23rd December 2024
Share

TUMAKURU:SHAKTHI PEETA FOUNDATION

 ಮೇಲುಕೋಟೆ ಶ್ರೀ ಲಕ್ಷ್ಮಿತಾತಾಚರ್‌ರವರು ಇಂದು(10.10.2020) ನಮ್ಮ ಕಚೇರಿಗೆ ಭೇಟಿ ನೀಡಿ, ರಾಜ್ಯ ಮಟ್ಟದ ದಿಶಾ ಸಮಿತಿಯ ದ್ಯೇಯೋದ್ದೇಶಗಳು ಮತ್ತು ನನ್ನ ಕಾರ್ಯವೈಖರಿಯ ಗುರಿಯ ಬಗ್ಗೆ ಸಮಾಲೋಚನೆ ನಡೆಸಿದರು. ಜೊತೆಯಲ್ಲಿ ಇಂಜಿನಿಯರ್‌ಗಳಾದ ಶ್ರೀ ರಾಮಮೂರ್ತಿಯವರು ಮತ್ತು ಶ್ರೀ ಸತ್ಯಾನಂದ್‌ರವರು ಇದ್ದರು.

  ನಮ್ಮ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಕನಸಿನ ಈ ಸಮಿತಿ ಒಂದು ಅಭಿವೃದ್ಧಿ ದೇವಾಲಯವಿದ್ದಂತೆ’. ರಾಜ್ಯದ ದಿಶಾ ಸಮಿತಿಯ ಅಧ್ಯಕ್ಷರು ಹಾಗೂ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ದಿಶಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಕೆ.ಎಸ್.ಈಶ್ವರಪ್ಪನವರು, ಸೇರಿದಂತೆ ದಿಶಾ ಮಾರ್ಗಸೂಚಿಯ ಪ್ರಕಾರ ಸಚಿವರು, ರಾಜ್ಯದ ಎಲ್ಲಾ ಪಕ್ಷಗಳ ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭಾ ಸದಸ್ಯರು,  ವಿಧಾನ ಪರಿಷತ್ ಸದಸ್ಯರು ಮತ್ತು ದೆಹಲಿ ಪ್ರತಿನಿಧಿ ಸೇರಿದಂತೆ ನಮ್ಮ ರಾಜ್ಯದ ವಿವಿಧ ಪಕ್ಷಗಳ ದೆಹಲಿ ಮಟ್ಟದ ನಾಯಕರೊಂದಿಗೂ ಬೆರೆತು ಕಾರ್ಯನಿರ್ವಹಿಸಲು ಒಂದು ಮಾಸ್ಟರ್ ಪ್ಲಾನ್’ ಸಿದ್ಧವಾಗುತ್ತಿದೆ.

 ಹಾಗೆಯೇ ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ವಿವಿಧ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಜಿಲ್ಲಾ ಮಟ್ಟದ ದಿಶಾ ಸದಸ್ಯ ಕಾರ್ಯದರ್ಶಿವರು ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ಕಾರ್ಯದರ್ಶಿಯವರ ಜೊತೆಗೂ ನಿಕಟವಾದ ಸಂಪರ್ಕ ಸಾಧಿಸಲು ಉಸ್ಸುಕನಾಗಿದ್ದೇನೆ ಸಾರ್.

 ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ಚುರುಕಾಗಬೇಕು, ರಾಜ್ಯ ದಿಶಾ ಸಮಿತಿ ಸೂಕ್ತ ಮಾರ್ಗದರ್ಶನ ಮಾಡಬೇಕು. ಕೇಂದ್ರದ ಎಲ್ಲಾ ಯೋಜನೆಗಳು ಕಾಲಮಿತಿಯಲ್ಲಿ ಜಾರಿಯಾಗಬೇಕು. ಅದರಲ್ಲೂ ಮೋದಿಜಿಯವರು 2022 ನೇ ಇಸವಿ ಮತ್ತು 75 ನೇ ಸ್ವಾತಂತ್ರ್ಯ ದಿನದ ವೇಳೆಗೆ ಘೋಶಿಸಿರುವ ಯೋಜನೆಗಳನ್ನು ಕಾಲಮಿತಿಯಲ್ಲಿ ಜಾರಿ ಮಾಡುವ ಮೂಲಕ ಕರ್ನಾಟಕ ದಿಶಾ ಸಮಿತಿ ದೇಶದಲ್ಲಿ ನಂಬರ್-1’ ಆಗಲೇ ಬೇಕು. ಇದು ನನ್ನ ಕನಸು.

  ನನಗೆ ಈ ಸಮಿತಿಯಲ್ಲಿ ಕಾರ್ಯನಿರ್ವಹಿಸಲು ವಿಶೇಷ ಆಸಕ್ತಿ ಇದೆ. ಕಳೆದ 32 ವರ್ಷಗಳಿಂದ ನಾನು ಇದೇ ಕೆಲಸವನ್ನು ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್ ಸೇರಿದಂತೆ ಹಲವಾರು ಸಂಘಟನೆಗಳ, ಪರಿಣಿತರ ಸಹಕಾರದೊಂದಿಗೆ ತುಮಕೂರು ಜಿಲ್ಲೆಯಲ್ಲಿ ಮಾಡುತ್ತಿದ್ದೆ. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಅಭಿವೃದ್ಧಿ ವಿಚಾರದಲ್ಲಿ ಬಹುತೇಕ ಜೊತೆಯಲ್ಲಿ ಕಾಲಕಳೆದಿದ್ದೇವೆ.

 ‘ಕೊರೋನಾ ಮಹಾಮಾರಿ ಬಂದಿರುವುದರಿಂದ ಶ್ರೀ ಜಿ.ಎಸ್.ಬಸವರಾಜ್‌ರವರನ್ನು ಬೆಂಗಳೂರಿಗೆ ಜಾಸ್ತಿ ಓಡಾಡಿಸಿದರೆ, ನಮ್ಮ ಮನೆಯವರೆಲ್ಲಾ ಸೇರಿ ಕುಂದರನಹಳ್ಳಿ ರಮೇಶ್‌ರವರನ್ನು ಒಡೆಯಲು ತೀರ್ಮಾನಿಸಿದ್ದಾರೆ, ಎಂದು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ತುಮಕೂರು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಅಧಿಕಾರಿ ವರ್ಗದವರ ಮುಂದೆಯೇ ಘೋಶಿಸಿದ್ದಾರೆ.’

 ಜೊತೆಗೆ ಬೆಂಗಳೂರಿಗೆ ಯಾವುದೇ ಕಚೇರಿಗೆ ಹೋದರೂ ಎಲ್ಲಾ ಉನ್ನತಮಟ್ಟದ ಅಧಿಕಾರಿಗಳು ಸಹ ಎಂಪಿಯವರನ್ನು ಜಾಸ್ತಿ ಓಡಾಡಿಸುವುದು ಬೇಡ ಎಂಬ ಸಲಹೆಯನ್ನು ನೀಡುತ್ತಿದ್ದಾರೆ.

  ಆದರೆ ರಾಜ್ಯ ಮಟ್ಟದ ದಿಶಾ ಸಮಿತಿ ದೇಶಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸಲು ರಾಜ್ಯವನ್ನು ಸುತ್ತಬೇಕು, ಜೊತೆಗೆ ಬೆಂಗಳೂರಿನ ಪ್ರತಿಯೊಂದು ಕಚೇರಿಗೂ ಭೇಟಿನೀಡಲೇ ಬೇಕು ಸಾರ್. ನನಗೆ ಇದೂ ಒಂದು ಸವಾಲು ಆಗಿದೆ ಸಾರ್.

ತುಮಕೂರಿನಲ್ಲಿನ ಕಚೇರಿಗಳಿಗೆ ಓಡಾಡಲು ಪ್ರತಿದಿನ ರೂ 50 ಸಾಕಾಗುತ್ತಿತ್ತು, ಆದರೇ ಪ್ರತಿದಿನ ಬೆಂಗಳೂರಿಗೆ ಹೋಗಿ ಬರಲು ಕನಿಷ್ಠ ರೂ 2000 ಖರ್ಚು ಬರಲಿದೆ. ಇಡೀ ರಾಜ್ಯದ ಪ್ರವಾಸಕ್ಕೂ ಖರ್ಚು ಬರಲಿದೆ. ನನ್ನಲ್ಲಿರುವ ಕಾರಿಗೆ ಹನ್ನೊಂದು ವರ್ಷವಾಗಿದೆ. ಆರ್ಥಿಕ ಹೊಂದಾಣಿಕೆಯೂ ಅಗತ್ಯ. ಈಗ ನನಗೆ ಹೆಚ್ಚು ಹಣ ಖರ್ಚು ಮಾಡಿ ರಾಜ್ಯದ ಮಟ್ಟದ ಕೆಲಸ ಮಾಡುವುದೇ ದಿಶಾ ಸಮಿತಿ ಸದಸ್ಯತ್ವದ ಹೊಣೆಗಾರಿಕೆ ಅನ್ನಿಸುತ್ತಿದೆ ಸಾರ್’

 ನನ್ನ ಆತ್ಮೀಯ ಸ್ನೇಹಿತನೊಬ್ಬರೂ ಅಧಿಕಾರ ಇದ್ದಾಗಲೂ ಮಾಸ್ಟರ್ ಪ್ಲಾನ್, ಅಧಿಕಾರ ಇಲ್ಲದಿದ್ದಾಗಲೂ ಮಾಸ್ಟರ್ ಪ್ಲಾನ್ ನಿಮ್ಮ ಜೀವಮಾನವೆಲ್ಲ ಇದೇ ಆಯಿತು, ನಿಮ್ಮ ಯೋಗ್ಯತೆಗೆ ತುಮಕೂರಿನಲ್ಲಿ  ವಾಸಕ್ಕೆ ಒಂದು ಮನೆ ಮಾಡಲು ಆಗಲಿಲ್ಲ, ಸುಮಾರು 25 ವರ್ಷಗಳ ಕಾಲ ತುಮಕೂರಿನಲ್ಲಿ ವಾಸವಿದ್ದೀರಿ, ಎಂಪಿ. ಎಂಎಲ್‌ಎ, ಕೆಲವು ಸಚಿವರು ಸೇರಿದಂತೆ ಎಲ್ಲರ ಜೊತೆಯಲ್ಲೂ ಚೆನ್ನಾಗಿದ್ದೀರಿ ಎಂದು ಚುಡಾಯಿಸಿದರು, ನನಗೆ ಸಿಟ್ಟು ಬಂದು ಅವರಿಗೆ ಹೊಡೆದು ಬಂದೆ. ಇದೂ ನಡೆದು ಸುಮಾರು ಆರು ತಿಂಗಳಾಯಿತು. ಅಂದಿನಿಂದ ಅವರ ಮುಖ ನೋಡಿಲ್ಲ ಸಾರ್.

THATHA ACHAR, RAMAMURTHY, SATHYANAND & KUNDARNAHALLI RAMESH.

 ಅವರ ಮತ್ತು ಅಂಥಹವರ ಸಲಹೆಯೂ ಅಗತ್ಯ ಎಂಬ ಅರಿವು ಈಗ ನನಗೆ ಆಗಿದೆ. ಕೊರೊನಾ ಮಹಾಮಾರಿಯ ಲಾಕ್‌ಡೌನ್ ವೇಳೆ ನನಗೆ ಜ್ಞಾನೋದಯವೂ ಆಗಿದೆ, ಆತ್ಮಾವಲೋಕನವನ್ನು ಮಾಡಿಕೊಂಡಿದ್ದೇನೆ.  ಪ್ರಪಂಚದ ಅರಿವೂ ಆಗಿದೆ, ಎಲ್ಲವೂ ಸಮತೋಲನವಾಗಿದ್ದರೇ ಮಾತ್ರ ಪರಿಪೂರ್ಣ ಜೀವನ ಸಾರ್ ಇದಕ್ಕೆ ನಿಮ್ಮ ಸಲಹೆಯೂ ಬೇಕು.

 ಆದರೂ ಪರವಾಗಿಲ್ಲ 2022 ನೇ ವೇಳೆಗೆ ದೇಶದ ಪ್ರಧಾನಿಗಳಾದ ಶ್ರೀ ನರೇಂದ್ರಮೋದಿಜಿಯವರು ರಾಜ್ಯ ದಿಶಾ ಸಮಿತಿ ಮತ್ತು ತುಮಕೂರು ಜಿಲ್ಲಾ ದಿಶಾ ಸಮಿತಿ ಬಗ್ಗೆ ಮಾತನಾಡಲೇ ಬೇಕು ಎಂಬ ಹಠ ನನ್ನದಾಗಿದೆ ಸಾರ್, ಪಲಿತಾಂಶವನ್ನು ಕಾದು ನೋಡೋಣ? ಅಂದು ಕೊಂಡಿದ್ದೇಲ್ಲಾ ಆದರೇ—-???’

ಎಂಬ ಮಾಹಿತಿಯನ್ನು ಶ್ರೀ ತಾತಾಚಾರ್‌ರವರಿಗೆ ಹೇಳುವ ಮೂಲಕ ನಿಮಗಿದು ಗೊತ್ತೆ?’ ಈ ಪೇಪರ್ ಓದುಗರಿಗೂ ಹಂಚಿಕೊಂಡಿದ್ದೇನೆ.

 ಶ್ರೀ ತಾತಾಚಾರ್‌ರವರು  ನನಗಂತೂ ಯಾವುದೇ ಆರ್ಥಿಕ ನೆರವಿನ ಅಗತ್ಯವಿಲ್ಲ, ನಮ್ಮಂಥಹ ಅಭಿವೃದ್ಧಿ ಪರವಾದ ಸಾವಿರಾರು ಜನರು ಈ ರಾಜ್ಯದಲ್ಲಿ ಇದ್ದಾರೆ, ಅವರೆಲ್ಲರ ಸಹಕಾರ, ಅನುಭವ ಪಡೆಯಿರಿ, ಶಕ್ತಿಪೀಠ ಫೌಂಡೇಷನ್ ಅವರೆಲ್ಲರ ಒಂದು ವೇದಿಕೆಯಾಗಲಿ. 108 ಶಕ್ತಿದೇವತೆಗಳು ನಿಮ್ಮ ಕನಸನ್ನು ನನಸು ಮಾಡಲಿದ್ದಾರೆ. ನಾನೂ ನಿಮ್ಮ ಜೊತೆ ಇರುತ್ತೇನೆ, ಇನ್ನೊಂದು ದಿವಸ ನಿಮ್ಮ ಶಕ್ತಿಪೀಠ ಕ್ಯಾಂಪಸ್‌ಗೆ ಬರುತ್ತೇನೆ ಎಂಬ ಹಿತವಚನ ನೀಡಿದರು.

ನಾನು ಇದೂವರೆಗೂ ಬರೆದ ಅಭಿವೃದ್ಧಿ ಪರವಾದ ಎಲ್ಲಾ ಕಿರು ಹೊತ್ತಿಗೆಗಳನ್ನು ಅವರಿಗೆ ನೀಡಿ ಗೌರವಿಸಲಾಯಿತು.