27th December 2024
Share

TUMAKURU:SHAKTHIPEETA FOUNDATION

 ಶಕ್ತಿಪೀಠ ಫೌಂಡೇಷನ್ ಪಿಪಿಪಿ ಮಾದರಿಯಲ್ಲಿ ಆರಂಭಿಸಲು ಉದ್ದೇಶಿಸಿರುವ ದಿಶಾ ಡೇಟಾ ಪಾರ್ಕ್’ ಕಚೇರಿಗಳನ್ನು ದೇಶದ ವಿವಿಧ ಕಡೆಗಳಲ್ಲಿ ಕಾರ್ಯಾರಂಭ ಮಾಡಲು ಚಿಂತನೆ ನಡೆಸಿದೆ. 2020 ರ ಶರದ್ ನವರಾತ್ರಿಯ ನವದುರ್ಗಾ ಮಾತೆಯರ ಪೂಜೆಯ ಅವಧಿಯಲ್ಲಿ ಕಚೇರಿ ಆರಂಭ ಮತ್ತು ವಿವಿಧ ಯೋಜನೆಯ ಶುಬಾರಂಭ ಮಾಡಲಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

  1. ಪ್ರಧಾನ ಕಚೇರಿ: ಕರ್ನಾಟಕ ರಾಜ್ಯದ, ತುಮಕೂರು ಜಿಲ್ಲೆಯ, ಗುಬ್ಬಿ ತಾಲ್ಲೂಕಿನ, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದರನಹಳ್ಳಿಯಲ್ಲಿ ಕಾರ್ಯಾರಂಭ ಮಾಡಲಿದೆ.
  2. ಆಡಳಿತ ಕಚೇರಿ: ಕರ್ನಾಟಕ ರಾಜ್ಯದ, ತುಮಕೂರು ನಗರದ ಜಯನಗರ ಪೂರ್ವದಲ್ಲಿ ಕಾರ್ಯಾರಂಭ ಮಾಡಲಿದೆ.
  3. ಹಿರಿಯೂರು ಕ್ಯಾಂಪಸ್: ಕರ್ನಾಟಕ ರಾಜ್ಯದ, ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಕೆ.ಆರ್.ಹಳ್ಳಿ ಗ್ರಾಮಪಂಚಾಯಿತಿಯ ವಡ್ಡನಹಳ್ಳಿ ಪಕ್ಕದಲ್ಲಿನ ಬಗ್ಗನಡು ಕಾವಲ್‌ನಲ್ಲಿ ಕಾರ್ಯಾರಂಭ ಮಾಡಲಿದೆ.
  4. ಬೆಂಗಳೂರು ಬ್ರ್ಯಾಂಚ್: ಆರಂಭದಲ್ಲಿ ಕರ್ನಾಟಕ ರಾಜ್ಯದ, ಬೆಂಗಳೂರಿನ ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಉಳಿಯುವ ಸ್ಥಳ.
  5. ದೆಹಲಿ ಬ್ರ್ಯಾಂಚ್: ಆರಂಭದಲ್ಲಿ ದೆಹಲಿಯ ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಉಳಿಯುವ ಸ್ಥಳ.
  6. ತುಮಕೂರು ನಿಮ್ಜ್ ಬ್ರ್ಯಾಂಚ್: ಕರ್ನಾಟಕ ರಾಜ್ಯದ, ತುಮಕೂರು ಜಿಲ್ಲೆಯ ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲಿದೆ.
  7. ಮೊಬೈಲ್ ಕಚೇರಿ: ಹೈಟೆಕ್ ಬಸ್‌ನಲ್ಲಿ ಮೊಬೈಲ್ ಕಚೇರಿ ಆರಂಭಿಸಲು ಚಿಂತನೆ.
  8. ದಿಶಾ ಕ್ಯಾಬಿನೆಟ್: ಕೇಂದ್ರ ಸರ್ಕಾರ ರೂಪಿಸಿರುವ ದಿಶಾ ಮಾರ್ಗಸೂಚಿಯ ಪ್ರಕಾರ ಒಂದೊಂದು ಯೋಜನೆಗೂ ಒಂದೊಂದು ವಿಷನ್ ಗ್ರೂಫ್ ಮತ್ತು ಪ್ರಷರ್ ಗ್ರೂಪ್ ಕಾರ್ಯಾರಂಭ ಮಾಡಲಿದೆ.
  9. ಶಕ್ತಿಪೀಠ ಫ್ಯಾಮಿಲಿ: ವರ್ಷದ 365 ದಿವಸವೂ ಶಕ್ತಿಪೀಠ ಕ್ಯಾಂಪಸ್ ಪೂಜೆಯ ಹೊಣೆಗಾರಿಕೆ ಹೊರುವ ಕುಟುಂಬಗಳ ತಂಡದ ಶುಭಾರಂಭ.

ದಿನಾಂಕ:10.11.2017 ರಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಬಿಡುಗಡೆ ಮಾಡಿದ ವಿಷನ್ ಡಾಕ್ಯುಮೆಂಟ್‌ನಲ್ಲಿ ಎಲ್ಲ ಮಾಹಿತಿಯೂ ಲಭ್ಯವಿದೆ. ಎಲ್ಲಾ ಕಚೇರಿಗಳ ವ್ಯವಹಾರವನ್ನು ಪಿಪಿಪಿ ಮಾದರಿಯಲ್ಲಿ ಆರಂಭಿಸಲಾಗುವುದು. 

ಆಸಕ್ತರು ನೋಂದಾಯಿಸಿಕೊಳ್ಳಬಹುದು.