12th September 2024
Share
ನಾನು ಬರೆದು ದಿನಾಂಕ:06.12.2004 ರಂದು ಬಿಡುಗಡೆ ಮಾಡಿದ ’ಜಿ.ಎಸ್.ಪರಮಶಿವಯ್ಯನವರ ಸಮಗ್ರ ನೀರಾವರಿ ಅಭಿವೃದ್ಧಿ ಯೋಜನೆ, ಪುಸ್ತಕದಲ್ಲಿನ ನಕ್ಷೆ ಗಮನಿಸಿ.

TUMAKURU:SHAKTHIPEETA FOUNDATI0N

 ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಇಡೀ ರಾಜ್ಯದ ಸುಮಾರು 20  ಜಿಲ್ಲೆಗಳಿಗೆ ನೀರು ಒದಗಿಸುವ ಯೋಜನೆ ರೂಪಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಬಹುತೇಕ ಇವೆಲ್ಲಾ ರಾಜ್ಯದ ನದಿಜೋಡಣೆ ಯೋಜನೆಗಳೇ?

G.S.PARAMASHIVAIAH

 ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ 7 ವರದಿ ನೀಡಿದ್ದಾರೆ. ನಕ್ಷೆಯಲ್ಲಿ 4 ಯೋಜನೆಗಳ ಮಾಹಿತಿ ಇದೆ. ಅವರ ಯೋಜನೆಗಳನ್ನು ಕೃತಿಚೌರ್ಯ ಮಾಡಿ, ಬೇರೆ ಬೇರೆ ಯೋಜನೆ ಹೆಸರಲ್ಲಿ ಯೋಜನೆ ರೂಪಿಸಲು ಹಲವಾರು ಜನ ಚಿಂತನೆ ನಡೆಸುತ್ತಾ ಬಂದಿದ್ದಾರೆ. ಅದು ಸಹಜ ಪ್ರಕ್ರೀಯೇಯಂತಾಗಿದೆ?

 ಪ್ರಸ್ತುತ ಅಂದು ಅವರು ರೂಪಿಸಿದ್ದ 1 ನೇ ಯೋಜನೆಯ ಕೆಲವು ಭಾಗವೇ ಎತ್ತಿನಹೊಳೆ ಯೋಜನೆ. ಅವರು ಮಾಡಿರುವ ಸರ್ವೀಸ್ ಕೆನಾಲ್ ಬಹುತೇಕ ಅದೇ ಆಗಿದೆ. ಅಲ್ಪ-ಸ್ವಲ್ಪ ಬದಲಾಗಿದ್ದಲ್ಲಿ ಎಲ್ಲಿ ಏಕೆ ಬದಲಾಗಿದೆ ಎಂಬುದರ ಬಗ್ಗೆ ಇಲಾಖೆಯಿಂದ ಮಾಹಿತಿ ಪಡೆಯಲು ಚಿಂತನೆ ನಡೆಸಿದ್ದೇನೆ. ಹೆಡ್‌ವರ್ಕ್ಸ್ ಮಾತ್ರ ಬದಲಾಗಿದೆ. ಗಾರ್ಲೆಂಡ್ ಕೆನಾಲ್‌ಗೆ ಬದಲಾಗಿ ಲಿಪ್ಟ್ ಮಾಡಲಾಗಿದೆ.

 ಎತ್ತಿನಹೊಳೆ ಯೋಜನೆ ರಾಜ್ಯದ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ/ನೇತ್ರಾವತಿ ನದಿ ಪಾತ್ರ. ಕಾವೇರಿ ನದಿ ಪಾತ್ರ, ಕೃಷ್ಣಾ ನದಿಪಾತ್ರ, ಉತ್ತರ ಪೆನ್ನಾರ್ ನದಿಪಾತ್ರ, ದಕ್ಷಿಣ ಪೆನ್ನಾರ್ ನದಿಪಾತ್ರ ಮತ್ತು ಪಾಲಾರ್ ನದಿ ಪಾತ್ರ ಸೇರಿದಂತೆ ಆರು ನದಿಪಾತ್ರಗಳ ಜೋಡಣೆ ಯೋಜನೆ ಅಲ್ಲವೇ’

  ಮತ್ತೇ ಏಕೆ? ರಾಜ್ಯದ ನದಿ ಜೋಡಣೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಈವರೆಗೂ ಮಂಜೂರು ಮಾಡಿಸಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ಮತ್ತು ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಸಹ ಇದರ ಬಗ್ಗೆ ಗಂಭೀರ ಚರ್ಚೆ ಆರಂಭಿಸಬೇಕಿದೆ. ರಾಜ್ಯದ ನೀರಾವರಿ ಪರಿಣಿತರು, ಚಿಂತಕರು, ಹೋರಾಟಗಾರರು ಸಹ ವಿಶೇಷ ಗಮನಹರಿಸುವುದು ಅಗತ್ಯವಾಗಿದೆ.

  ಕುಡಿಯುವ ನೀರಿನ ಯೋಜನೆಯಾಗಲಿ, ನೀರಾವರಿ ಯೋಜನೆಯಾಗಲಿ ಒಂದು ನದಿ ಪಾತ್ರದಿಂದ ಇನ್ನೊಂದು ನದಿ ಪಾತ್ರಕ್ಕೆ ನೀರು ಹರಿಸುವುದೇ ನದಿ ಜೋಡಣೆ. ಇದು ಒಂದು ರಾಜ್ಯದ ವ್ಯಾಪ್ತಿಯಲ್ಲಾಗಲಿ ಅಥವಾ ಅಂತರ ರಾಜ್ಯದ ಮಟ್ಟದಲ್ಲಾಗಲಿ  ನದಿ ಜೋಡಣೆ ಎಂದೇ ಕರೆಯಬೇಕು’ ಇದರ ಬಗ್ಗೆ ಸ್ಪಷ್ಟನೆ ನೀಡುವರು ಯಾರು?

 ಪರಮಶಿವಯ್ಯನವರ ಬಹುತೇಕ ಎಲ್ಲಾ ವರದಿಗಳ ಮಾಹಿತಿಯನ್ನು ಬೆಂಗಳೂರಿನ ಇಐ ಟೆಕ್ನಲಾಜಿಯ ಶ್ರೀ ಎನ್.ರಂಗನಾಥ್‌ರವರು ಸಂಗ್ರಹಿಸಿ ಸೇಫ್ ಆಗಿ ಇಟ್ಟಿದ್ದಾರೆ ಎಂಬ ಭಾವನೆ ನನ್ನದಾಗಿದೆ. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಸಲಹೆಯಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿರುವ ವಿವಿಧ ವರದಿಗಳನ್ನು ಸಂಗ್ರಹಸಿ ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅವರಿಗೆ ನೀಡಿದೆ.

 ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯಲ್ಲಿರುವ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ನಿರ್ಣಯದಂತೆ ಪ್ರಸ್ತುತ  ರಾಜ್ಯದ ನದಿಜೋಡಣೆ ಬಗ್ಗೆ ಶ್ರೀ ಎನ್.ರಂಗನಾಥ್‌ರವರೇ ಎಲ್ಲಾ ವರದಿಗಳನ್ನು ಕ್ರೋಢಿಕರಿಸಿ ಕಾಲ್ಪನಿಕ ವರದಿಯನ್ನು ಸಿದ್ಧಪಡಿಸಿ ನೀಡಿದ್ದಾರೆ. ಜೊತೆಗೆ ಈ ಎಲ್ಲಾ ವರದಿಗಳ ಅಧ್ಯಯನ ಆರಂಭಿಸಿದ್ದಾರೆ.

 ಈ ಯೋಜನೆಗಳ ಬಗ್ಗೆ ವಿವರವಾಗಿ ಬರೆಯಲಿದ್ದೇನೆ. ಬರೆಯುವ ಮುನ್ನ ನಾನು ಸಹ ಶ್ರೀ ಎನ್.ರಂಗನಾಥ್‌ರವರ ಟೀಮ್ ಜೊತೆ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಲು ಯೋಚಿಸಿದ್ದೇನೆ. ಈ ಬಗ್ಗೆ ಒಂದೆರಡು ದಿವಸದಲ್ಲಿ ಸಭೆ ನಡೆಸಲು ಯೋಚಿಸಿದ್ದೇವೆ.

  ಕಾವೇರಿ ನಿರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್‌ರವರು ಮತ್ತು ಅವರ ತಂಡ ಪರಿಶೀಲಿಸಿ, ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ರಾಕೇಶ್‌ಸಿಂಗ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಂದ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಈಗಾಗಲೇ ಪತ್ರ ಬರೆದು ರಾಜ್ಯದ ನದಿಜೋಡಣೆ ರೂಪಿಸಲು ಮನವಿ ಮಾಡಿದ್ದಾರೆ.

 ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಯಾರು ಡಿಪಿಆರ್ ಮಾಡಬೇಕೆನ್ನುವುದು ಗೊಂದಲದಲ್ಲಿದೆ. ಏಕೆಂದರೆ ಪ್ರಧಾನಿಯವರಿಂದ ಈವರೆಗೂ ಯಾವುದೇ ಉತ್ತರ ಬಂದಿಲ್ಲ. ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು ಗಟ್ಟಿ ನಿರ್ಧಾರ ಕೈಗೊಳ್ಳುವುದು ಸೂಕ್ತವಾಗಿದೆ. ಕಳೆದ 2020-2021 ನೇ ಆಯವ್ಯಯದಲ್ಲಿ ಈಗಾಗಲೇ ವಿಷಯ ಬಂದಿರುವುದರಿಂದ ಹಣಕಾಸಿಗೆ ಯಾವುದೇ ಅಡಚಣೆಯಾಗುವುದಿಲ್ಲ’

 ಅಲ್ಲದೇ ಕೇಂದ್ರ ಸರ್ಕಾರದ ನೀತಿ ಆಯೋಗದ ಮನವಿ ಮೇರೆಗೆ ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿರಜನೀಶ್‌ರವರು, ಮಾನ್ಯ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ವಿಜಯಭಾಸ್ಕರ್‌ರವರ ಅನುಮತಿ ಮೇರೆಗೆ ಈ ಯೋಜನೆಯನ್ನು ಕೇಂದ್ರ ಸರ್ಕಾರದ ಪೋರ್ಟಲ್‌ನಲ್ಲಿ ಈಗಾಗಲೇ ಅಫ್‌ಲೋಡ್ ಮಾಡಿದ್ದಾರೆ.

 ಈ ಹಾಳಾದ ಕೊರೊನಾ ಮಹಾಮಾರಿಯಿಂದ ಎಲ್ಲಾ ವಿಳಂಭವಾಗಿದೆ. ಸಚಿವರು ರಾಜ್ಯದ 30 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪರಿಣಿತರ ಮತ್ತು ಚುನಾಯಿತ ಜನಪ್ರತಿನಿಧಿಗಳ ಸಲಹೆಗಳನ್ನು ಪಡೆಯುವುದು ಅಗತ್ಯವಾಗಿದೆ. ರಾಜ್ಯ ಜಲ ಸಂಪನ್ಮೂಲ ಕಾರ್ಯದರ್ಶಿರವರಾದ ಶ್ರೀ ಅನಿಲ್‌ಕುಮಾರ್‌ರವರು ಶೀಘ್ರವಾಗಿ ಸಚಿವರ ಗನಮಕ್ಕೆ ತಂದು ಡಿಪಿಆರ್ ಮಾಡಲು ಚಾಲನೆ ನೀಡುವುದಾಗಿ ಶ್ರೀ ಜಿ.ಎಸ್.ಬಸವರಾಜ್ ರವರಿಗೆ ತಿಳಿಸಿದ್ದಾರೆ.

 ಇದೇ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನೆಯನ್ನು ರಾಜ್ಯದ ನದಿಜೋಡಣೆಯ ಫೈಲೆಟ್ ಪ್ರಾಜೆಕ್ಟ್ ಆಗಿ ತೆಗೆದುಕೊಳ್ಳಲು ಇನ್ನೊಮ್ಮೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ. ನಂತರ ರಾಜ್ಯದ 40 ಜನ ಸಂಸದರು ಮತ್ತು ರಾಜ್ಯ ಪ್ರತಿನಿಧಿಸುವ ಸಚಿವರು ಮಾನ್ಯ ಪ್ರಧಾನ ಮಂತ್ರಿಯವರ ಬಳಿ ಮಾನ್ಯ ಮುಖ್ಯ ಮಂತ್ರಿಗಳ ನೇತ್ರತ್ವದಲ್ಲಿ ಸರ್ವಪಕ್ಷಗಳ ನಿಯೋಗ ತೆರಳುವ ಕೆಲಸ ಆಗಬೇಕಿದೆ.

 ‘ಈಗಾಗಲೇ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎನ್.ಲಕ್ಷ್ಮಣರಾವ್ ಪೇಶ್ವೆರವರು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆ ರವರ ಅಧ್ಯಕ್ಷತೆಯಲ್ಲಿ ನಡೆಸಿದ ಸಭೆಯ ಪಲಿತಾಂಶವೇನು? ಮಾನ್ಯ ಶ್ರೀ ರುದ್ರಯ್ಯನವರೇ ಮೌನ ಸರಿಯಲ್ಲ, ಸಚಿವರ ಗಮನಕ್ಕೆ ದಯವಿಟ್ಟು ತನ್ನಿ. ಅಧಿಕಾರದ ಅವಧಿ ಪ್ರತಿದಿವಸವೂ ಮೈನಸ್ ಆಗುತ್ತಿದೆ’