TUMAKURU:SHAKTHIPEETA FOUNDATION
ದಿನಾಂಕ:16.10.2020 ನೇ ಶುಕ್ರವಾರ ತುಮಕೂರು ನಗರದ ಚಿರಂತನ ಧ್ಯಾನಮಂದಿರದಲ್ಲಿ ನಡೆದ ಶಕ್ತಿಪೀಠ ಫೌಂಡೇಷನ್ ಸಭೆಯಲ್ಲಿ ಕುಂದರನಹಳ್ಳಿ ರಮೇಶ್, ಟಿ.ಆರ್.ರಘೋತ್ತಮರಾವ್, ಸತ್ಯಾನಂದ್, ಪ್ರಮೋದ್, ಭರತ್‌ಕುಮಾರ್ ಮತ್ತು ಸಾಗರ್ ಭಾಗವಹಿಸಿ DISHA DASHBOARD ಅಧ್ಯಯನ ಮಾಡಿ ವರದಿ ನೀಡಲು VISION & PRESSURE GROUP ರಚಿಸಲು ನಿರ್ಣಯ ಮಾಡಲಾಯಿತು.
- ಕೇಂದ್ರ ಸರ್ಕಾರ ರಚಿಸಿರುವ DISHA DASHBOARD ನಲ್ಲಿ ಏನಿದೆ.
- DISHA DASHBOARD ನಲ್ಲಿ ಯಾವ ರಾಜ್ಯಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ.
- ಯಾವ ರಾಜ್ಯಗಳು ಪ್ರತ್ಯೇಕವಾಗಿ ಆಯಾ ರಾಜ್ಯಕ್ಕೆ DISHA DASHBOARD ರಚಿಸಿವೆ.
- ಜಿಲ್ಲಾ ಮಟ್ಟದ ದಿಶಾ ಸಮಿತಿ ಅಧ್ಯಕ್ಷರಾದ ಲೋಕಸಭಾ ಸದಸ್ಯರು DISHA DASHBOARD ನ್ನು ಯಾವ ರೀತಿ ಬಳಸಬಹುದು.
- ರಾಜ್ಯ ಮಟ್ಟದ ನಾಮನಿರ್ದೇಶಿತ ಸದಸ್ಯರು DISHA DASHBOARD ನ್ನು ಯಾವ ರೀತಿ ಬಳಸಬಹುದು.
- ರಾಜ್ಯ ಮಟ್ಟದ ದಿಶಾ ಮತ್ತು 30 ಜಿಲ್ಲಾ ಮಟ್ಟದ ದಿಶಾ ಸಮಿತಿಯ ನಾಮನಿರ್ದೇಶಿತ ಸದಸ್ಯರ ಸೋಶಿಯಲ್ ಮಿಡಿಯಾ ಗ್ರೂಪ್ ರಚಿಸಿ ಅವರೆಲ್ಲರ ಡಿಜಿಟಲ್ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆಯುವುದು.
- ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವ ರೀತಿ ದಿಶಾ ಮಾನಿಟರಿಂಗ್ ಸೆಲ್ ರಚಿಸಿವೆ.
- ರಾಜ್ಯದ ಯಾವ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಸಂಪನ್ಮೂಲ ಕೇಂದ್ರಗಳನ್ನು ನಿರ್ಮಾಣ ಮಾಡಿವೆ. ಈ ಕೇಂದ್ರಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ.
- ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಪಾಲನಾ ವರದಿ ಪ್ರಗತಿಯ ಬಗ್ಗೆ ಅವಲೋಕನ.
ರಾಜ್ಯ ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್ ರವರು ಈ ಮೇಲ್ಕಂಡ ಮಾಹಿತಿ ಸಂಗ್ರಹಿಸಲು ರಾಜ್ಯ ದಿಶಾ ಸಮಿತಿಗೆ ಪತ್ರ ಬರೆಯಲು ಸಮಾಲೋಚನೆ ನಡೆಸಲಾಯಿತು. ರಾಜ್ಯ ದಿಶಾ ಸಮಿತಿಗೆ ಬರೆಯುವ ಪ್ರತಿಯೊಂದು ಪತ್ರಗಳು ಮತ್ತು ಪಡೆದ ಉತ್ತರದ ಬಗ್ಗೆಯೂ www.shakthipeeta.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಚರ್ಚಿಸಲಾಯಿತು.
ಈ ವಿಷನ್‌ಗ್ರೂಪ್‌ನಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಇರುವವರು ನೋಂದಾಯಿಸಿಕೊಳ್ಳ ಬಹುದು.