TUMAKURU:SHAKTHIPEETA FOUNDATION
ಶಕ್ತಿಪೀಠ ಫೌಂಡೇಷನ್ ಪಿಪಿಪಿ ಮಾದರಿಯಲ್ಲಿ ಆರಂಭಿಸಲು ಉದ್ದೇಶಿಸಿರುವ ’ದಿಶಾ ಡೇಟಾ ಪಾರ್ಕ್’ನ ಮೊದಲನೇ ಸುತ್ತಿನಲ್ಲಿ ಕೈಗೊಳ್ಳುವ ವಿವಿಧ ಯೋಜನೆಗಳನ್ನು 2020 ರ ಶರದ್ ನವರಾತ್ರಿಯ ನವದುರ್ಗಾ ಮಾತೆಯರ ಪೂಜೆಯೊಂದಿಗೆ ಶುಭಾರಂಭ ಮಾಡಲಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪಿಪಿಪಿ ಮಾದರಿಯಲ್ಲಿ ’ದಿಶಾ ಡೇಟಾ ಪಾರ್ಕ್’ ಪ್ರಸ್ತಾವನೆ ಸಲ್ಲಿಸುವ ವೇಳೆಗೆ ನಮ್ಮ ಸಂಸ್ಥೆಯ ಧ್ಯೇಯೋದ್ದೇಶಗಳ ಮಾದರಿ ಯೋಜನೆಯ ಆರಂಭದ ಅನುಭವಗಳೊಂದಿಗೆ ಮನವಿ ಸಲ್ಲಿಸಲು ಉದ್ದೇಶಿಸಲಾಗಿದೆ.
ಶಕ್ತಿಪೀಠ ಫೌಂಡೇಷನ್ ‘ಹಳ್ಳಿಯಿಂದ- ದೆಹಲಿ’ ವರೆಗೂ ಅಧ್ಯಯನ ಮಾಡಲು ಉದ್ದೇಶಿಸಿರುವ 9 ಯೋಜನೆಗಳಿಗೆ ವಿಷನ್ ಮತ್ತು ಪ್ರಷರ್ ಗ್ರೂಪ್ ರಚಿಸಲು ಸಂಚಾಲಕರನ್ನು ನೇಮಕ ಮಾಡಲು ಉದ್ದೇಶಿಸಲಾಗಿದೆ. ಅವರುಗಳೊಂದಿಗೆ ಸಮಾಲೋಚನೆ ನಡೆಸಿ ಅಂತಿಮವಾಗಿ ಪಟ್ಟಿಯನ್ನು ಘೋಶಿಸಲಾಗುವುದು.
ಅವರ ಜೊತೆಗೆ ಅವರು ಇಚ್ಚಿಸುವ ಒಂದು ತಂಡ ರಚಿಸಲು ಮನವಿ ಮಾಡಲಾಗಿದೆ. ತಂಡ ರಚಿಸಲು ಇಷ್ಟವಿಲ್ಲದಿದ್ದರೆ ಒಬ್ಬರೇ ವರದಿ ಸಲ್ಲಿಸ ಬಹುದು. ಎಲ್ಲಾ ಸಂಚಾಲಕರಿಗೂ ಎರಡು ದಿವಸಗಳಲ್ಲಿ ಒಪ್ಪಿಗೆ ಪತ್ರ ಸೂಚಿಸಲು ಬಹಿರಂಗ ಮನವಿ ಮಾಡಲಾಗಿದೆ.
- ಕುಂದರನಹಳ್ಳಿ ಪ್ರಧಾನ ಕಚೇರಿ: ಮಾರಶೆಟ್ಟಿಹಳ್ಳಿ ಸಂಸದರ ಆದರ್ಶ ಗ್ರಾಮ ಫೈಲಟ್ ಯೋಜನೆ – ಶ್ರೀ ಹನುಮಂತಯ್ಯ.
- ತುಮಕೂರು ಆಡಳಿತ ಕಚೇರಿ: ತುಮಕೂರು ನಗರದ ಪ್ರತಿಯೊಂದು ಇಲಾಖೆಯ/ಯೋಜನೆಯ ಜಿಐಎಸ್ ಲೇಯರ್‍ಸ್ ಫೈಲಟ್ ಯೋಜನೆ – ಶ್ರೀ ಸತ್ಯಾನಂದ್.
- ಹಿರಿಯೂರು ಕ್ಯಾಂಪಸ್: ತುಮಕೂರು ಜಿಲ್ಲೆಯ ಜಲಶಕ್ತಿ ಫೈಲಟ್ ಯೋಜನೆ- ಶ್ರೀ ಹೆಚ್.ಎನ್. ಮಲ್ಲೇಶ್, ಶ್ರೀ ಜಯರಾಮಯ್ಯ.
- ಬೆಂಗಳೂರು ಬ್ರ್ಯಾಂಚ್: ದಿಶಾ ಮಾರ್ಗಸೂಚಿ ಪ್ರಕಾರ ಎಲ್ಲಾ ಇಲಾಖಾವಾರು ಯೋಜನೆಗಳ ಪಟ್ಟಿ- ಶ್ರೀ ಚಂದ್ರಮೋಹನ್.
- ದೆಹಲಿ ಬ್ರ್ಯಾಂಚ್: ದೇಶದ ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಉತ್ತಮವಾದ ದಿಶಾ ಸಮಿತಿಗಳ ಅಧ್ಯಯನ – ಶ್ರೀ ಮುರಳಿಧರ್ ನಾಯಕ್.
- ತುಮಕೂರು ನಿಮ್ಜ್ ಬ್ರ್ಯಾಂಚ್: ಇನ್‌ವೆಸ್ಟ್ ತುಮಕೂರು ಫೈಲಟ್ ಯೋಜನೆ – ಶ್ರೀ ಪ್ರಮೋದ್.
- ಮೊಬೈಲ್ ಕಚೇರಿ: ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ವ್ಯಾಪ್ತಿಯ 71 ಗ್ರಾಮಗಳಲ್ಲಿ ವಿಲೇಜ್-1 ಫೈಲಟ್ ಯೋಜನೆ- ಶ್ರೀ ಹರೀಶ್ ಮತ್ತು ಶ್ರೀನಿವಾಸ್.
- ದಿಶಾ ಕ್ಯಾಬಿನೆಟ್: ಕೇಂದ್ರ ಸರ್ಕಾರ ರೂಪಿಸಿರುವ ದಿಶಾ ಮಾರ್ಗಸೂಚಿಯ ಪ್ರಕಾರ ಒಂದೊಂದು ಯೋಜನೆಗೂ ಒಂದೊಂದು ವಿಷನ್ ಗ್ರೂಫ್ ಮತ್ತು ಪ್ರಷರ್ ಗ್ರೂಪ್ ರಚನೆ ಫೈಲಟ್ ಯೋಜನೆ- ಶ್ರೀ ಟಿ.ಆರ್.ರಘೋತ್ತಮರಾವ್.
- ಶಕ್ತಿಪೀಠ ಫ್ಯಾಮಿಲಿ: 108 ಶಕ್ತಿಪೀಠಗಳ ಸ್ಥಳಗಳ ಜಿಐಎಸ್ ಲೇಯರ್ – ಶ್ರೀ ಎಲ್.ಕೆ.ಅಶೋಕ್ ಹಾಗೂ ಶಕ್ತಿಪೀಠ ಮತ್ತು ನದಿಗಳ ಸಂಭಂದ ಫೈಲಟ್ ಯೋಜನೆ – ಶ್ರೀ ಹರೀಶ್.
ವಿವಿಧ ಯೋಜನೆಗಳ ವಿಷನ್ ಮತ್ತು ಪ್ರಷರ್ ಗ್ರೂಪ್ ಸಮಿತಿಗಳಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಇರುವವರು ನೋಂದಾಯಿಸಿಕೊಳ್ಳಬಹುದು. ಸಮಿತಿಯ ಕಾರ್ಯವೈಖರಿಯ ರೂಪುರೇಷೆಗಳನ್ನು ಶೀಘ್ರವಾಗಿ ಪ್ರಕಟಿಸಲಾಗುವುದು.
ಈ ಪಟ್ಟಿಯನ್ನು ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿರುವ ಕರ್ನಾಟಕ ರಾಜ್ಯ ದಿಶಾ ಸಮಿತಿಯಲ್ಲಿಟ್ಟು ಚರ್ಚಿಸಲು ಉದ್ದೇಶಿಸಲಾಗಿದೆ.