25th April 2024
Share

TUMAKURU: SHAKTHIPEETA FOUNDATION

 ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಗೆ  85 ವರ್ಷಗಳ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲು ನಾಡಿನ ಹಿರಿಯ ಸಾಹಿತಿಗಳಾದ ಶ್ರೀ ಕವಿತಾಕೃಷ್ಣರವರ ನೇತೃತ್ವದ ತಂಡ  ಅಭಿನಂದನಾ ಗ್ರಂಥ ರಚಿಸುತ್ತಿದ್ದಾರೆ.

ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣರವರ ಅಧ್ಯಕ್ಷತೆಯಲ್ಲಿ ತುಮಕೂರಿನಲ್ಲಿ ಸಮಾರಂಭ ನಡೆಸಲು ಅಭಿಮಾನಿಗಳು ಯೋಚಿಸಿದ್ದಾರೆ.

ಸುಮಾರು 60 ವರ್ಷಗಳ ಕಾಲ, ತುಮಕೂರು ಜಿಲ್ಲೆಯಲ್ಲಿ ವಿಚಿತ್ರ ರಾಜಕಾರಣ ಮಾಡುವ ಮೂಲಕ 5 ಭಾರಿ ಸಂಸತ್ ಸದಸ್ಯರಾಗಿ, ಅಭಿವೃದ್ಧಿ ಯೋಜನೆಗಳ ಕಡತ ಅನುಸರಣೆ ಮಾಡಲು ಕಚೇರಿ, ಕಚೇರಿಗಳನ್ನು ಸುತ್ತಿದವರಲ್ಲಿ ಬಹುತೇಕ ದೇಶದ ಸಂಸತ್ ಸದಸ್ಯರಲ್ಲಿ ಇವರೆ ಮೊದಲಿಗರು ಎನ್ನ ಬಹುದು. ಅವರ ಜೊತೆಯಲ್ಲಿ ಸುಮಾರು 33 ವರ್ಷಗಳ ಒಡನಾಟದ ನನ್ನ ಅನುಭವದೊಂದಿಗೆ ಈ ಮಾತು ಹೇಳುತ್ತಿದ್ದೇನೆ.

ಅವರ ಮತ್ತು ನನ್ನ ಅನುಭವದ ಅಭಿವೃದ್ಧಿ ಯೋಜನೆಗಳ ಕಡತಗಳ ಅನುಸರಣೆ ಮಾಹಿತಿಯನ್ನು ಒಂದು ಪುಸ್ತಕದ ರೂಪದಲ್ಲಿ ಹೊರತರಲು ಯೋಚಿಸಲಾಗಿದೆ. ನಮ್ಮ ಜೊತೆ ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಒಡನಾಟ ಹೊಂದಿರುವ ಶ್ರೀ ಟಿ.ಆರ್.ರಘೋತ್ತಮರಾವ್ ರವರು ಸೇರಿದಂತೆ ತುಮಕೂರು ನಗರದ, ಜಿಲ್ಲೆಯ, ಬೆಂಗಳೂರಿನ ಮತ್ತು ದೆಹಲಿಯಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಸಹಕರಿಸಿದವರ ಮತ್ತು ತುಮಕೂರು ಲೋಕಸಭಾ ಕ್ಷೇತ್ರದ ಪ್ರತಿ ಗ್ರಾಮದ ತಂಡದವರು ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲು ಉದ್ದೇಶಿಸಲಾಗಿದೆ.

ಜಿ.ಎಸ್.ಬಸವರಾಜ್ 85  ಅಂಗವಾಗಿ ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದಲ್ಲಿ ಇಂಡಿಯಾ @ 100, ಕರ್ನಾಟಕ @ 100 ಮತ್ತು ತುಮಕೂರು @ 100 ಮ್ಯೂಸಿಯಂ ಆರಂಭಿಸಲು ಭರದ ಸಿದ್ಧತೆ ನಡೆಯುತ್ತಿದೆ.

ಆಸಕ್ತರು ಸಂಪರ್ಕಿಸಲು ಮನವಿ ಮಾಡಲಾಗಿದೆ.