26th December 2024
Share

TUMAKURU:SHAKTHI PEETA FOUNDATION

ಟಿ.ಆರ್.ರಘೋತ್ತಮ ರಾವ್

ತುಮಕೂರು ನಗರ ಸಮೀಪದ ತುಮಕೂರು ಇಂಡಸ್ಟ್ರಿಯಲ್ ನೋಡ್  ಸಮೀಪದಲ್ಲೇ ಲಗತ್ತಾಗಿ ತುಮಕೂರು ಎಲೆಟ್ರಾನಿಕ್ಸ್  ಡಿಸೈನ್ ಮ್ಯಾನ್ಯುಫ಼್ಯಾಕ್ಚರ್ ಕ್ಲಸ್ಟರ್ ಸ್ಥಾಪಿಸಲು ಅಗತ್ಯವಾದ  ಭೂಮಿ ಲಭ್ಯವಿದೆ., ಜೊತೆಗೆ ಈ ಪ್ರದೇಶವು ಬೆಂಗಳೂರಿಗೆ ಪಡಸಾಲೆ ನಗರವಾದ ತುಮಕೂರು ನಗರಕ್ಕೆ  ಸಮೀಪವಾಗಿದೆ ಮತ್ತು ನ್ವೆಸರ್ಗಿಕವಾಗಿ ಎಲ್ಲಾ ಮೂಲಭೂತಸೌಕರ್ಯಗಳು ಹೊಂದಿದೆ. 

 ಅಲ್ಲದೇ ಈ ಪ್ರದೇಶಕ್ಕೆ ಇದೆ ತುಮಕೂರು ಇಂಡಸ್ಟ್ರಿಯಲ್ ನೋಡ್ ಅವರಣದ ಹಿರಿಮೆ. ಈ ಪ್ರದೇಶ ಚನ್ನೈ-ಬೆಂಗಳೂರು-ಚಿತ್ರದುರ್ಗ ಕೈಗಾರಿಕಾ ಕಾರಿಡಾರ್ ನಲ್ಲಿ ಬರುವ  ತುಮಕೂರು ಇಂಡಸ್ಟ್ರಿಯಲ್ ನೋಡ್ ಸಮೀಪದಲ್ಲಿದೆ[ನ್ಯಾಷನಲ್ ಹೂಡಿಕೆ ಮತ್ತು ಉತ್ಪಾದನಾ ವಲಯ ನಿಮ್ಜ್-] ಮತ್ತುಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್ ಗೂ ಲಗತ್ತಾಗಿದೆ. ಭವಿಷ್ಯದ ಡಿಫ಼ೆನ್ಸ್ ಕಾರಿಡಾರ್‌ಗೂ ಲಗತ್ತಾಗಿರುತ್ತದೆ. 

 ಬೆಂಗಳೂರು -ತುಮಕೂರು ನಡುವೆ ಉಪನಗರ ರೈಲು ಸೇವೆ ಎರಡನೆಯ ಹಂತದಲ್ಲಿ ಕೈಗೊಳ್ಳಲು ವರದಿ ಸಿದ್ದವಾಗಿದೆ. ಪರಿಣಿತಿ ಹೊಂದಿದ ಮಾನವಸಂಪನ್ಮೂಲ ಒದಗಿಸಲು ಜಿಲ್ಲೆಯಲ್ಲಿ 8 ಇಂಜನಿಯರಿಂಗ ಕಾಲೇಜುಗಳು ಇವೆ. ಭವಿಷ್ಯದಲ್ಲಿನ ರಾಜ್ಯದ ಮಹತಕಾಂಕ್ಶಿ ಯೋಜನೆ ಯಾದ ಐ.ಟಿ.ಐ.ಆರ್ ರೀಜನ್ ಮತ್ತು ಪ್ರಸ್ಥಾಪಿತ ಏರೋಸ್ಪೇಸ್ ಪಾರ್‍ಕ್‌ಗೆ,ಜಪಾನೀಸ್ ಕೈಗಾರಿಕಾ ಟೌನ್ ಶಿಪ್ ಗಳಿಗೆ ಲಗತ್ತಾಗಿದೆ.

 ಹೀಗೆ ಪಟ್ಟಿಮಾಡಿದರೆ ತುಮಕೂರು ಖಂಡಿತ ಎಲೆಟ್ರಾನಿಕ್ಸ್ ಮತ್ತು ಹಾರ್ಡ್ ವೇರ್ ಹಬ್ ಪಡೆಯಲು ಎಲ್ಲಾ ಅರ್ಹತೆ ಮೈಗೊಡಿಸಿಕೊಂಡಿದೆ. ಇಷ್ಟೆಲ್ಲಾ ನೈಸರ್ಗಿಕ ಮತ್ತು ಭೌತಿಕ ಮೂಲಭೂತಸೌಕರ್ಯ ವಿದ್ದರೂ ತುಮಕೂರಿಗೆ ಇಲ್ಲ ಇನ್ನೂ ಯೋಗ.

  ತುಮಕೂರು ಸಂಸದರಾದ ಶ್ರೀಜಿ.ಎಸ್.ಬಸವರಾಜ್ ಅವರು ತಮ್ಮ ಹಿಂದಿನ ಅವಧಿಯಲ್ಲಿ ಮಂಜೂರು ಆಗಿದ್ದ ಕೇಂದ್ರಸರ್ಕಾರ ಮಿನಿಸ್ಟ್ರಿ ಆಫ಼್ ಎಲೆಟ್ರಾನಿಕ್ಸ ಮತ್ತುಐ.ಟಿ ಸಚಿವಾಲಯ   ಕರ್ನಾಟಕಕ್ಕೆ ಪ್ರಾಜೆಕ್ಟ ID: KK1 ಬ್ರೌನ್ ಫ಼ೀಲ್ಡ್ ಎಲೆಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ /ಇಎಂಸಿ  ಗಳನ್ನು ಸ್ಥಾಪಿಸಲು 2013-14   ರನೋಟಿಫ಼ಿಕೇಶನ್  ಮಾಹಿತಿಯನ್ನು ಕೇಂದರ ಸರಕಾರದ ಹಾಗೂ ರಾಜ್ಯ ಸರಕಾರದ ಗಮನ ಸೆಳೆದು  ಆಗ್ರಹಿಸಿದ್ದಾರೆ.

  ಈ ಕಾರಣಕ್ಕಾಗಿ ದಿನಾಂಕ 24.09.2020 ರಂದು  ಮಾನ್ಯ ಸಂಸದರಾದ ಜಿಎಸ್.ಬಸವರಾಜ್ ಅವರಿಗೆ ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯ ಉತ್ತರಿಸಿ , ಈ ಬಗ್ಗೆ ರಾಜ್ಯಸರಕಾರ ಪ್ರಸ್ಥಾವನೆ ಸಲ್ಲಿಸಿದರೆ ಅಗತ್ಯಕ್ರಮ ತೆಗೆದುಕೊಳ್ಳಲಾಗುವುದು ತಿಳಿಸಿರುವುದರಿಂದ ರಾಜ್ಯಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಮತ್ತು ಐಟಿ ಪಾಲಿಸಿ 2020-25   ಅಡಿ ಕರಡು ಪ್ರಕಟಣೆ ಯಲ್ಲಿ ತುಮಕೂರು ಜಿಲ್ಲೆ ಗುರುತಸದೇ ಇರುವುದನ್ನು ಅಂತಿಮ ಪ್ರಕಟಣೆಯಲ್ಲಿ ಸರಿಪಡಿಸಲು ಸಹಾ ಕ್ರಮವಹಿಸ ಬೇಕಾಗಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿಎಲೆಟ್ರಾನಿಕ್ಸ್ ಉತ್ಪಾದನಾ ಆವರಣದಲ್ಲಿ ಜಿಲ್ಲೆಗೆ ನಿರಾಶೆ ಕಾದಿದೆ.