22nd December 2024
Share



TUMAKURU:SHAKTHIPEETA FOUNDATION

ದಿನಾಂಕ:16.10.2020 ನೇ ಶುಕ್ರವಾರ ತುಮಕೂರು ನಗರದ ಚಿರಂತನ ಧ್ಯಾನಮಂದಿರದಲ್ಲಿ ನಡೆದ ಶಕ್ತಿಪೀಠ ಫೌಂಡೇಷನ್ ಸಭೆಯಲ್ಲಿ  ಕುಂದರನಹಳ್ಳಿ ರಮೇಶ್, ಟಿ.ಆರ್.ರಘೋತ್ತಮರಾವ್, ಸತ್ಯಾನಂದ್, ಪ್ರಮೋದ್, ಭರತ್‌ಕುಮಾರ್ ಮತ್ತು ಸಾಗರ್ ಭಾಗವಹಿಸಿ  DISHA DASHBOARD    ಅಧ್ಯಯನ ಮಾಡಿ ವರದಿ ನೀಡಲು  VISION   & PRESSURE GROUP ರಚಿಸಲು  ನಿರ್ಣಯ ಮಾಡಲಾಯಿತು.

  1. ಕೇಂದ್ರ ಸರ್ಕಾರ ರಚಿಸಿರುವ  DISHA DASHBOARD  ನಲ್ಲಿ ಏನಿದೆ.
  2.  DISHA DASHBOARD  ನಲ್ಲಿ ಯಾವ ರಾಜ್ಯಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ.
  3. ಯಾವ ರಾಜ್ಯಗಳು ಪ್ರತ್ಯೇಕವಾಗಿ  ಆಯಾ ರಾಜ್ಯಕ್ಕೆ  DISHA DASHBOARD  ರಚಿಸಿವೆ.
  4. ಜಿಲ್ಲಾ ಮಟ್ಟದ ದಿಶಾ ಸಮಿತಿ ಅಧ್ಯಕ್ಷರಾದ ಲೋಕಸಭಾ ಸದಸ್ಯರು  DISHA DASHBOARD  ನ್ನು ಯಾವ ರೀತಿ ಬಳಸಬಹುದು.  
  5. ರಾಜ್ಯ ಮಟ್ಟದ ನಾಮನಿರ್ದೇಶಿತ ಸದಸ್ಯರು  DISHA DASHBOARD  ನ್ನು ಯಾವ ರೀತಿ ಬಳಸಬಹುದು.  
  6. ರಾಜ್ಯ ಮಟ್ಟದ ದಿಶಾ ಮತ್ತು 30 ಜಿಲ್ಲಾ ಮಟ್ಟದ ದಿಶಾ ಸಮಿತಿಯ  ನಾಮನಿರ್ದೇಶಿತ ಸದಸ್ಯರ ಸೋಶಿಯಲ್ ಮಿಡಿಯಾ ಗ್ರೂಪ್ ರಚಿಸಿ ಅವರೆಲ್ಲರ ಡಿಜಿಟಲ್ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆಯುವುದು.
  7. ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವ ರೀತಿ ದಿಶಾ ಮಾನಿಟರಿಂಗ್ ಸೆಲ್ ರಚಿಸಿವೆ.
  8. ರಾಜ್ಯದ ಯಾವ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಸಂಪನ್ಮೂಲ ಕೇಂದ್ರಗಳನ್ನು ನಿರ್ಮಾಣ ಮಾಡಿವೆ. ಈ ಕೇಂದ್ರಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ.
  9. ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಪಾಲನಾ ವರದಿ ಪ್ರಗತಿಯ ಬಗ್ಗೆ ಅವಲೋಕನ.

  ರಾಜ್ಯ ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್ ರವರು ಈ ಮೇಲ್ಕಂಡ ಮಾಹಿತಿ ಸಂಗ್ರಹಿಸಲು ರಾಜ್ಯ ದಿಶಾ ಸಮಿತಿಗೆ ಪತ್ರ ಬರೆಯಲು ಸಮಾಲೋಚನೆ ನಡೆಸಲಾಯಿತು. ರಾಜ್ಯ ದಿಶಾ ಸಮಿತಿಗೆ ಬರೆಯುವ ಪ್ರತಿಯೊಂದು ಪತ್ರಗಳು ಮತ್ತು ಪಡೆದ ಉತ್ತರದ ಬಗ್ಗೆಯೂ www.shakthipeeta.in  ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಚರ್ಚಿಸಲಾಯಿತು. 

ಈ ವಿಷನ್‌ಗ್ರೂಪ್‌ನಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಇರುವವರು ನೋಂದಾಯಿಸಿಕೊಳ್ಳ ಬಹುದು.