬೆಂಗಳೂರು ನಗರ ಜಿಲ್ಲೆಯ ಶ್ರೀ ಸರೇಶ್ ರವರು –  ಐಟಿ ಬಿಟಿ

ಬೀದರ್ ಜಿಲ್ಲೆಯ ಶ್ರೀ ಶಿವಯ್ಯನವರು- ಗ್ರಾಮೀಣಾಭಿವೃದ್ಧಿ

ಬಾಗಲಕೋಟೆ ಜಿಲ್ಲೆಯ ಶ್ರೀ ಎಲ್ಲಪ್ಪ್ಪ ಬೆಂಡಿಗೇರಿಯವರು- ಕೃಷಿ

ಗುಲ್ಬರ್ಗ ಜಿಲ್ಲೆಯ  ಶ್ರೀಮತಿ ಸಂಗೀತಾ ರವರು – ಅರಣ್ಯ

ತುಮಕೂರು ಜಿಲ್ಲೆಯ ಶ್ರೀ ಕುಂದರನಹಳ್ಳಿ ರಮೇಶ್- ಜಲಶಕ್ತಿ