21st November 2024
Share

TUMAKURU:SHAKTHIPEETA FOUNDATION

ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್.ಘಟಕಕ್ಕೆ ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಸರ್ಕಾರಿ ಜಮೀನ ಮತ್ತು ವಿವಿಧ ವರ್ಗದವರಿಗೆ ಉಳಿದ ಜಮೀನಿನನಲ್ಲಿ ಅಂದು ರೈತರಿಗೆ ನೀಡಿದ ಭರವಸೆಯಂತೆ ನಿವೇಶನ ನೀಡಲು ಪಟ್ಟಿಯನ್ನು ಅಂತಿಮಗೊಳಿಸಲು ಅಧಿಕಾರಿಗಳಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸೂಚಿಸಿದ್ದಾರೆ. 

  1. ಬಗರ್ ಹುಕುಂ ಯೋಜನೆಯಡಿಯಲ್ಲಿ ಉಳುಮೆ ಮಾಡುತ್ತಿದ್ದ ರೈತರು.
  2. ಕಾವಲುದಾರರ ಕುಟುಂಬಗಳ  ರೈತರು.  .
  3. ಹೆಚ್.ಟಿ.ಲೈನ್ ಶಿಫ್ಟ್ ಮಾಡುವಾಗ ಜಮೀನು ಕಳೆದ ಕೊಂಡ ರೈತರು.
  4. ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರುದ್ಯೋಗಿ ಯುವ ಜನಾಂಗ ಸ್ವಯಂ ಉದ್ಯೋಗ ಕೈಗೊಳ್ಳುವವರು.
  5. ಸರ್ಕಾರಿ ನೌಕರರಿಗೆ ನಿವೇಶನ. 
  6. ಸ್ವಯಂ ಉದ್ಯೋಗ ಸೃಷ್ಠಿಸಲು ಜಮೀನಿಗೆ ಅರ್ಜಿ ಹಾಕಿಕೊಂಡಿರುವವರು.
  7. ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ರಾಷ್ಟ್ರೀಯ ಕಾರ್ಯಕ್ರಮದ ಯೋಜನೆಯಡಿ ಕ್ರೀಡಾ ಗ್ರಾಮ ಯೋಜನೆಗೆ ಜಮೀನು.
  8. ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳಲ್ಲೂ ವಿಲೇಜ್-1 ಕಟ್ಟಡ ಹಾಗೂ ಇತರೆ ಸರ್ಕಾರಿ ಯೋಜನೆಗಳಿಗೆ ನಿವೇಶನ.
  9. ನಿವೇಶನ ರಹಿತರಿಗೆ ನಿವೇಶನ.

 ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಸರ್ಕಾರಿ ಜಮೀನಿನನಲ್ಲಿ ಈ ಮೇಲ್ಕಂಡ ಎಲ್ಲಾ ಯೋಜನೆಗಳಿಗೆ ಜಮೀನು ನಿಗದಿ ಪಡಿಸುವ ಕಾರ್ಯ ಭರದಿಂದ ಸಾಗಿದೆ. ಅಧಿಕಾರಿಗಳು ಪಟ್ಟಿಯನ್ನು ಅಂತಿಮಗೊಳಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿಲಿದ್ದಾರೆ. ಆಸಕ್ತರು  ತಮ್ಮ ಅಭಿಪ್ರಾಯಗಳನ್ನು ನೀಡಬಹುದಾಗಿದೆ.